ವೈರಲ್ ನ್ಯೂಸ್ : ಹೃದಯಾಘಾತದಿಂದ ಮೃತ ಪಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೀಗ ಇಂದೋರ್ನ ಜಿಮ್ನಲ್ಲಿ ವ್ಯಾಯಾಮ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ಹೃದಯಾಘಾತವಾಗಿರುವ ಆಘಾತಕಾರಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
जिम में एक और मौत।
इंदौर: होटल व्यापारी की वर्क आउट करने के दौरान दिल का दौरा पड़ा और देखते ही देखते उनकी मौत हो गई। #Indore #Gym #heartattack pic.twitter.com/3ON7v2vPKi
— Afroz Alam (@AfrozJournalist) January 5, 2023
ಹೋಟೆಲ್ ಮಾಲೀಕರೊಬ್ಬರು ಜಿಮ್ನಲ್ಲಿ ಟ್ರೆಡ್ಮಿಲ್ ನಲ್ಲಿ ಕಸರತ್ತು ನಡೆಸುತ್ತಿದ್ದಾಗ ಹೃದಯಾಘಾತಗೊಂಡು ಕುಸಿದು ಬಿದ್ದಿ ದ್ದಾರೆ. ಬಳಿಕ ಮೇಜಿನ ಮೇಲೆ ಒರಗಲು ಪ್ರಯತ್ನಿಸಿದ್ದಾರೆ. ಕೂಡಲೇ ಜಿಮ್ನಲ್ಲಿದ್ದ ಇತರರು ಓಡಿ ಬಂದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆಂದು ಆಸ್ಪತ್ರೆಯ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಪೋಲೀಸರ ಪ್ರಕಾರ, ಇಂದೋರ್ನ ಹೋಟೆಲ್ ವೃಂದಾವನದ ಮಾಲೀಕ ಪ್ರದೀಪ್ ರಘುವಂಶಿ ಅವರು ಪ್ರತಿದಿನ ಎರಡು ಗಂಟೆಗಳ ಕಾಲ ಗೋಲ್ಡ್ ಜಿಮ್ನಲ್ಲಿ ವ್ಯಾಯಾಮ ಮಾಡುತ್ತಿದ್ದರು. ವ್ಯಾಯಾಮ ಮಾಡೋದಕ್ಕೆ ಟ್ರೆಡ್ಮಿಲ್ ಬಳಸಿರೋದ್ರಿಂದ ಬಿದ್ದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.