ಮಂಗಳೂರು : ಮಂಗಳೂರು ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಡಿಜಿಪಿ ಅಲೋಕ್ ಕುಮಾರ್ ಗೆ ಉಗ್ರರು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ನಿಮ್ಮ ಸಂತೋಷ ಅಲ್ಪಕಾಲಿಕ, ರಾಜ್ಯದಲ್ಲಿ ಹತ್ಯೆ, ದಬ್ಬಾಳಿಕೆಯ ಕಾನೂನು ನಡೆಯುತ್ತಿದೆ ಎಂದು ಡಾರ್ಕ್ ವೆಬ್ ಮೂಲಕ ಉಗ್ರರು ಎಚ್ಚರಿಕೆ ಸಂದೇಶ ನೀಡಿದ್ದಾರೆ. ಸ್ಪೋಟದ ಹೊಣೆಯನ್ನು ಇಸ್ಲಾಮಿಕ್ ರೆಸಿಸ್ಟೆನ್ಸ್ ಹೊತ್ತಿಕೊಂಡಿದ್ದು, ಉಗ್ರ ಶಾರೀಖ್ ದುಷ್ಕ್ರೃತ್ಯವನ್ನು ಸಮರ್ಥಿಸಿಕೊಂಡಿದೆ.
ಮಂಗಳೂರು ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸರಿಗೆ ದಿನದಿಂದ ದಿನಕ್ಕೆ ಸ್ಪೋಟಕ ಮಾಹಿತಿ ಸಿಗುತ್ತಿದೆ. ಇದೀಗ ಇಡೀ ರಾಜ್ಯವೇ ಬೆಚ್ಚಿ ಬೀಳಿಸುವ ಸುದ್ದಿ ಬಯಲಾಗಿದ್ದು. ‘ಹಿಂದೂ’ ದೇವಾಲಯಗಳ ಸ್ಪೋಟಕ್ಕೆ ಉಗ್ರರು ಸ್ಕೆಚ್ ಹಾಕಿದ್ದರು ಎಂಬುದು ಬಯಲಾಗಿದೆ.. ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯ , ಮಂಗಳಾದೇವಿ ದೇವಾಲಯ, ಮಂಜುನಾಥ ಸ್ವಾಮಿ ದೇವಾಲಯಕ್ಕೂ ಉಗ್ರರು ಸ್ಕೆಚ್ ಹಾಕಿದ್ದರು ಎಂಬ ಮಾಹಿತಿ ಬಯಲಾಗಿದೆ.
ಶಾರೀಖ್ ಮೊಬೈಲ್ ತನಿಖೆ ನಡೆಸಿದ ಪೊಲೀಸರಿಗೆ ಈ ವಿಚಾರ ಗೊತ್ತಾಗಿದೆ. ಅದೇ ರೀತಿ ಮಂಗಳೂರು ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣವನ್ನು ಕೂಡ ಸ್ಪೋಟಿಸುವ ಸ್ಕೆಚ್ ಹಾಕಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ದೇಗುಲ ಮಾತ್ರವಲ್ಲದೇ ಸಾರ್ವಜನಿಕ ಸ್ಥಳಗಳನ್ನು ಕೂಡ ಸ್ಪೋಟಿಸುವ ಸ್ಕೆಚ್ ಹಾಕಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಶಿವನ ಡಿಪಿ ಬೆನ್ನತ್ತಿದ ಪೊಲೀಸರಿಗೆ ಸ್ಪೋಟಕ ಮಾಹಿತಿ ಲಭ್ಯವಾಗಿದೆ. ಕರಾವಳಿ ಭಾಗದ ಮೂರು ದೇವಾಲಯಗಳನ್ನು ಸ್ಪೋಟಿಸುವ ಸ್ಕೆಚ್ ಹಾಕಲಾಗಿತ್ತು ಎಂಬ ಸ್ಪೋಟಕ ಮಾಹಿತಿ ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.
ಹುಬ್ಬಳ್ಳಿ ಮೂಲದ ಪ್ರೇಮರಾಜ್ ಅವರ ಆಧಾರ್ ಕಾರ್ಡ್ ಬಳಸಿಕೊಂಡ ಈತ ಸಂಪೂರ್ಣವಾಗಿ ಬದಲಾಗಿದ್ದ. ಅಷ್ಟೇ ಅಲ್ಲ ತಾನೊಬ್ಬ ಪರಮ ದೈವಭಕ್ತ ಎಂದು ಬಿಂಬಿಸಲು ಕೊಯಮತ್ತೂರಿನಲ್ಲಿ ಇಶಾ ಫೌಂಡೇಶನ್ ಸ್ಥಾಪನೆ ಮಾಡಿದ್ದ ಆದಿಯೋಗಿ ಶಿವನ ಪ್ರತಿಮೆಯನ್ನು ವಾಟ್ಸಪ್ ಡಿಪಿಯಲ್ಲಿ ಹಾಕಿದ್ದ. ಕೃತ್ಯ ನಡೆಯುವ ಮೊದಲು ಶಾರೀಕ್ ಕೇಸರಿ ಬಣ್ಣದ ಶರ್ಟ್, ಶಾಲು ಧರಿಸಿದ್ದನು ಎಂಬುದು ಬಯಲಾಗಿದೆ.
BREAKING NEWS : ರಾಜ್ಯದ ಶಾಲೆಗಳಲ್ಲಿ ‘ಮೊಬೈಲ್’ ಬಳಕೆ ನಿಷೇಧ : ಕಠಿಣ ನಿಯಮ ಜಾರಿಗೆ ಸರ್ಕಾರ ಚಿಂತನೆ