ನವದೆಹಲಿ : ಮಹಾರಾಷ್ಟ್ರದ ಪಾಲ್ಘರ್ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಟಾಟಾ ಸನ್ಸ್ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ನಿಧನರಾದ ನಂತ್ರ ರಸ್ತೆ ಸುರಕ್ಷತೆಯ ವಿಷಯವು ತೀವ್ರಗೊಂಡಿದೆ. ಹಿಂಬದಿ ಸವಾರರು ಸೀಟ್ ಬೆಲ್ಟ್ ಧರಿಸುವುದನ್ನ ಕಡ್ಡಾಯಗೊಳಿಸಬೇಕೆಂದು ತಜ್ಞರು ಸಲಹೆ ನೀಡಿದ್ದೂ, ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಸಹ ಇದಕ್ಕೆ ಒಪ್ಪಿಕೊಂಡಿದ್ದಾರೆ.
ಸಮಾವೇಶವೊಂದರಲ್ಲಿ ಮಾತನಾಡಿದ ಕೇಂದ್ರ ಸಚಿವರು, “ಹಿಂಬದಿ ಸವಾರರಿಗೆ ಬೆಲ್ಟ್ʼಗಳ ಅಗತ್ಯವಿಲ್ಲ ಎಂದು ಜನರು ಭಾವಿಸುತ್ತಾರೆ, ಅದೇ ಸಮಸ್ಯೆ. ಸಾಮಾನ್ಯ ಜನರ ಮನಸ್ಥಿತಿಯನ್ನ ಬದಲಾಯಿಸುವ ಅಗತ್ಯವಿದೆ. ಇನ್ನು ನಾನು ಯಾವುದೇ ಅಪಘಾತದ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ. ಆದರೆ ಮುಂಭಾಗ ಮತ್ತು ಹಿಂಭಾಗದ ಸೀಟರ್ʼಗಳಿಬ್ಬರು ಸೀಟ್ ಬೆಲ್ಟ್ʼಗಳನ್ನು ಧರಿಸಬೇಕಾಗುತ್ತದೆ. ಇನ್ನು ವಾಹನಗಳಲ್ಲಿ 6 ಏರ್ಬ್ಯಾಗ್ಗಳನ್ನ ಕಡ್ಡಾಯಗೊಳಿಸಲಾಗುವುದು” ಎಂದು ಹೇಳಿದರು.
ಇನ್ನು ಈ ಬಗ್ಗೆ ಜಾಗೃತಿ ಮೂಡಿಸಲು ಸಚಿವಾಲಯವು ಬಾಲಿವುಡ್ ತಾರೆಯರು, ಕ್ರಿಕೆಟಿಗರು ಮತ್ತು ಮಾಧ್ಯಮಗಳ ಸಹಾಯವನ್ನ ಪಡೆಯುತ್ತಿದೆ ಎಂದು ಕೇಂದ್ರ ಸಚಿವರು ಹೇಳಿದರು. ಇನ್ನು ವಾಹನಗಳಲ್ಲಿ 6 ಏರ್ ಬ್ಯಾಗ್ʼಗಳನ್ನ ಕಡ್ಡಾಯಗೊಳಿಸಲಾಗುವುದು. ಕಾರಿನಲ್ಲಿ 6 ಏರ್ ಬ್ಯಾಗ್ʼಗಳನ್ನು ಹೊಂದಿರುವುದು ಕಡ್ಡಾಯವಾಗಿರುತ್ತದೆ” ಎಂದು ಹೇಳಿದರು. ಇನ್ನು “ಹೆಚ್ಚಿನ ಏರ್ನ್ಯಾಗ್ʼಗಳನ್ನ ಅಳವಡಿಸುವುದರಿಂದ ಕಾರಿನ ಬೆಲೆ ಹೆಚ್ಚಾಗುತ್ತದೆ ಎಂದು ಕಂಪನಿಗಳು ವಾದಿಸುತ್ತವೆ. ಕಾರಿನಲ್ಲಿ ಏರ್ ಬ್ಯಾಗ್ʼಗಳನ್ನು ಅಳವಡಿಸುವ ವೆಚ್ಚವನ್ನು 900 ರೂ.ಗಳಿಗೆ ಇಳಿಸಬಹುದು ಎಂದು ಸಚಿವರು ಹೇಳಿದರು.
ಸೈರಸ್ ಮಿಸ್ತ್ರಿ ಅಪಘಾತ ದುರದೃಷ್ಟಕರ : ನಿತಿನ್ ಗಡ್ಕರಿ
ಸೈರಸ್ ಮಿಸ್ತ್ರಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಕೇಂದ್ರ ಸಚಿವರು, “ಸೈರಸ್ ಮಿಸ್ತ್ರಿ ಅವರ ಅಪಘಾತವು ತುಂಬಾ ದುರದೃಷ್ಟಕರ ಮತ್ತು ದೇಶಕ್ಕೆ ದೊಡ್ಡ ಹೊಡೆತವಾಗಿದೆ. ಅವರು ನನ್ನ ಉತ್ತಮ ಸ್ನೇಹಿತರಾಗಿದ್ದರು. ನಮ್ಮ ಸಮಸ್ಯೆಯೆಂದರೆ ನಮ್ಮ ದೇಶದಲ್ಲಿ ಪ್ರತಿ ವರ್ಷ 5 ಲಕ್ಷ ಅಪಘಾತಗಳು ಮತ್ತು 1 ಲಕ್ಷ 50 ಸಾವಿರ ಸಾವುಗಳು ಸಂಭವಿಸುತ್ತವೆ. ಮತ್ತು ಈ ಸಾವುಗಳಲ್ಲಿ, 65% 18 ರಿಂದ 34 ವರ್ಷ ವಯಸ್ಸಿನವರಾಗಿದ್ದಾರೆ. ಸೈರಸ್ ಮಿಸ್ತ್ರಿ ಕಾರಿನ ಹಿಂದಿನ ಸೀಟಿನಲ್ಲಿದ್ದರು ಮತ್ತು ಅವರು ಸಹ ಸೀಟ್ ಬೆಲ್ಟ್ ಧರಿಸಿರಲಿಲ್ಲ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಮುಂಬೈ-ಅಹಮದಾಬಾದ್ ಹೆದ್ದಾರಿಯ ಸೂರ್ಯ ನದಿಯ ಸೇತುವೆಯ ಮೇಲೆ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆಯುವ ಮೊದಲು ಕಾರು ವೇಗವಾಗಿ ಚಲಿಸುತ್ತಿತ್ತು.
ವೇಗವಾಗಿ ಚಲಿಸುವ ವಾಹನಗಳ ಮೇಲೆ ಕಣ್ಣಿಡುವ ಅಗತ್ಯವನ್ನ ತಜ್ಞರು ಒತ್ತಿಹೇಳಿದ್ದಾರೆ ಮತ್ತು ಹಿಂಬದಿ ಸವಾರರು ಸೀಟ್ ಬೆಲ್ಟ್ ಧರಿಸುವುದನ್ನು ಕಡ್ಡಾಯಗೊಳಿಸಿದ್ದಾರೆ. “ಪೂರ್ವ ಮತ್ತು ಪಶ್ಚಿಮ ಎಕ್ಸ್ಪ್ರೆಸ್ವೇಗಳು, ಹೊರ ವರ್ತುಲ ರಸ್ತೆ ಮತ್ತು ವರ್ತುಲ ರಸ್ತೆ ಸೇರಿದಂತೆ ರಾಷ್ಟ್ರ ರಾಜಧಾನಿಯ ಕೆಲವು ಭಾಗಗಳಲ್ಲಿ ರಸ್ತೆ ವಿನ್ಯಾಸದಲ್ಲಿ ಅಸಂಗತತೆಯನ್ನು ಗಮನಿಸಬಹುದು” ಎಂದು ನವದೆಹಲಿಯ ಸೆಂಟ್ರಲ್ ರೋಡ್ ರಿಸರ್ಚ್ ಇನ್ಸ್ಟಿಟ್ಯೂಟ್ (ಸಿಆರ್ಆರ್ಐ) ಮುಖ್ಯ ವಿಜ್ಞಾನಿ ಎಸ್ ವೆಲ್ಮುರುಗನ್ ಪಿಟಿಐಗೆ ತಿಳಿಸಿದ್ದಾರೆ. ಉದಾಹರಣೆಗೆ, ಕೆಲವು ಸ್ಥಳಗಳಲ್ಲಿ ಆರು ಪಥದ ರಸ್ತೆಯನ್ನು ಚತುಷ್ಪಥಕ್ಕೆ ಇಳಿಸಲಾಗುತ್ತದೆ. ವಿವಿಧ ಸ್ಥಳಗಳಲ್ಲಿ ಅಸಮ ಮೇಲ್ಮೈಗಳನ್ನು ಸಹ ಗಮನಿಸಬಹುದು. ವಾಹನ ಚಲಾಯಿಸುವಾಗ ಈ ಸಮಸ್ಯೆಗಳು ಬೆದರಿಕೆಯನ್ನು ಒಡ್ಡುತ್ತವೆ ಮತ್ತು ಅವುಗಳನ್ನು ಪರಿಹರಿಸಬೇಕು” ಎಂದರು.