ಹೈದರಾಬಾದ್: ತೆಲಂಗಾಣದ ಉದ್ಯಮಿಯೊಬ್ಬರು ಹೊಸದಾಗಿ ಖರೀದಿಸಿದ ಹೆಲಿಕಾಪ್ಟರ್ ಅನ್ನು ದೇವಾಲಯಕ್ಕೆ ಕರೆದೊಯ್ದು ಪೂಜೆ ಮಾಡಿಸಿದ ಸ್ಪೆಷಲ್ ವಿಡಿಯೋ ವೈರಲ್ ಆಗಿದೆ
ಸಾಮಾನ್ಯವಾಗಿ, ದ್ವಿಚಕ್ರ ಅಥವಾ ನಾಲ್ಕು ಚಕ್ರದ ವಾಹನಗಳನ್ನು ಖರೀದಿಸುವ ಜನರು ತಮ್ಮ ವಾಹನವನ್ನು ವಾಹನ ಪೂಜೆಗಾಗಿ ಹತ್ತಿರದ ದೇವಾಲಯಕ್ಕೆ ತೆಗೆದುಕೊಂಡು ಹೋಗುವುದು ಸಾಮಾನ್ಯವಾಗಿದೆ, ಆದರೆ ಹೈದರಾಬಾದ್ನ ಪ್ರತಿಮಾ ಗ್ರೂಪ್ನ ಮಾಲೀಕರಾಗಿರುವ ಬೋಯಿನಪಲ್ಲಿ ಶ್ರೀನಿವಾಸ್ ರಾವ್ ಕುಟುಂಬ ಸದಸ್ಯರೊಂದಿಗೆ ದೇವಾಲಯಕ್ಕೆ ಆಗಮಿಸಿ ಮೂವರು ಪುರೋಹಿತರ ಮಾರ್ಗದರ್ಶನದಲ್ಲಿ ಕುಟುಂಬವು ಏರ್ಬಸ್ ಎಸಿಹೆಚ್-135ಕ್ಕೆ ಪೂಜೆ ಮಾಡಿಸಿದ್ದಾರೆ.
Boinpally Srinivas Rao, the proprietor of the Prathima business, bought an Airbus ACH 135 and used it for the “Vahan” puja at the Yadadri temple dedicated to Sri Lakshmi Narasimha Swamy. Costing $5.7M, the opulent helicopter. #Telangana pic.twitter.com/igFHMlEKiY
— Mohd Lateef Babla (@lateefbabla) December 15, 2022
ಸುಮಾರು 47.15 ಕೋಟಿ ರೂ. ಮೊತ್ತದ ಹೆಲಿಕಾಪ್ಟರ್ಗೆ ಪೂಜೆ ಮಾಡಿಸಲು ಹೈದರಾಬಾದ್ನಿಂದ 100 ಕಿ. ಮೀ. ದೂರದಲ್ಲಿರುವ ಯಾದಾದ್ರಿ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯಕ್ಕೆ ಆಗಮಿಸಿದ್ದರು.
ಬೋಯಿನಪಲ್ಲಿ ಶ್ರೀನಿವಾಸ್ ರಾವ್ ಕುಟುಂಬ ರಾಜಕಾರಣದಲ್ಲಿಯೂ ಸಕ್ರಿಯವಾಗಿದೆ. ಬೋಯಿನಪಲ್ಲಿ ಶ್ರೀನಿವಾಸ್ ರಾವ್ ಸಹೋದರ ಬಿ. ವಿನೋದ್ ಕುಮಾರ್ ಟಿಆರ್ಎಸ್ ಪಕ್ಷ ಮಾಜಿ ಸಂಸದರಾಗಿದ್ದಾರೆ.
ಕೆಲವು ದಿನಗಳ ಹಿಂದೆ ಇವರ ಕುಟುಂಬ ಒಡೆತನದ ಸಂಸ್ಥೆಗಳ ಮೇಲೆ ಐಟಿ ದಾಳಿ ನಡೆದಿತ್ತು.ಹೈದರಾಬಾದ್, ಕರೀಂನಗರದಲ್ಲಿ ಬೋಯಿನಪಲ್ಲಿ ಶ್ರೀನಿವಾಸ್ ರಾವ್ ಕುಟುಂಬ ಹಲವಾರು ಆಸ್ತಿಗಳನ್ನು ಹೊಂದಿದೆ. ಸಂಸ್ಥೆಗಳು ತೆರಿಗೆ ವಂಚನೆ ಮಾಡಿವೆ ಎಂಬ ಆರೋಪದ ಮೇಲೆ ಐಟಿ ದಾಳಿ ನಡೆಸಲಾಗಿತ್ತು.
ಪ್ರತಿಮಾ ಗ್ರೂಪ್ ಕಂಪನಿಯು ಹೈದರಾಬಾದ್ನಲ್ಲಿ ಕೇಂದ್ರ ಕಚೇರಿ ಹೊಂದಿದೆ. ರಿಯಲ್ ಎಸ್ಟೇಟ್, ಉತ್ಪಾದನೆ, ಟೆಲಿಕಾಂ ಮಂತಾದ ಕ್ಷೇತ್ರಗಳಲ್ಲಿ ತೊಡಗಿಕೊಂಡಿದೆ. ಶಾಲೆ, ಆಸ್ಪತ್ರೆಗಳನ್ನು ಸಹ ಹೊಂದಿದ್ದಾರೆ.
CUET 2023: ʻಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆʼಯ ದಿನಾಂಕ ಪ್ರಕಟ, ಮೇ 21-31 ರ ನಡುವೆ ಪರೀಕ್ಷೆ
BIG NEWS : ರಿಲಯನ್ಸ್ ನಿಂದ FMCG ಬ್ರಾಂಡ್ ‘ಇಂಡಿಪೆಂಡೆನ್ಸ್’ ಪ್ರಾರಂಭ | Reliance Retail
CUET 2023: ʻಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆʼಯ ದಿನಾಂಕ ಪ್ರಕಟ, ಮೇ 21-31 ರ ನಡುವೆ ಪರೀಕ್ಷೆ
BIG NEWS : ರಿಲಯನ್ಸ್ ನಿಂದ FMCG ಬ್ರಾಂಡ್ ‘ಇಂಡಿಪೆಂಡೆನ್ಸ್’ ಪ್ರಾರಂಭ | Reliance Retail