ಡೆಹ್ರಾಡೂನ್: ಉತ್ತರಾಖಂಡದ ಎಲ್ಲಾ ಮದರಸಾಗಳಲ್ಲಿ ಇನ್ಮುಂದೆ ಡ್ರೆಸ್ ಕೋಡ್ಗಳು ಜಾರಿಗೆ ಬರಲಿದೆ ಎಂದು ಉತ್ತರಾಖಂಡ ವಕ್ಫ್ ಬೋರ್ಡ್ ತಿಳಿಸಿದೆ.
SHOCKING NEWS: ತಾಯಿ ನೋಡಿದ ವರನನ್ನು ಒಪ್ಪದ ಮಗಳು: ಮರ್ಯಾದೆಗಂಜಿ ಕರುಳಕುಡಿಯನ್ನೇ ಕೊಂದ ಹೆತ್ತವ್ವ
ಈ ಬಗ್ಗೆ ವಕ್ಫ್ ಬೋರ್ಡ್ ಅಧ್ಯಕ್ಷ ಶಾದಾಬ್ ಶಾಮ್ಸ್ ಮಾತನಾಡಿ, ಉತ್ತರಾಖಂಡ ವಕ್ಫ್ ಬೋರ್ಡ್ನಲ್ಲಿ ನೋಂದಣಿಯಾಗಿರುವ 103 ಮದರಸಾಗಳಲ್ಲಿ ಸಮವಸ್ತ್ರ ಕಡ್ಡಾಯ ಎಂಬ ನಿಯಮವನ್ನು ಜಾರಿಗೆ ತರಲಾಗುತ್ತದೆ. ಅಷ್ಟೇ ಅಲ್ಲದೇ ಮದರಸಾವು ಬೆಳಗ್ಗೆ 8 ರಿಂದ ಮಧ್ಯಾಹ್ನ 2ರವರೆಗೆ ತರಗತಿಗಳು ನಡೆಯಲಿದ್ದು, ಅಲ್ಲಿಯೂ ಎನ್ಸಿಇಆರ್ಟಿ ಪುಸ್ತಕಗಳನ್ನು ಸಹ ಪರಿಚಯಿಸಲಾಗುವುದು ಎಂದು ಹೇಳಿದರು.
SHOCKING NEWS: ತಾಯಿ ನೋಡಿದ ವರನನ್ನು ಒಪ್ಪದ ಮಗಳು: ಮರ್ಯಾದೆಗಂಜಿ ಕರುಳಕುಡಿಯನ್ನೇ ಕೊಂದ ಹೆತ್ತವ್ವ
ರಾಜ್ಯದ ಎಲ್ಲಾ ಮದರಸಾಗಳನ್ನು ಸಮೀಕ್ಷೆ ಮಾಡಲು ರಾಜ್ಯ ಸರ್ಕಾರವು ಶೀಘ್ರದಲ್ಲೇ ಸಮಿತಿಯನ್ನು ರಚಿಸುವ ನಿರೀಕ್ಷೆಯಿದೆ. ಆಧುನಿಕ ಶಾಲೆಗಳ ಮಾದರಿಯಲ್ಲಿ ಮದರಸಾಗಳನ್ನು ನಡೆಸಲು ಸಹ ಸಿದ್ಧತೆ ನಡೆದಿದ್ದು, ಮೊದಲ ಹಂತದಲ್ಲಿ 7 ಮದರಸಾಗಳನ್ನು ಆಧುನಿಕರಣಗೊಳಿಸಲಾಗುವುದು. ಈ ಹಿನ್ನೆಲೆಯಲ್ಲಿ ಡೆಹ್ರಾಡೂನ್ನಲ್ಲಿ ಎರಡು, ಉಧಮ್ ಸಿಂಗ್ ನಗರದಲ್ಲಿ ಎರಡು, ಹರಿದ್ವಾರದಲ್ಲಿ ಎರಡು ಮತ್ತು ನೈನಿತಾಲ್ನಲ್ಲಿ ಒಂದು ಮದರಸಾವನ್ನು ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
SHOCKING NEWS: ತಾಯಿ ನೋಡಿದ ವರನನ್ನು ಒಪ್ಪದ ಮಗಳು: ಮರ್ಯಾದೆಗಂಜಿ ಕರುಳಕುಡಿಯನ್ನೇ ಕೊಂದ ಹೆತ್ತವ್ವ
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಇತ್ತೀಚೆಗೆ ಮದರಸಾಗಳಿಗೆ ನೀಡಿದ ಅನುದಾನವನ್ನು ಸಮರ್ಪಕವಾಗಿ ಬಳಸುತ್ತಿಲ್ಲ ಎಂಬ ಆರೋಪದ ನಡುವೆ ಮದರಸಾಗಳ ಸಮೀಕ್ಷೆ ನಡೆಸುವ ಅಗತ್ಯವನ್ನು ಒತ್ತಿ ಹೇಳಿದ್ದರು.