ಬೆಂಗಳೂರು: ಇಂದು ರಾಜ್ಯ ಸರ್ಕಾರದಿಂದ ಬೆಳಗಾವಿಯಲ್ಲಿ ಹೆಲ್ಮೆಟ್ ಧರಿಸದ ಕಾರಣಕ್ಕೆ ಎಎಸ್ಐ ಸಾವನ್ನಪ್ಪಿದ ಘಟನೆ ನಡೆದ ನಂತ್ರ, ಎಲ್ಲಾ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಹೆಲ್ಮೆಟ್ ಧರಿಸೋದನ್ನು ಕಡ್ಡಾಯಗೊಳಿಸಿ ಆದೇಶ ಮಾಡಲಾಗಿದೆ. ಆದ್ರೇ ಇಷ್ಟು ದಿನ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ಹೆಲ್ಮೆಟ್ ಧರಿಸೋದು ಕಡ್ಡಾಯವಿರಲಿಲ್ಲವೇ? ಜನರಿಗೊಂದು ನ್ಯಾಯ, ಪೊಲೀಸರಿಗೊಂದು ಕಾನೂನಾ ಅಂತ ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ.
ಮಾರ್ಚ್.17ರಂದು ಮುರಗೋಡ ಪೊಲೀಸ್ ಠಾಣೆಯ ಪಿಎಸ್ಐ ಅವರನ್ನು ಬೆಳಗಾವಿ ಎಸ್. ಪಿ ಭೀಮಾಶಂಕರ್ ಗುಳೆದ ಅವರು ಸೇವೆಯಿಂದ ಅಮಾನತುಪಡಿಸಿದ್ದರು. ಈ ಸುದ್ದಿ ಓದಿದಂತ ಎಂಥಹವರಿಗೂ ಖೇದ ಉಂಟು ಮಾಡಿತ್ತು. ಕಾರಣ ಎಸ್ಪಿ ಹೆಲ್ಮೆಟ್ ಧರಿಸದೇ ಎಎಸ್ಐ ಸಾವನ್ನಪ್ಪಿದ್ದಕ್ಕೆ, ಪಿಎಸ್ಐ ಅಮಾನತುಗೊಳಿಸಿದಂತ ಆದೇಶವಾಗಿತ್ತು.
ಪಿಎಸ್ಐ ನಂದೀಶ ಅವರನ್ನು ಸಕಾರಣವಿಲ್ಲದೇ ಅಮಾನತು ಪಡಿಸಿದ ಬೆಳಗಾವಿ ಎಸ್. ಪಿ ಭೀಮಾಶಂಕರ್ 2017 ರಲ್ಲಿ ತಮ್ಮ ಕಚೇರಿಯಲ್ಲಿಯೇ ಸೆಕ್ಸ್ ಸ್ಕ್ಯಾಮ್ ನಲ್ಲಿ ಸಿಲುಕಿಕೊಂಡಿದ್ದರು. ಇದು ಮಾಧ್ಯಮ ಮತ್ತು ಇಲಾಖಾ ವಲಯಗಳಲ್ಲಿ ಭಾರಿ ಸುದ್ದಿಯಾಗಿತ್ತು. ಆಗ ಕರ್ನಾಟಕದ ಪೊಲೀಸ್ ಚೀಫ್ ಅವರಿಗೆ ಗುಳೆದ್ ನ ಅಶಿಸ್ತು, ಬೇಜವಾಬ್ದಾರಿತನ, ನಿಷ್ಕಾಳಜಿ ಕಾಣಿಸಿರಲಿಲ್ಲವೇ? ಅಥವಾ ಕಚೇರಿಯಲ್ಲಿ ಸೆಕ್ಸ್ ಸ್ಕ್ಯಾಮ್ ಮಾಡುವುದರ ಬಗ್ಗೆ ಮೇಲಧಿಕಾರಿಗಳ ಆದೇಶವಿತ್ತೇ ಎಂಬ ಪ್ರಶ್ನೆಗಳು ಉದ್ಭವವಾಗುತ್ತಿವೆ.
ಎಎಸ್ಐ ಅಪಘಾತದಲ್ಲಿ ಮರಣ ಹೊಂದಿದರೆ ಪಿಎಸ್ಐ ಸಸ್ಪೆಂಡ್ ಮಾಡುವುದಾದರೆ, ಪಿಎಸ್ಐ ಸರಿಯಾಗಿ ಸೂಚನೆ ಕೊಟ್ಟಿಲ್ಲ ಎಂದರೆ ಜನಸಾಮಾನ್ಯರು ಖಂಡಿಸುವಂಥದ್ದು. ಹಾಗಿದ್ದರೆ ಪಿಎಸ್ಐ ಗೆ ಸರಿಯಾಗಿ ಸೂಚನೆ ನೀಡಿಲ್ಲ ಎಂದು ಎಸ್. ಪಿ ಅವರನ್ನು ಅಮಾನತು ಮಾಡಲು ರಾಜ್ಯ ಸರ್ಕಾರಕ್ಕೆ ಸಾಮರ್ಥ್ಯವಿಲ್ಲವೇ ಎಂಬುದಾಗಿ ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಬೆಳಗಾವಿಯಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದಂತ ಎಎಸ್ಐ ವಿಜಯಕಾಂತ ಹೆಲ್ಮೆಟ್ ಧರಿಸದ ಕಾರಣ ಅಪಘಾತಗೊಂಡು ತಲೆಗೆ ಪೆಟ್ಟು ಬಿದ್ದು ಸಾವನ್ನಪ್ಪಿದ ಬೆನ್ನಲ್ಲೇ, ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಎಡಿಜಿಪಿ ಅಲೋಕ್ ಕುಮಾರ್ ಇಂದು ಸುತ್ತೋಲೆಯೊಂದನ್ನು ಹೊರಡಿಸಿದ್ದು, ಅದರಲ್ಲಿ
ರಾಜ್ಯದ ವಿವಿಧ ಘಟಕಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ತಮ್ಮ ತಮ್ಮ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವಾಗ ಹಲ್ಮಟ್ ಧರಿಸದೇ, ರಸ್ತೆ ಅಪಘಾತಗಳು ಉಂಟಾಗಿ, ಕೆಲವು ಪೊಲೀಸ್ ಅಧಿಕಾರಿ / ಸಿಬ್ಬಂದಿಗಳು ಗಂಭೀರವಾಗಿ ಗಾಯಗೊಂಡಿದ್ದು ಮತ್ತು ಕಲವರು ಮೃತಪಟ್ಟಿರುವ ಘಟನಗಳು ಸಂಭವಿಸಿರುವುದು ಕಂಡು ಬಂದಿರುತ್ತದೆ ಎಂದಿದ್ದಾರೆ.
ಆದ್ದರಿಂದ, ಇನ್ನು ಮುಂದೆ ಇಂತಹ ಘಟನೆಗಳನ್ನು ತಪ್ಪಿಸಲು, ರಾಜ್ಯಾದ್ಯಂತ ಎಲ್ಲಾ ಘಟಕಗಳಲ್ಲಿ (ಬೆಂಗಳೂರು ನಗರ ಒಳಗೊಂಡಂತೆ) ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ತಮ್ಮ ತಮ್ಮ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವಾಗ ಮೋಟಾರು ವಾಹನ ಕಾಯ್ದೆಯಡಿಯಲ್ಲಿ ಕಲಂ 129(ಎ) & (ಬಿ) ರಲ್ಲಿ ನಮೂದಿಸಿರುವಂತೆ ಹಾಗೂ ಸೂಚಿಸಿರುವಂತೆ ಕಡ್ಡಾಯವಾಗಿ ಸುರಕ್ಷಿತ ಹೆಲ್ಮಟ್ ಅನ್ನು ಧರಿಸಿ, ಸದರಿ ಹಲ್ಮಟ್ ಅನ್ನು ಭದ್ರವಾಗಿ ಕಟ್ಟಿಕೊಳ್ಳುವುದು (to strap the helmet) ಎಂದು ತಿಳಿಸಿದ್ದಾರೆ.
ಮೋಟಾರು ವಾಹನ ಕಾಯ್ದೆಯ ಕಲಂ 129 (ಎ) & (ಬಿ) ರಡಿಯಲ್ಲಿ ಹೆಲ್ಮಟ್ ನ ನಿರ್ದಿಷ್ಟತೆಯ ಬಗ್ಗೆ ವಿವರಿಸಿದ್ದು, ಆ ಪುಕಾರ ಎಲ್ಲಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ತಮ್ಮ ತಮ್ಮ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವಾಗ ಕಡ್ಡಾಯವಾಗಿ ಸುರಕ್ಷಿತ ಹೆಲ್ಮಟ್ ಅನ್ನು ಧರಿಸುವಂತೆ ನಿರ್ದೇಶನಗಳನ್ನು ನೀಡಿ, ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
ಹಾಗಾದ್ರೇ ರಾಜ್ಯದ ಪೊಲೀಸ್ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳಿಗೆ ಇಷ್ಟು ದಿನ ಈ ಆದೇಶ ಅನ್ವಯಿಸುತ್ತಿರಲಿಲ್ಲವೇ.? ದ್ವಿಚಕ್ರ ವಾಹನ ಸವಾರರು ವಾಹನ ಚಾಲನೆ ವೇಳೆಯಲ್ಲಿ ಹೆಲ್ಮೆಟ್ ಧರಿಸುವುದು ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಆದೇಶ ಮಾಡಿ ಹಲವು ವರ್ಷಗಳೇ ಕಳೆದಿವೆ. ಹೀಗಿದ್ದೂ ಬೆಳಗಾವಿಯಲ್ಲಿ ನಿಯಮ ಪಾಲಿಸದೇ ಎಎಸ್ಐ ಸಾವನ್ನಪ್ಪಿದ್ರೇ ಎಸ್ಐ ಅಮಾನತುಗೊಳಿಸುವ ಎಸ್ಪಿ ನಿರ್ಧಾರ ಎಷ್ಟು ಸರಿ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಈ ಬಗ್ಗೆ ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ದ್ವಿಚಕ್ರ ವಾಹನ ಚಾಲನೆ ವೇಳೆಯಲ್ಲಿ ಹೆಲ್ಮೆಟ್ ಧರಿಸುವುದು ಕಡ್ಡಾಯಗೊಳಿಸಿದ್ದು ನಿಜಕ್ಕೂ ಉತ್ತಮ ಬೆಳವಣಿಗೆ. ಸಾರ್ವಜನಿಕರ ಸೇವೆಗಾಗಿ ಮುಡುಪಾಗಿಡೋ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಹೆಲ್ಮೆಟ್ ಧರಿಸಿ, ಜೀವದ ಬಗ್ಗೆ ಕಾಳಜಿ ವಹಿಸಲಿ ಎಂಬುದಾಗಿ ಆಶಿಸೋಣ.
ಮಿಸ್ಟರ್ ಡಿ.ಕೆ.ಶಿವಕುಮಾರ್, ಇವತ್ತು ‘ಜೆಡಿಎಸ್-ಬಿಜೆಪಿ ಮೈತ್ರಿ’ಗೆ ನೀವೇ ಕಾರಣ – H.D ಕುಮಾರಸ್ವಾಮಿ ಕಿಡಿ
ನಾನೊಬ್ಬ ಸ್ಟ್ರಾಂಗ್ CM, ನಿಮ್ಮ ಹಾಗೆ ವೀಕ್ PM ಅಲ್ಲ: ‘ಮೋದಿ’ ವಿರುದ್ಧ ಸಿದ್ಧರಾಮಯ್ಯ ವಾಗ್ಧಾಳಿ