ನಾಗ್ಪುರ: ಮಹಾರಾಷ್ಟ್ರದ ನಾಗ್ಪುರಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿಯ ಅವರನ್ನು ಡ್ರಮ್ಸ್ ಬಾರಿಸುವ ಮೂಲಕ ಸ್ವಾಗತಿಸಲಾಯಿತು. ಈ ವೇಳೆ ಉತ್ಸುಕರಾದ ಮೋದಿ ಅವರು ಸಹ ಕಲಾವಿದರ ಗುಂಪನ್ನು ಸೇರಿ ತಾವೂ ಕೂಡ ಡ್ರಮ್ ಬಾರಿಸಿದ್ದಾರೆ.
ಟ್ವಿಟರ್ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಪ್ರಧಾನಿ ಮೋದಿ ಒಬ್ಬ ಕಲಾವಿದನ ಪಕ್ಕದಲ್ಲಿ ನಿಂತು ಅವನೊಂದಿಗೆ ಅವರೂ ಕೂಡ ಡ್ರಮ್ ಬಾರಿಸುವುದನ್ನು ಕಾಣಬಹುದು.
A traditional welcome in Nagpur, Maharashtra. pic.twitter.com/v1Yw75v1o3
— PMO India (@PMOIndia) December 11, 2022
ನಾಗ್ಪುರ ಮತ್ತು ಬಿಲಾಸ್ಪುರ ನಡುವೆ ಇಂದು ವಂದೇ ಭಾರತ್ ಎಕ್ಸ್ಪ್ರೆಸ್ಗೆ ಪ್ರಧಾನಿ ಮೋದಿ ಚಾಲನೆ ನೀಡಿದರು. ನಾಗ್ಪುರ ಮೆಟ್ರೋ ಮೊದಲ ಹಂತದ ಕಾಮಗಾರಿಗೂ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ. ಪ್ರಧಾನಿ ಮೋದಿ ಅವರು “ನಾಗ್ಪುರ ಮೆಟ್ರೋದಲ್ಲಿ ಆಸಕ್ತಿದಾಯಕ ಸಂವಾದಗಳ” ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ನಾಗ್ಪುರ ಮೆಟ್ರೋ ಹಂತ-II ಗೆ ಪ್ರಧಾನಿ ಮೋದಿ ಅವರು ಶಂಕುಸ್ಥಾಪನೆ ಮಾಡಿದರು ಎಂದು ಪಿಎಂಒ ಹೇಳಿಕೆಯಲ್ಲಿ ತಿಳಿಸಿದೆ. ಸರಣಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಬಳಿಕ ಪ್ರಧಾನಿ ಗೋವಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ.
BIG NEWS: ‘ಮಾಂಡೌಸ್’ ಚಂಡಮಾರುಕ್ಕೆ ಐದು ಮಂದಿ ಬಲಿ, ಸೂರು ಕಳೆದುಕೊಂಡ 10,000 ಜನರಿಗೆ ಆಶ್ರಯ
ಶಾಕಿಂಗ್ ನ್ಯೂಸ್: ವಾಯುವಿಹಾರಕ್ಕೆ ತೆರಳಿದ್ದ 40 ವರ್ಷದ ಮಹಿಳೆಯ ಮೇಲೆ 6 ಬೀದಿನಾಯಿಗಳಿಂದ ದಾಳಿ
BIG NEWS: ‘ಮಾಂಡೌಸ್’ ಚಂಡಮಾರುಕ್ಕೆ ಐದು ಮಂದಿ ಬಲಿ, ಸೂರು ಕಳೆದುಕೊಂಡ 10,000 ಜನರಿಗೆ ಆಶ್ರಯ