ಬೆಂಗಳೂರು: ರಾಜ್ಯದ ಜನತೆಯನ್ನು ಉದ್ದೇಶಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರಸಿದ್ಧ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಲೈವ್ ಬರಲಿದ್ದಾರೆ. ಫೆಬ್ರವರಿ.14ರಂದು ಸಂಜೆ.6.45ರಿಂದ ಲೈವ್ ನಲ್ಲಿ ಕುಳಿತು ಮಾತನಾಡಲಿರುವಂತ ಅವರು, ಸಾರ್ವಜನಿಕರು ಕೇಳುವಂತ ಪ್ರಶ್ನೆಗಳಿಗೂ ಉತ್ತರ ನೀಡಲಿದ್ದಾರೆ.
ಈ ಕುರಿತಂತೆ ಸಿಎಂ ಕಚೇರಿಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು ಮುಖ್ಮಮಂತ್ರಿ ಸಿದ್ಧರಾಮಯ್ಯ ಅವರು ಫೆ.14ರಂದು ಸಂಜೆ 6.45ಕ್ಕೆ ಎಕ್ಸ್ ಮಾಧ್ಯಮದ ಮೂಲಕ ನೇರಪ್ರಸಾರದಲ್ಲಿ ಮಾತನಾಡಲಿದ್ದಾರೆ ಎಂಬುದಾಗಿ ತಿಳಿಸಿದೆ.
ಸಿಎಂ ಸಿದ್ಧರಾಮಯ್ಯ ಅವರು ಲೈವ್ ನಲ್ಲಿ ಸಾರ್ವಜನಿಕರು ಕೇಳುವಂತ ಪ್ರಶ್ನೆಗೆ ಉತ್ತರವನ್ನು ನೀಡಲಿದ್ದಾರೆ. ಕೇಂದ್ರ ಸರ್ಕಾರದ ತೆರಿಗೆ ತಾರತಮ್ಯದ ಅಂಶಗಳ ಬಗ್ಗೆಯೂ ಮಾತನಾಡಲಿದ್ದಾರೆ ಎಂಬುದಾಗಿ ಮಾಹಿತಿ ನೀಡಿದೆ.
ತೆರಿಗೆ ಹಂಚಿಕೆ ಬಗ್ಗೆ ಸಾರ್ವಜನಿಕರು ಕೇಳುವಂತ ಪ್ರಶ್ನೆಗಳಿಗೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಉತ್ತರಿಸಲಿದ್ದಾರೆ. ಈ ಮೂಲಕ ಎಕ್ಸ್ ಲೈವ್ ನಲ್ಲಿ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರ ನೀಡಲಿದ್ದಾರೆ ಎಂದು ತಿಳಿಸಿದೆ.
BIG NEWS: ರಾಜ್ಯದ ಸರ್ಕಾರಿ ಕಚೇರಿಯಲ್ಲಿ ‘ಬಸವಣ್ಣ’ನ ಭಾವಚಿತ್ರ ಹಾಕುವುದು ಕಡ್ಡಾಯ – ಸಿಎಂ ಸಿದ್ಧರಾಮಯ್ಯ ಆದೇಶ
ಫೆ.25ರಂದು 1137 ಸಿವಿಲ್ ಪೊಲೀಸ್ ಕಾನ್ ಸ್ಟೇಬಲ್ ಹುದ್ದೆಗೆ ‘ಲಿಖಿತ ಪರೀಕ್ಷೆ’, ಈ ‘ನಿಯಮ’ಗಳ ಪಾಲನೆ ಕಡ್ಡಾಯ