ತೆಲಂಗಾಣ: ʻಭಾರತ್ ಜೋಡೋ ಯಾತ್ರೆʼ ಈಗ ತೆಲಂಗಾಣದಲ್ಲಿದೆ. ಯಾತ್ರೆಯ ನೇತೃತ್ವ ವಹಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವಗೆ ಹಲವರು ಸಾಥ್ ನೀಡುತ್ತಿದ್ದಾರೆ. ಇದರೊಂದಿಗೆ ಶಾಲಾ ಮಕ್ಕಳು ಕೂಡ ಸೇರಿದ್ದಾರೆ.
ಹೌದು, ಇಂದು ಮುಂಜಾನೆ ಭಾರತ್ ಜೋಡೋ ಯಾತ್ರೆ ವೇಳೆ ಶಾಲಾ ಮಕ್ಕಳು ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ್ದಾರೆ. ಈ ವೇಳೆ ಮಕ್ಕಳೊಂದಿಗೆ ರಾಹುಲ್ ರಸ್ತೆ ಮೇಲೆ ರನ್ನಿಂಗ್ ರೇಸ್ ಆಡಿದ್ದಾರೆ.
जब रेस लगाई राहुल गांधी ने…#BharatJodoYatra pic.twitter.com/iJtd3fOcYW
— Congress (@INCIndia) October 30, 2022
ಇದು ಕೆಲವೇ ಕ್ಷಣಗಳಲ್ಲಿ ನಡೆದಿದ್ದು, ಇದರ ಅರಿವಿಲ್ಲದಿದ್ದ ರಾಹುಲ್ ಅವರ ಭದ್ರತಾ ಸಿಬ್ಬಂದಿ, ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರೇವಂತ್ ರೆಡ್ಡಿ ಮತ್ತು ಇತರರು ರಾಹುಲ್ ಅವರ ಹಿಂದೆ ಎದ್ದುಬಿದ್ದು ಓಡಿದ್ದಾರೆ. ಇದರ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
World Savings Day: ಇಂದು ʻವಿಶ್ವ ಉಳಿತಾಯ ದಿನʼ: ನಿಮ್ಮ ಹಣವನ್ನು ಹೆಚ್ಚಿಸಲು ಪ್ರಮುಖ ಸಲಹೆಗಳು ಇಲ್ಲಿವೆ!
ಪುನೀತ್ ರಾಜ್ಕುಮಾರ್ ಪುಣ್ಯ ಸ್ಮರಣೆಯ ದಿನದಂದೇ ಆತ್ಮಹತ್ಯೆ ಮಾಡಿಕೊಂಡ ಅಪ್ಪು ಅಭಿಮಾನಿ