ದೆಹಲಿ: ಈ ಬಾರಿಯ ರಕ್ಷಾ ಬಂಧನದಂದು ತನ್ನ ಸಹೋದರಿಗೆ ಉಡುಗೊರೆಯಾಗಿ ನೀಡಲೆಂದು ಎಲೆಕ್ಟ್ರಿಕ್ ಸ್ಕೂಟರ್ಅನ್ನು ಕದ್ದ ಅಣ್ಣನನ್ನು ಪೊಲೀಸರು ಬಂಧಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ರಕ್ಷಾ ಬಂಧನಕ್ಕೆ ತನ್ನ ಸಹೋದರಿಗೆ ಗಿಫ್ಟ್ ಕೊಡಲು ಇ-ಸ್ಕೂಟರ್ ಕದ್ದಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಈತ ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಬ್ಬ ವ್ಯಕ್ತಿ ತನ್ನ ಬೈಕನ್ನು ದರೋಡೆ ಮಾಡಿದ್ದಾನೆ. ಬಳಿಕ ಕಳ್ಳ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದನು. ಈ ವೇಳೆ ಅವನ ಫೋನ್ಅನ್ನು ಬಿಟ್ಟು ಹೋಗಿದ್ದನು. ಕಳ್ಳ ಬಿಟ್ಟು ಹೋದ ಫೋನ್ ಸಮೇತ ಜುಲೈ 7 ರಂದು ಸುಲ್ತಾನ್ಪುರಿ ಪೊಲೀಸ್ ಠಾಣೆಗೆ ಬಂದ ಸುರೇಂದ್ರ ಎಂಬುವರು ಈ ಬಗ್ಗೆ ದೂರು ನೀಡಿದ್ದಾರೆ. ಈ ಪ್ರಕರಣವನ್ನು ಬೇಧಿಸಿದ ಪೊಲೀಸರು 21 ವರ್ಷದ ಆರೋಪಿ ತರುಣ್ನನ್ನು ಬಂಧಿಸಿದ್ದಾರೆ. ಇದೀಗ, ತರುಣ್ ಬಳಿಯಿದ್ದ ಕದ್ದ ಬೈಕ್ ಹಾಗೂ ಮೂರು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪೊಲೀಸರ ಪ್ರಕಾರ, ಆರೋಪಿಯು ವಿಜಯ್ ವಿಹಾರ್ನಿಂದ ದ್ವಿಚಕ್ರ ವಾಹನವನ್ನು ಕದ್ದಿದ್ದೇನೆ ಮತ್ತು ತನ್ನ ಸಹೋದರಿಗೆ ರಾಖಿ ಹಬ್ಬದ ಉಡುಗೊರೆಯಾಗಿ ಎಲೆಕ್ಟ್ರಿಕ್ ಸ್ಕೂಟರ್ ನೀಡಲು ಹಲವು ಬಾರಿಯಿಂದ ಕಳ್ಳತನ ಮಾಡುತ್ತಿದ್ದೆ ಎಂದು ಹೇಳಿಕೊಂಡಿದ್ದಾನೆ.
ತರುಣ್ನ ವಿಚಾರಣೆಯು ಆರು ಕಳ್ಳತನ ಪ್ರಕರಣಗಳನ್ನು ಭೇದಿಸಲು ಸಹಾಯ ಮಾಡಿದೆ. ಈತನ ವಿರುದ್ಧ 10 ಪೊಲೀಸ್ ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಂಬುಲೆನ್ಸ್ ವ್ಯವಸ್ಥೆ ನೀಡದ ಆಸ್ಪತ್ರೆ: 80 ಕಿಮೀ ದೂರ ತಾಯಿಯ ಮೃತದೇಹವನ್ನು ಬೈಕ್ನಲ್ಲೇ ಹೊತ್ತೊಯ್ದ ಮಗ… Video
BREAKING NEWS : ವಿಧಾನಸಭೆ ಕಲಾಪದ ವೇಳೆ ಜಾರ್ಖಂಡ್ ಶಿಕ್ಷಣ ಸಚಿವರ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು