ವಾಷಿಂಗ್ಟನ್: ಅಮೆರಿಕದ ಟೆಕ್ಸಾಸ್ ರಾಜ್ಯದಲ್ಲಿ ನಾಲ್ವರು ಭಾರತೀಯ-ಅಮೆರಿಕನ್ ಮಹಿಳೆಯರನ್ನು ಜನಾಂಗೀಯ ನಿಂದನೆ ಮತ್ತು ಥಳಿಸಿರುವ ಮೆಕ್ಸಿಕನ್-ಅಮೆರಿಕನ್ ಮಹಿಳೆ ಯನ್ನು ಅರೆಸ್ಟ್ ಮಾಡಲಾಗಿದೆ. ಈಕೆ ʻನೀವು ಅಮೆರಿಕವನ್ನು ಹಾಳು ಮಾಡುತ್ತಿದ್ದೀರಿ, ವಾಪಸ್ ಭಾರತಕ್ಕೆ ಹಿಂತಿರುಗಿʼ ಎಂದು ಜನಾಂಗೀಯ ನಿಂದನೆ ಮಾಡಿದ್ದಾರೆ ಎನ್ನಲಾಗಿದೆ.
ಟೆಕ್ಸಾಸ್ನ ಡಲ್ಲಾಸ್ನಲ್ಲಿರುವ ಪಾರ್ಕಿಂಗ್ ಸ್ಥಳದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಇದೀಗ ಬಂಧನಕ್ಕೊಳಗಾಗಿರುವ ಮಹಿಳೆ ಭಾರತೀಯ ಮೂಲದವರನ್ನು ನಿಂದಿಸಿದ್ದಾರೆ. ಇದರ ವಿಡಿಯೋ ಕೂಡ ವೈರಲ್ ಆಗಿದ್ದು, ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ.
“ನಾನು ನಿಮ್ಮನ್ನು ಭಾರತೀಯರನ್ನು ದ್ವೇಷಿಸುತ್ತೇನೆ. ಈ ಎಲ್ಲಾ ಭಾರತೀಯರು ಉತ್ತಮ ಜೀವನವನ್ನು ಬಯಸಿ ಅಮೆರಿಕಕ್ಕೆ ಬರುತ್ತಾರೆ. ನಾನು ಎಲ್ಲಿಗೇ ಹೋದರೂ ಅಲ್ಲೆಲ್ಲಾ ಭಾರತೀಯರೇ ಇದ್ದೀರಿ. ನೀವು ಈ ದೇಶವನ್ನು ಹಾಳು ಮಾಡುತ್ತಿದ್ದೀರಿ. ವಾಪಸ್ ಭಾರತಕ್ಕೆ ಹಿಂತಿರುಗಿ” ಎಂದು ನಿಂದಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
This is so scary. She actually had a gun and wanted to shoot because these Indian American women had accents while speaking English.
Disgusting. This awful woman needs to be prosecuted for a hate crime. pic.twitter.com/SNewEXRt3z
— Reema Rasool (@reemarasool) August 25, 2022
ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಅಮೆರಿಕದಾದ್ಯಂತ ಭಾರತೀಯ-ಅಮೆರಿಕನ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ವೀಡಿಯೊವನ್ನು ಪೋಸ್ಟ್ ಮಾಡಿದ ವ್ಯಕ್ತಿ, “ನನ್ನ ತಾಯಿ ಮತ್ತು ಅವರ ಮೂವರು ಸ್ನೇಹಿತರು ಊಟಕ್ಕೆ ಹೋದಾಗ ಈ ಘಟನೆಯು ಟೆಕ್ಸಾಸ್ನ ಡಲ್ಲಾಸ್ನಲ್ಲಿ ಸಂಭವಿಸಿದೆ” ಎಂದು ಬರೆದುಕೊಂಡಿದ್ದಾರೆ.
ಇನ್ನೂ, ಪ್ಲಾನೋ ಪೋಲೀಸ್ ಡಿಟೆಕ್ಟಿವ್ಸ್ ಗುರುವಾರ ಮಧ್ಯಾಹ್ನ ನಿಂದಿಸಿ ಹಲ್ಲೆ ನಡೆಸಿದ ಮಹಿಳೆಯನ್ನು ಬಂಧಿಸಿದ್ದಾರೆ.
ASSAULT ARREST
On Thursday, August 25, 2022, at approximately 3:50 p.m., Plano Police Detectives arrested Esmeralda Upton of Plano on one charge of Assault Bodily Injury and one for Terroristic Threats and is being held on a total bond amount of $10,000. A jail photo is attached. pic.twitter.com/cEj9RwWdt1— Plano Police (Texas) (@PlanoPoliceDept) August 25, 2022
BIGG NEWS : ಹರಿಯಾಣದಲ್ಲಿ ʼನಿಗೂಢ ದುರಂತ ʼ : ಒಂದೇ ಕುಟುಂಬದ ʻಆರು ಮಂದಿ ಶವವಾಗಿ ಪತ್ತೆʼ
BIGG NEWS : ಹರಿಯಾಣದಲ್ಲಿ ʼನಿಗೂಢ ದುರಂತ ʼ : ಒಂದೇ ಕುಟುಂಬದ ʻಆರು ಮಂದಿ ಶವವಾಗಿ ಪತ್ತೆʼ