ಕೇರಳ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯು ಕೇರಳದ ಹರಿಪಾದ್ನಿಂದ ಇಂದು ಪುನರಾಂಭಗೊಂಡಿದೆ. ಯಾತ್ರೆಯಲ್ಲಿ ರಾಹುಲ್ ಅವರು ರಸ್ತೆಯ ಇಕ್ಕೆಲಗಳಲ್ಲಿ ಕಾಯುತ್ತಿರುವ ಜನರನ್ನು ಸ್ವಾಗತಿಸುತ್ತ, ಮೆರವಣಿಗೆ ಮಾಡಿದರು.
BIGG NEWS : “ಮಾಜಿ ಸಿಎಂ ಸಿದ್ದರಾಮಯ್ಯ ಇಷ್ಟೋತ್ತಿಗೆ ಜೈಲಿನಲ್ಲಿರಬೇಕಿತ್ತು” ; ಸಚಿವ ಮುನಿರತ್ನ
ಯಾತ್ರೆಯ 11ನೇ ದಿನದ ವೀಡಿಯೋ ಒಂದರಲ್ಲಿ ರಾಹುಲ್ ಅವರು ಬಾಲಕಿಯೊರ್ವಳಿಗೆ ಪಾದರಕ್ಷೆ ತೊಡಿಸಿ ಸಹಾಯ ಮಾಡುತ್ತಿರುವುದು ಕಂಡುಬಂದಿದೆ. ಈ ವಿಡಿಯೋವನ್ನು ಮಹಿಳಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ನೆಟ್ಟಾ ಡಿಸೋಜಾ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಸರಳತೆ ಮತ್ತು ಪ್ರೀತಿ. ದೇಶವನ್ನು ಒಗ್ಗೂಡಿಸಲು ಎರಡೂ ಅಗತ್ಯವಿದೆ ಎಂಎಸ್ ಡಿಸೋಜಾ ಹಿಂದಿಯಲ್ಲಿ ಶೀರ್ಷಿಕೆ ಬರೆದಿದ್ದಾರೆ.
ಕ್ಲಿಪ್ನಲ್ಲಿ, ರಾಹುಲ್ ಗಾಂಧಿಯವರು ಪಕ್ಷದ ಇತರ ಕಾರ್ಯಕರ್ತರು ಮತ್ತು ನಾಯಕರ ಜೊತೆಗೆ ನಡೆದುಕೊಂಡು ಹೋಗುತ್ತಿರುತ್ತಾರೆ. ಇದರ ನಡುವೆ ಥಟ್ಟನೆ ತಮ್ಮ ಮುಂದೆ ಹೋಗುತ್ತಿದ್ದ ಕಾರ್ಯಕರ್ತನನ್ನು ನಿಲ್ಲಿಸಿ ಕೆಳಗೆ ಬಾಗಿ ಪುಟ್ಟ ಬಾಲಕಿಯ ಪಾದರಕ್ಷೆಯನ್ನು ಸರಿ ಮಾಡಲು ಸಹಾಯ ಮಾಡಿರುವುದನ್ನು ನೋಡಬಹುದು.
सादगी और प्रेमभाव 💕
देश को एकजुट रखने के लिये दोनों चाहिए। #BharatJodoYatra 🇮🇳 pic.twitter.com/txkM2AQNYU
— Netta D'Souza (@dnetta) September 18, 2022
ಈ ವಿಡಿಯೋವು ಸಾವಿರಾರು ವೀಕ್ಷಣೆಗಳು ಹಾಗೂ ಕಮೆಂಟ್ಗಳನ್ನು ಪಡೆದಿದೆ. ಅನೇಕ ನೆಟ್ಟಿಗರು ರಾಹುಲ್ ಗಾಂಧಿಯವರ ಅದ್ಭುತ ಗೆಸ್ಚರ್ ಗಾಗಿ ಹೊಗಳಿದ್ದಾರೆ.
ಯಾತ್ರೆಯಲ್ಲಿ ರಮೇಶ್ ಚೆನ್ನಿತ್ತಲ, ಕೆ ಮುರಳೀಧರನ್, ಕೋಡಿಕುನ್ನಿಲ್ ಸುರೇಶ್, ಕೆ ಸಿ ವೇಣುಗೋಪಾಲ್ ಮತ್ತು ವಿರೋಧ ಪಕ್ಷದ ನಾಯಕ ವಿ ಡಿ ಸತೀಶನ್ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಸಾಥ್ ನೀಡಿದರು.