ಭೋಪಾಲ್: ಮಧ್ಯಪ್ರದೇಶದ ಇಂದೋರ್ನಲ್ಲಿ ಮಂಗಳವಾರ ಸುರಿದ ಭಾರೀ ಮಳೆಗೆ ಜನರು ತತ್ತರಿಸಿದ್ದಾರೆ. ರಸ್ತೆಗಳೆಲ್ಲಾ ನದಿಗಳಂತೆ ಪರಿವರ್ತನೆಯಾಗಿವೆ. ಮಳೆ ನೀರು ರಭಸವಾಗಿ ರಸ್ತೆಗಳ ಮೇಲೆ ಹರಿಯುತ್ತಿದೆ. ಇದರಿಂದಾಗಿ ಒಂದು ಜಾಗದಿಂದ ಮತ್ತೊಂದೆಡೆಗೆ ಹೋಗಲು ಜನರು ಹರಸಾಹಸ ಪಟ್ಟಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ, ರಸ್ತೆ ಮೇಲೆ ನೀರು ನದಿಯಂತೆ ರಭಸವಾಗಿ ಹರಿಯುತ್ತಿದೆ. ಇದನ್ನೂ ಲೆಕ್ಕಿಸದೇ, ರಸ್ತೆ ದಾಟಲು ಯತ್ನಿಸಿದ ಕಾರೊಂದು ಕೊಚ್ಚಿ ಹೋಗುವುದನ್ನು ನೋಡಬಹುದು.
इंदौर में बारिश का कहर। बारिश में बही एक दर्जन गाड़ियाँ।#IndoreNews #Indore #Rain #heavyrain @comindore #MadhyaPradesh #MadhyaPradeshNews pic.twitter.com/N6ThhtP7Ex
— Raj Express (@RajExpressNews) August 9, 2022
ಭಾರೀ ಮಳೆಗೆ ಇಲ್ಲಿನ ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಕೊಚ್ಚಿ ಹೋಗುತ್ತಿದ್ದ ಕಾರುಗಳಲ್ಲಿದ್ದ ಹಲವರನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಎಫ್ಬಿಯಲ್ಲಿ ವಿಡಿಯೋ ಪೋಸ್ಟ್ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಬೆಂಗಾಲಿ ನಟ, ಆಸ್ಪತ್ರೆಗೆ ದಾಖಲು