ಕೆಎನ್ಎನ್ ಡಿಜಿಟಲ್ ಡೆಸ್ಕ್: ಮಾನ್ಸೂನ್ ದೇಶಾದ್ಯಂತ ಜಲಪ್ರಳಯ ಮತ್ತು ಪ್ರವಾಹದಂತಹ ಸಮಸ್ಯೆಗಳ ಸರಣಿಯನ್ನೇ ಸೃಷ್ಟಿಸುತ್ತಿದೆ. ಈ ಭಾರೀ ಮಳೆ ಎಡೆಬಿಡದೆ ಸುರಿಯುತ್ತಿರುವುದರಿಂದ ಜನರು ಮನೆಯಲ್ಲೇ ಉಳಿಯಲು ಇಷ್ಟಪಡುತ್ತಿದ್ದಾರೆ. ಆದ್ರೆ, ಈ ಅವಧಿ ಪ್ರಾಣಿಗಳು ಮತ್ತು ಸರೀಸೃಪಗಳಿಗೆ ಅತ್ಯಂತ ಕಠಿಣ. ಹೀಗಾಗಿ, ಇವು ಮಾನವ ವಾಸಿಸುವ ಜಾಗಕ್ಕೆ ಲಗ್ಗೆಯಿಡುತ್ತವೆ. ಇದಕ್ಕೆ ನಿದರ್ಶನವೆಂತೆ, ಇಲ್ಲೊಂದು ಹಾವು ಶೂ ಒಳಗೆ ಬೆಚ್ಚಗಿನ ಆಶ್ರಯ ಪಡೆದಿದೆ.
ಐಎಫ್ಎಸ್ ಅಧಿಕಾರಿ ಸುಸಂತ ನಂದಾ ಅವರು ಟ್ವಿಟ್ಟರ್ನಲ್ಲಿ ಶೇರ್ ಮಾಡಿಕೊಂಡಿರುವ ಈ ವಿಡಿಯೋದಲ್ಲಿ, ನಾಗರ ಹಾವು ಶೂ ಒಳಗೆ ಸೇರಿ ಆಶ್ರಯ ಪಡೆದಿರುವುದನ್ನು ನೋಡಬಹುದು. “ಮಾನ್ಸೂನ್ನಲ್ಲಿ ಸಂಭವನೀಯ ಸ್ಥಳಗಳಲ್ಲಿ ನೀವು ಹಾವುಗಳನ್ನು ಕಾಣಬಹುದು. ಈ ಬಗ್ಗೆ ಜಾಗರೂಕರಾಗಿರಿ. ತರಬೇತಿ ಪಡೆದ ಸಿಬ್ಬಂದಿಯ ಸಹಾಯವನ್ನು ತೆಗೆದುಕೊಳ್ಳಿ” ಎಂದು ಸುಸಂತ ನಂದಾ ಅವರು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.
You will find them at oddest possible places in https://t.co/2dzONDgCTj careful. Take help of trained personnel.
WA fwd. pic.twitter.com/AnV9tCZoKS— Susanta Nanda IFS (@susantananda3) July 11, 2022
ಟ್ವಿಟ್ಟರ್ನಲ್ಲಿ ಈ ವೀಡಿಯೊ 171 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಹಲವಾರು ಬಳಕೆದಾರರು ಪಾರುಗಾಣಿಕಾ ಅಧಿಕಾರಿಯ ಧೈರ್ಯವನ್ನು ಮೆಚ್ಚಿದ್ದಾರೆ.
ಮಳೆಗಾಲದಲ್ಲಿ ಪಾದರಕ್ಷೆಗಳು, ಶೌಚಾಲಯಗಳು ಮತ್ತು ಕಿಚನ್ ಕ್ಯಾಬಿನೆಟ್ಗಳಂತಹ ಶೀತ, ಕತ್ತಲೆಯಾದ ಸ್ಥಳಗಳಲ್ಲಿ ಜನರು ಯಾವಾಗಲೂ ಜಾಗರೂಕರಾಗಿರಲು ಸೂಚನೆ ನೀಡಲಾಗಿದೆ.
BREAKING NEWS: ಎದುರಾಳಿಯ ಒಂದೇ ಒಂದು ಏಟಿಗೆ ಹೊರಟೇ ಹೊಯ್ತು ಕಿಕ್ ಬಾಕ್ಸರ್ ಪ್ರಾಣ….! ಎಲ್ಲಿ ಗೊತ್ತಾ
BIGG NEWS : ವಿದ್ಯಾರ್ಥಿಗಳಿಗೆ ಮತ್ತೊಂದು ಶಾಕ್ : ಶಾಲೆಗಳಲ್ಲಿ ಮೊಟ್ಟೆ ನೀಡದಂತೆ ಶಿಕ್ಷಣ ಇಲಾಖೆಗೆ ಶಿಫಾರಸ್ಸು!