ಕೆಎನ್ಎನ್ಡಿಜಿಟಲ್ ಡೆಸ್ಕ್ : ವಾಹನ ಸವಾರರು ಒಂದಲ್ಲ ಒಂದು ಸಮಯದಲ್ಲಿ ತಪ್ಪಾಗಿ ಸಂಚಾರ ನಿಯಮಗಳನ್ನ ಉಲ್ಲಂಘಿಸುತ್ತಾರೆ. ಹೆಲ್ಮೆಟ್ ಧರಿಸದಿರುವುದು, ಸಿಗ್ನಲ್ ಜಂಪ್ ಮಾಡುವುದು, ಅತಿವೇಗದ ಚಾಲನೆಗಾಗಿ ಸಂಚಾರ ಪೊಲೀಸರು ಚಲನ್ಗಳನ್ನ ನೀಡುತ್ತಾರೆ. ಅದೇ ಸಮಯದಲ್ಲಿ, ನೀವು ಚಾಲನಾ ಪರವಾನಗಿ, ಆರ್ಸಿ, ಮಾಲಿನ್ಯ ಅಥವಾ ವಿಮೆಯನ್ನ ಹೊಂದಿಲ್ಲದಿದ್ದರೂ ಸಹ ಚಲನ್ಗಳ ರೂಪದಲ್ಲಿ ಭಾರಿ ಬೆಲೆಯನ್ನ ತೆರಬೇಕಾಗುತ್ತೆ. ನೀವು ಸಂಚಾರಿ ನಿಯಮಗಳನ್ನ ಸಂಪೂರ್ಣವಾಗಿ ಅನುಸರಿಸಿದ್ರೆ ಮಾತ್ರ ನೀವು ಚಲನ್ʼಗಳನ್ನು ತೊಡೆದುಹಾಕಬಹುದು.
ಸಂಚಾರ ನಿಯಮಗಳನ್ನು ಉಲ್ಲಂಘಿಸುವ ವಾಹನ ಚಾಲಕರಿಗೆ ಪ್ರಸ್ತುತ ಮೋಟಾರು ವಾಹನ ಕಾಯ್ದೆಯ ಪ್ರಕಾರ ಸಂಚಾರ ಪೊಲೀಸರು ಶಿಕ್ಷೆ ವಿಧಿಸುತ್ತಾರೆ. ದಂಡ ವಿಧಿಸುವುದರ ಜೊತೆಗೆ ನೀವು ಜೈಲಿಗೆ ಹೋಗುವವರೆಗೆ ನಿಬಂಧನೆಗಳಿವೆ. ಆದ್ರೆ, ವಾಹನ ಸವಾರರು ತಪ್ಪು ಮಾಡಿದಂತೆ ಸಂಚಾರ ಪೊಲೀಸರು ಕೂಡ ತಪ್ಪು ಮಾಡುವ ಸಾಧ್ಯತೆ ಇದೆ. ಆಕಸ್ಮಿಕವಾಗಿ ಸಂಖ್ಯೆಯನ್ನ ತಪ್ಪಾಗಿ ಹೊಡೆದ್ರೆ ಮತ್ತು ಒಂದು ದಂಡದ ಬದಲು ಮತ್ತೊಂದು ದಂಡವನ್ನ ನಮೂದಿಸಿದ್ರೂ ದಂಡ ಕಟ್ಟುವ ಅನೇಕ ಮಂದಿಯಿದ್ದರೆ. ಆದ್ರೆ ಗಮನಿಸಿ, ನೀವು ಈ ರೀತಿಯ ತಪ್ಪು ಚಲನ್ʼಗಳನ್ನ ಪಡೆದ್ರೆ, ದಂಡ ಕಟ್ಟುವ ಅಗತ್ಯವಿಲ್ಲ.
ಸಂಚಾರ ಪೊಲೀಸರು ತಪ್ಪಾಗಿ ನಿಮಗೆ ಚಲನ್ ನೀಡಿದ್ರೆ, ಸಂಬಂಧಪಟ್ಟ ಇಲಾಖೆಯನ್ನ (ಸಂಚಾರ ಪೊಲೀಸರು) ಸಂಪರ್ಕಿಸಬಹುದು ಎಂಬ ನಿಬಂಧನೆಯೂ ಇದೆ. ನೀವು ಸಂಚಾರ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗೆ ದೂರು ನೀಡಬಹುದು. ನೀವು ಸಂಚಾರ ನಿಯಮವನ್ನ ಉಲ್ಲಂಘಿಸಿಲ್ಲ ಮತ್ತು ನಿಮಗೆ ಚಲನ್ ತಪ್ಪಾಗಿ ಬಂದಿದೆ ಎಂದು ನೀವು ತಿಳಿಸಬೇಕು. ನಿಮ್ಮ ದೂರು ಸರಿಯಾಗಿದ್ದರೆ, ನಿಮ್ಮ ಚಲನ್ ರದ್ದುಗೊಳಿಸಲಾಗುತ್ತದೆ. ಒಂದ್ವೇಳೆ ರದ್ದುಗೊಳಿಸದಿದ್ರೆ, ನೀವು ಚಲನ್ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು.