ಇಂಡೋನೇಷ್ಯಾ: ಜಿ 20 ಶೃಂಗಸಭೆಗಾಗಿ ಯುಎಸ್ ಅಧ್ಯಕ್ಷ ಜೋ ಬೈಡೆನ್ ಇಂಡೋನೇಷ್ಯಾದ ಬಾಲಿಯಲ್ಲಿದ್ದಾರೆ. ಈ ವೇಳೆ ಬಾಲಿಯಲ್ಲಿರುವ ತಮನ್ ಹುತಾನ್ ರಾಯಾ ಮ್ಯಾಂಗ್ರೋವ್ ಅರಣ್ಯಕ್ಕೆ ಭೇಟಿ ನೀಡಿದ್ದರು. ಆಗ ಬೈಡನ್ ಮೆಟ್ಟಿಲು ಹತ್ತುವಾಗ ಎಡವಿದ್ದಾರೆ. ಇನ್ನೇನು ಮುಂದೆ ಬೀಳುತ್ತಿದ್ದ ಅವರನ್ನು ಇಂಡೋನೇಷ್ಯಾ ಕೌಂಟರ್ ಜೊಕೊ ವಿಡೋಡೊ ಹಿಡಿದು ಮುನ್ನಡೆಸಿದರು.
ಜೊಕೊ ವಿಡೋಡೊ ಮತ್ತು ಬೈಡನ್ ಇಬ್ಬರು ನಾಯಕರು ಬಾಲಿಯಲ್ಲಿರುವ ತಮನ್ ಹುತಾನ್ ರಾಯಾ ಮ್ಯಾಂಗ್ರೋವ್ ಅರಣ್ಯಕ್ಕೆ ಭೇಟಿ ನೀಡಿದ್ದರು. ಈ ವೇಳೆ, ಮೆಟ್ಟಿಲು ಹತ್ತುವಾಗ ಬೈಡನ್ ಎಡವಿದ್ದು, ಸಮಯಕ್ಕೆ ಸರಿಯಾಗಿ ಅವರನ್ನು ಹಿಡಿಯುವಲ್ಲಿ ಜೊಕೊ ಯಶಸ್ವಿಯಾಗಿದ್ದು, ಬೈಡನ್ ಹಿಡಿದು ಮುನ್ನಡೆಸಿದರು. ಇದರ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
#WATCH | US President Joe Biden stumbles at the stairs as Indonesian President Joko Widodo holds him during their visit to a Mangrove forest in Bali at #G20Summit2022 pic.twitter.com/5graKRK82K
— ANI (@ANI) November 16, 2022
ಬೈಡೆನ್ ಲೈವ್ ಕ್ಯಾಮೆರಾದಲ್ಲಿ ಎಡವಿ ಬಿದ್ದಿರುವುದು ಇದೇ ಮೊದಲಲ್ಲ. ನವೆಂಬರ್ 6 ರಂದು, ನೂರಾರು ಜನರು ಭಾಗವಹಿಸಿದ್ದ ರ್ಯಾಲಿಯಲ್ಲಿ ಬೈಡೆನ್ ಸಾರಾ ಲಾರೆನ್ಸ್ ಕಾಲೇಜಿನಲ್ಲಿ ವೇದಿಕೆಯ ಮೇಲೆ ಮುಗ್ಗರಿಸಿದ್ದರು.
Viral news : ಲೈಂಗಿಕ ಕಿರುಕುಳದಿಂದ ಪಾರಾಗಲು ಚಲಿಸುತ್ತಿದ್ದ ಆಟೋರಿಕ್ಷಾದಿಂದ ಜಿಗಿದ ಬಾಲಕಿ ವಿಡಿಯೋ| WATCH
Viral news : ಲೈಂಗಿಕ ಕಿರುಕುಳದಿಂದ ಪಾರಾಗಲು ಚಲಿಸುತ್ತಿದ್ದ ಆಟೋರಿಕ್ಷಾದಿಂದ ಜಿಗಿದ ಬಾಲಕಿ ವಿಡಿಯೋ| WATCH