ಕೆಎನ್ಎನ್ ಡಿಜಿಟಲ್ ಡೆಸ್ಕ್ : ಬೋಟ್ನಲ್ಲಿ ಹೋಗುತ್ತಿದ್ದಾಗ ಸರ್ಪ್ರೈಸ್ ಆಗಿ ತನ್ನ ಗೆಳತಿಯ ಕೈ ಬೆರಳಿಗೆ ತೊಡಿಸಬೇಕಿದ್ದ ಉಂಗುರ(Ring) ಸಮುದ್ರಕ್ಕೆ ಬಿದ್ದಿದ್ದು, ವ್ಯಕ್ತಿ ಕೂಡಲೇ ನೀರಿಗೆ ಧುಮುಕಿದ ವೀಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಸ್ಕಾಟ್ ಕ್ಲೈನ್ ಅವರು ಫೇಸ್ಬುಕ್ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ಫ್ಲೋರಿಡಾದ ಕ್ಲೈನ್ ತನ್ನ ಗೆಳತಿ ಸುಜಿ ಟಕರ್ ಅವರೊಂದಿಗೆ ದೋಣಿಯ ಮೇಲೆ ನಿಂತಿರುವ ಸುಂದರ ನೋಟವನ್ನು ನೋಡಬಹುದು. ಈ ರೋಮ್ಯಾಂಟಿಕ್ ಸಂದರ್ಭದಲ್ಲಿ ಕ್ಲೈನ್ ತನ್ನ ಶಾರ್ಟ್ಸ್ ಜೇಬಿನಿಂದ ಉಂಗುರದ ಬಾಕ್ಸ್ಅನ್ನು ಹೊರತೆಗೆದು, ತನ್ನ ಗೆಳತಿಗೆ ಪ್ರಪೋಸ್ ಮಾಡಲು ಮಂಡಿಯೂರಿ ಕೆಳಗೆ ಕುಳಿತುಕೊಳ್ಳಬೇಕಾದರೆ, ಉಂಗುರದ ಬಾಕ್ಸ್ ನೀರಿನೊಳಗೆ ಬೇಳುತ್ತದೆ.
ಆಗ ತಒಂದು ಸೆಕೆಂಡ್ ಕೂಡ ವ್ಯರ್ಥ ಮಾಡದೇ ತಕ್ಷಣವೇ ನೀರಿಗೆ ಧುಮಿಕಿದ ಕ್ಲೈನ್ ಉಂಗುರದ ಬಾಕ್ಸ್ಅನ್ನು ಹಿಡಿಯುವಲ್ಲಿ ಯಶಸ್ವಿಯಾಗಿ ಬೋಟ್ ಹತ್ತಿ ಬಂನು. ಈ ಎಲ್ಲಾ ಚಿತ್ಣವನ್ನು ನೀವು ಈ ವಿಡಿಯೋದಲ್ಲಿ ನೋಡಬಹುದು.
WATCH VIDEO: ಶಿಕ್ಷಕಿಗೇ ʻಐ ಲವ್ ಯೂ, ಮೆರಿ ಜಾನ್ʼ ಎಂದು ಚುಡಾಯಿಸಿದ ವಿದ್ಯಾರ್ಥಿಗಳು… ವಿಡಿಯೋ ವೈರಲ್