ಹರಿಯಾಣ: ಹರಿಯಾಣದ ಫರಿದಾಬಾದ್ನಲ್ಲಿ ವಿಜಿಲೆನ್ಸ್ ಅಧಿಕಾರಿಗಳ ತಂಡವು ಎಮ್ಮೆ ಕಳ್ಳತನ ಪ್ರಕರಣದಲ್ಲಿ ಲಂಚ ಪಡೆಯುತ್ತಿದ್ದ ಪೊಲೀಸರನ್ನು ಹಿಡಿದಿದ್ದು, ಸಾಕ್ಷ್ಯ ನಾಶಪಡಿಸಲು ಪೊಲೀಸ್ ಅಧಕಾರಿ ಹಣವನ್ನೇ ನುಂಗಿರುವ ಘಟನೆ ನಡೆದಿದೆ. ಸದ್ಯ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಸ್ಥಳೀಯ ರೈತನೊಬ್ಬ ತನ್ನ ಎಮ್ಮೆ ಕಳೆದುಹೋದ ಬಗ್ಗೆ ದೂರು ದಾಖಲಿಸಿದ್ದು, ಕ್ರಮ ಕೈಗೊಳ್ಳುವಂತೆ ಪೊಲೀಸರ ಬಳಿ ಕೋರಿದ್ದಾರೆ. ಆದ್ರೆ, ಎಮ್ಮೆ ಪತ್ತೆಗಾಗಿ, 10,000 ರೂ. ನೀಡುವಂತೆ ಸಬ್ ಇನ್ಸ್ ಪೆಕ್ಟರ್ ಮಹೇಂದ್ರ ಪಾಲ್ ರೈತನ ಬಳಿ ಬೇಡಿಕೆಯಿಟ್ಟಿದ್ದನು. ಅದರಂತೆ, ರೈತ ಪೊಲೀಸರಿಗೆ 6,000 ರೂ ನೀಡಿದ್ದನು. ಉಳಿದ ಬಾಕಿ ಹಣ ನೀಡುವಂತೆ ಕೇಳಿದಾಗ, ಇದರಿಂದ ಬೇಸತ್ತ ರೈತ ಪೊಲೀಸ್ ಅಧಿಕಾರಿ ವಿರುದ್ಧ ವಿಜಿಲೆನ್ಸ್ ಇಲಾಖೆಗೆ ದೂರು ನೀಡಿದರು.
ಅದರಂತೆ ವಿಜಿಲೆನ್ಸ್ ಅಧಿಕಾರಿಗಳು ಪೊಲೀಸನ್ನು ರೆಡ್ಹ್ಯಾಂಡಾಗಿ ಹಿಡಿಯಲು ಯೋಜಿಸಿ, ಬಲೆ ಬೀಸಿದ್ದರು. ಮಹೇಂದ್ರ ಪಾಲ್ ರೈತನ ಬಳಿ ಹಣ ವಸೂಲಿ ಮಾಡುವಾಗ ವಿಜಿಲೆನ್ಸ್ ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದು, ರೆಡ್ಹ್ಯಾಂಡಾಗಿ ಹಿಡಿದಿದ್ದಾರೆ. ಇದ್ರಿಂದ ತಪ್ಪಿಸಿಕೊಳ್ಳಲು ಮಹೇಂದ್ರ ಪಾಲ್ ಹಣವನ್ನೇ ನುಂಗಿದ್ದಾನೆ.
ನಂತ್ರ, ಪೋಲೀಸನ ಬಾಯಿಯಿಂದ ಹಣವನ್ನು ಹೊರತೆಗೆಯಲು ವಿಜಿಲೆನ್ಸ್ ಅಧಿಕಾರಿಗಳು ಹರಸಾಹಸ ಪಡುವುದನ್ನು ಈ ವಿಡಿಯೋದಲ್ಲಿ ನೋಡಬಹುದು.
A police sub-inspector in #Faridabad, #Haryana swallowed currency notes, to avoid being trapped by the vigilance team. Reportedly, the cop took a bribe from a person in exchange for initiating action on his complaint of buffalo theft.#SubInspector #MahenderPal #ViralVideo pic.twitter.com/oK3ZIIP2r3
— Hate Detector 🔍 (@HateDetectors) December 13, 2022
BIG NEWS : ʻಜಿಕಾ ವೈರಸ್ʼ ವಿರುದ್ಧ ಹೋರಾಡಲು ಭಾರತ ಸಿದ್ಧವಾಗಿರಬೇಕು: ಎನ್ಟಿಜಿಐ ಮುಖ್ಯಸ್ಥ ಡಾ ಎನ್ಕೆ ಅರೋರಾ ಕರೆ
BIG NEWS : ʻಜಿಕಾ ವೈರಸ್ʼ ವಿರುದ್ಧ ಹೋರಾಡಲು ಭಾರತ ಸಿದ್ಧವಾಗಿರಬೇಕು: ಎನ್ಟಿಜಿಐ ಮುಖ್ಯಸ್ಥ ಡಾ ಎನ್ಕೆ ಅರೋರಾ ಕರೆ