ನವದೆಹಲಿ: ಕ್ರೀಡಾ ವೇದಿಕೆಯಲ್ಲಿ ಭಾರತ ಮತ್ತು ಪಾಕಿಸ್ತಾನ ಕದನಗಳು ಅಪರೂಪವಾಗಿದೆ, ಆದರೆ ಉಭಯ ರಾಷ್ಟ್ರಗಳ ಕ್ರೀಡಾಪಟುಗಳು ಪರಸ್ಪರ ಭೇಟಿಯಾದಾಗಲೆಲ್ಲಾ ತೀವ್ರವಾದ ಸ್ಪರ್ಧೆ ಉಂಟಾಗುವುದನ್ನು ನಾವು ಕಾಣಬಹುದಾಗಿದೆ.
ಶನಿವಾರ ನಡೆದ ಕರಾಟೆ ಸ್ಪರ್ಧೆಯಲ್ಲಿ ಭಾರತದ ರಾಣಾ ಸಿಂಗ್ ಮತ್ತು ಪಾಕಿಸ್ತಾನದ ಶಹಜೈಬ್ ರಿಂಧ್ ಪರಸ್ಪರ ಮುಖಾಮುಖಿಯಾದಾಗ ಇದೇ ಸನ್ನಿವೇಶ ಕಂಡು ಬಂದಿದೆ. ಕರಾಟೆ ಸ್ಪರ್ಧೆಯಲ್ಲಿ ತೀವ್ರವಾದ ಹೋರಾಟದಲ್ಲಿ ಪಾಕಿಸ್ತಾನದ ಅಥ್ಲೀಟ್ 2-1 ಅಂತರದಿಂದ ವಿಜಯಶಾಲಿಯಾಗಿ ಹೊರಹೊಮ್ಮಿದರು. ಪಾಕಿಸ್ತಾನದ ರಿಜ್ವಾನ್ ಅಲಿ ಮತ್ತು ಭಾರತದ ಹಿಮಾಂಶು ಕೌಶಿಕ್ ಕ್ರಮವಾಗಿ ಮೊದಲ ಮತ್ತು ಎರಡನೇ ಪಂದ್ಯವನ್ನು ಗೆದ್ದ ನಂತರ ಸ್ಪರ್ಧೆ ಮೂರನೇ ಸುತ್ತಿಗೆ ಹೋಯಿತು.
ಆಟಕ್ಕಿಂತ ಹೆಚ್ಚಾಗಿ, ಶಹಜೈಬ್ ಅವರ ಸನ್ನೆ ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಚರ್ಚೆಯ ವಿಷಯವಾಯಿತು. ಪಾಕಿಸ್ತಾನದ ಅಥ್ಲೀಟ್ ತಮ್ಮ ದೇಶದ ಮತ್ತು ಭಾರತದ ಧ್ವಜಗಳನ್ನು ಹಿಡಿದಿದ್ದವಿಡಿಯೋ ಈಗ ವೈರಲ್ ಆಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶಹಜೈಬ್, “ಈ ಹೋರಾಟ ಶಾಂತಿಗಾಗಿತ್ತು. ನಾವು ಶತ್ರುಗಳಲ್ಲ, ಒಟ್ಟಿಗೆ ಇದ್ದೇವೆ. ಒಟ್ಟಾಗಿ ನಾವು ಏನು ಬೇಕಾದರೂ ಮಾಡಬಹುದು. ಈ ಹೋರಾಟವು ಪಾಕಿಸ್ತಾನ ಮತ್ತು ಭಾರತದ ಸ್ನೇಹಕ್ಕಾಗಿ ಮತ್ತು ಹತ್ತಿರವಾಗಲು” ಎಂದು ಅವರು ಹೇಳಿದರು.
A beautiful and powerful message by Pakistani fighter @RindhShahzaib after his victory over Indian fighter in @KarateCombat #KC45
Pakistan beat India by 2-1 in team competition in Dubai last night.. #ShahzaibRind #KarateCombat #PakvsInd #PakvInd #Unity pic.twitter.com/tCikyDBNrM— Pakistan in Pictures (@Pakistaninpics) April 20, 2024