ಹಿಮಾಚಲ ಪ್ರದೇಶ: ಹಿಮಾಚಲ ಪ್ರದೇಶದಲ್ಲಿ ಕಿರಿದಾದ ರಸ್ತೆಯಲ್ಲಿ ಸಿಲುಕಿಕೊಂಡಿದ್ದ ಬಸ್ಸನ್ನು ತಳ್ಳಲು ಕೇಂದ್ರ ಮಾಹಿತಿ ಮತ್ತು ಪ್ರಸಾರ ಮತ್ತು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್(Anurag Thakur) ನೆರವಿನ ಹಸ್ತ ಚಾಚಿದ್ದಾರೆ.
ಅನುರಾಗ್ ಅವರು ರಾಜ್ಯ ವಿಧಾನಸಭಾ ಚುನಾವಣೆಗಾಗಿ ಬಿಲಾಸ್ಪುರದಲ್ಲಿ ಪ್ರಚಾರ ನಡೆಸುತ್ತಿದ್ದಾಗ, ಗ್ರಾಮದ ಮೂಲಕ ಹಾದುಹೋಗುವ ಕಿರಿದಾದ ರಸ್ತೆಯಲ್ಲಿ ಕೆಟ್ಟುಹೋದ ಪ್ರಯಾಣಿಕರಿಂದ ಬಸ್ ಕಟ್ಟು ನಿಂತಿತ್ತು. ಇದ್ರಿಂದ ಹಲವು ವಾಹನಗಳು ರಸ್ತೆಯಲ್ಲೇ ಸಿಲುಕಿಕೊಂಡಿದ್ದವು. ಅದನ್ನು ಕಂಡ ಅವರು ತಮ್ಮ ಕಾರಿನಿಂದ ಇಳಿದು ಬಸ್ ಅನ್ನು ತಳ್ಳುತ್ತಿದ್ದ ಜನರೊಂದಿಗೆ ಸೇರಿ ತಾವೂ ಕೂಡ ಬಸ್ ಅನ್ನು ಮುಂದಕ್ಕೆ ತಳ್ಳಿದ್ದಾರೆ. ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
#WATCH | Union Minister Anurag Thakur was seen pushing a bus that broke down in the middle of a highway causing a traffic jam in Himachal’s Bilaspur.
The Minister’s convoy was also stuck in traffic pic.twitter.com/2EPNLKGSJb
— ANI (@ANI) November 8, 2022
ನಂತ್ರ, ಚಾಲಕ ಮತ್ತು ಪ್ರಯಾಣಿಕರೊಂದಿಗೆ ಅನುರಾಗ್ ಸಂವಾದ ನಡೆಸಿ, ಅವರ ಸ್ಥಿತಿಯನ್ನು ವಿಚಾರಿಸಿದರು ಮತ್ತು ನಂತರ ಜಾಮ್ ತೆರವುಗೊಳಿಸಿದ ನಂತರ ಮುಂದಿನ ಪ್ರಚಾರಕ್ಕೆ ತೆರಳಿದರು.
VIRAL PHOTO: ಹಾಸನದ ಸಕಲೇಶಪುರದಲ್ಲಿ ಆಹಾರಕ್ಕಾಗಿ ಮನೆಗಳ ಮುಂದೆ ಬಂದು ನಿಲ್ಲುತ್ತಿರುವ ಅನೆಗಳು