ಕೆಎನ್ಎನ್ ಡಿಜಿಟಲ್ ಡೆಸ್ಕ್ : ಇಂದು ತೂಕ ಹೆಚ್ಚಾಗಿ ಅನೇಕ ಜನರು ತಮ್ಮ ದೇಹದ ಬೊಜ್ಜು ಕರಗಿಸಿಕೊಳ್ಳಲು ವ್ಯಾಯಾಮ ಮತ್ತು ಡಯಟ್ ಪದ್ಧತಿಗೆ ಮೊರೆ ಹೋಗುತ್ತಿದ್ದಾರೆ. ಸಣ್ಣ ಇರುವವರಲ್ಲಿ ಕೂಡ ಕೊಲೆಸ್ಟ್ರಾಲ್ ತುಂಬಾ ಹೆಚ್ಚಾಗಿರುತ್ತದೆ ಎಂದರೆ ನೀವು ನಂಬುತ್ತೀರಾ? ಇದು ಜನರ ಜೀವನ ಶೈಲಿ ಮೇಲೆ ಆಧಾರಿತವಾಗಿದೆ.
ಭಾರತ್ ಜೋಡೋ ಯಾತ್ರೆ: ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ ಮಹಾತ್ಮ ಗಾಂಧಿ ಮೊಮ್ಮಗ ʻತುಷಾರ್ʼ
ಹಾಗಾಗಿ ಕೆಲವೊಂದು ಕೆಟ್ಟ ಅಭ್ಯಾಸಗಳು ಕೂಡ ಇಂದು ಜನರಿಗೆ ಮತ್ತು ಅವರ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸುತ್ತಿವೆ. ಆದರೆ ಆಹಾರ ಪದ್ಧತಿಯಲ್ಲಿ ಕೊಂಚ ಬದಲಾವಣೆ ತಂದುಕೊಂಡರೆ ಅದರಿಂದ ಹೊರ ಬರಬಹುದಾದ ಫಲಿತಾಂಶಗಳು ಮಾತ್ರ ಅಪಾರವಾಗಿರುತ್ತವೆ. ಇಲ್ಲಿ ಮನೆಯಲ್ಲಿರುವ ಕೆಲವೊಂದು ದಿನ ಬಳಸುವ ಅಡುಗೆ ಪದಾರ್ಥಗಳನ್ನು ತೂಕ ಕಡಿಮೆ ಮಾಡಿಕೊಳ್ಳಲು ಹೇಗೆ ಉಪಯೋಗಿಸಬಹುದು ಎಂಬುದನ್ನು ತಿಳಿಸಿಕೊಡಲಾಗಿದೆ.
ನಿಂಬೆಹಣ್ಣಿನ ಜ್ಯೂಸ್
ನಿಮ್ಮ ಸೊಂಟದ ಬೊಜ್ಜು ಕರಗಿಸುವ ನಿಟ್ಟಿನಲ್ಲಿ ನಿಂಬೆಹಣ್ಣಿನ ರಸ ಅದ್ಭುತವಾಗಿ ಕೆಲಸ ಮಾಡುತ್ತದೆ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆಹಣ್ಣಿನ ರಸ ಕುಡಿಯುವುದರಿಂದ ಕ್ರಮೇಣವಾಗಿ ಸೊಂಟದ ಸುತ್ತಲಿನ ಬೊಜ್ಜು ಕಡಿಮೆಯಾಗುತ್ತಾ ಬರುತ್ತದೆ.
ಇದು ಲಿವರ್ ಭಾಗವನ್ನು ಕೂಡ ಸ್ವಚ್ಛ ಮಾಡುತ್ತದೆ ಎಂದು ಹೇಳುತ್ತಾರೆ. ಆದರೆ ನಿಂಬೆಹಣ್ಣಿನ ರಸಕ್ಕೆ ನೀವು ಯಾವುದೇ ಸಕ್ಕರೆ ಅಥವಾ ಕೃತಕ ಸಿಹಿ ಬೆರೆಸಬಾರದು.
ಭಾರತ್ ಜೋಡೋ ಯಾತ್ರೆ: ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ ಮಹಾತ್ಮ ಗಾಂಧಿ ಮೊಮ್ಮಗ ʻತುಷಾರ್ʼ
ಇದನ್ನು ಸೇವಿಸುವ ವಿಧಾನ
ಒಂದು ಲೋಟ ಉಗುರು ಬೆಚ್ಚಗಿನ ನೀರನ್ನು ತೆಗೆದುಕೊಂಡು ಅದಕ್ಕೆ ಅರ್ಧ ನಿಂಬೆ ಹೋಳನ್ನು ಹಿಂಡಿ.
ಈಗ ಇದಕ್ಕೆ ಸ್ವಲ್ಪ ಜೇನುತುಪ್ಪ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
ಬೆಳಗ್ಗೆ ಎದ್ದು ಬೆಡ್ ಕಾಫಿ ಕುಡಿಯುವ ಬದಲು ಇದನ್ನು ಪ್ರತಿ ದಿನ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ
ಶುಂಠಿ ಚಹಾ
ಶುಂಠಿ ಹೇಳಿಕೇಳಿ ಒಂದು ನೈಸರ್ಗಿಕ ಗಿಡಮೂಲಿಕೆ. ಶುಂಠಿ ಚಹಾ ತನ್ನಲ್ಲಿ ಅದ್ಭುತವಾದ ಔಷಧೀಯ ಗುಣಲಕ್ಷಣಗಳನ್ನು ಒಳಗೊಂಡಿದ್ದು, ಗಂಟಲು ನೋವು, ಮುಟ್ಟಿನ ನೋವು ಇತ್ಯಾದಿಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಇದು ಕಡಿಮೆ ಮಾಡಬಲ್ಲದು.
ಭಾರತ್ ಜೋಡೋ ಯಾತ್ರೆ: ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ ಮಹಾತ್ಮ ಗಾಂಧಿ ಮೊಮ್ಮಗ ʻತುಷಾರ್ʼ
ಹಾಗಾಗಿ ನೀವು ಪ್ರತಿದಿನ ಶುಂಠಿ ಚಹಾ ಕುಡಿಯುವುದರಿಂದ ನಿಮ್ಮ ದೇಹದ ಬೊಜ್ಜಿನ ರೂಪ ಪಡೆದಿರುವ ಕೆಟ್ಟ ಕೊಬ್ಬು ಮಾಯವಾಗುತ್ತದೆ.
ಶುಂಠಿ ಸೇವನೆ ಹೇಗೆ ಮಾಡಬಹುದು?
ಮೊದಲಿಗೆ ಶುಂಠಿಯನ್ನು ತೆಗೆದುಕೊಂಡು ಅದರ ಮೇಲಿನ ಸಿಪ್ಪೆ ತೆಗೆದು ಚೆನ್ನಾಗಿ ತೊಳೆದು ಸಣ್ಣ ಸಣ್ಣ ಹೋಳುಗಳನ್ನಾಗಿ ಕತ್ತರಿಸಿ.
ಈಗ ಒಂದು ಕಪ್ ನೀರನ್ನು ಕುದಿಸಿ, ಕುದಿಯುತ್ತಿರುವ ನೀರಿಗೆ ಶುಂಠಿ ಚೂರುಗಳನ್ನು ಸೇರಿಸಿ.
ಇದನ್ನು 10 ನಿಮಿಷಗಳ ಕಾಲ ಹಾಗೆ ಇರಲು ಬಿಟ್ಟು ನಂತರ ಸೋಸಿಕೊಳ್ಳಿ.
ಉಗುರು ಬೆಚ್ಚಗಿನ ತಾಪಮಾನಕ್ಕೆ ಬಂದ ನಂತರದಲ್ಲಿ ನಿಮ್ಮ ಆಯ್ಕೆಗೆ ತಕ್ಕಂತೆ ಇದಕ್ಕೆ ಸ್ವಲ್ಪ ಜೇನುತುಪ್ಪ ಅಥವಾ ನಿಂಬೆಹಣ್ಣಿನ ರಸ ಸೇರಿಸಿ.
ಬೆಳ್ಳುಳ್ಳಿ
ಬೆಳ್ಳುಳ್ಳಿ ತನ್ನಲ್ಲಿ ಬೊಜ್ಜು ಕಡಿಮೆ ಮಾಡುವ ಗುಣವನ್ನು ಹೇರಳವಾಗಿ ಹೊಂದಿದೆ. ಆಗಾಗ ನಿಮ್ಮ ಆಹಾರ ಪದ್ಧತಿಯಲ್ಲಿ ಬೆಳ್ಳುಳ್ಳಿ ಸೇರಿಸಿ ತಿನ್ನುವುದರಿಂದ ರಕ್ತನಾಳಗಳಲ್ಲಿ ಕೊಬ್ಬು ಶೇಖರಣೆ ಆಗುವುದು ತಪ್ಪುತ್ತದೆ. ಇಷ್ಟೇ ಅಲ್ಲದೆ ಬೆಳ್ಳುಳ್ಳಿ ಸೇವನೆ ಆಗಾಗ ಯಾವುದಾದರು ಒಂದು ರೂಪದಲ್ಲಿ ಮಾಡುವುದರಿಂದ ರಕ್ತನಾಳಗಳಲ್ಲಿ ರಕ್ತ ತೆಳ್ಳಗಾಗುತ್ತದೆ.
ಭಾರತ್ ಜೋಡೋ ಯಾತ್ರೆ: ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ ಮಹಾತ್ಮ ಗಾಂಧಿ ಮೊಮ್ಮಗ ʻತುಷಾರ್ʼ
ಬೆಳ್ಳುಳ್ಳಿ ಸೇವನೆ ಮಾಡುವ ವಿಧಾನ
ಒಂದು ಕಪ್ ನೀರಿನಲ್ಲಿ ಒಂದು ನಿಂಬೆ ಹಣ್ಣನ್ನು ಹಿಂಡಿ ರಸ ತೆಗೆದುಕೊಳ್ಳಿ.
ಬಾಯಿಯಲ್ಲಿ ಮೂರು ಬೆಳ್ಳುಳ್ಳಿ ಎಸಳುಗಳನ್ನು ಹಾಕಿಕೊಂಡು ಜಗಿದು ಜೊತೆಗೆ ನಿಂಬೆಹಣ್ಣಿನ ನೀರು ಕುಡಿಯಿರಿ.
ಖಾಲಿ ಹೊಟ್ಟೆಯಲ್ಲಿ ಬೆಳಗಿನ ಸಮಯದಲ್ಲಿ ಇದನ್ನು ಅನುಸರಿಸಿ.
ಬಾದಾಮಿ ಬೀಜಗಳು
ಸೊಂಟದ ಭಾಗದಲ್ಲಿ ಬೊಜ್ಜು ಹೊಂದಿರುವವರು ಬಾದಾಮಿ ಬೀಜಗಳನ್ನು ಸಂಜೆಯ ಸ್ನಾಕ್ಸ್ ಆಗಿ ಸೇವಿಸಬಹುದು. ಹಲವರಿಗೆ ಬಾದಾಮಿ ಬೀಜಗಳನ್ನು ತಿಂದರೆ ತೂಕ ಕಡಿಮೆ ಆಗುವುದಿಲ್ಲ ಎಂಬ ನಂಬಿಕೆ ಇದೆ. ಆದರೆ ಇದು ತಪ್ಪು.
ಬಾದಾಮಿ ಬೀಜಗಳಲ್ಲಿ ಒಮೆಗಾ 3 ಫ್ಯಾಟಿ ಆಸಿಡ್ ಪ್ರಮಾಣ ಇರುವುದರಿಂದ ಇದು ದೇಹದಲ್ಲಿರುವ ಕೊಬ್ಬಿನ ಅಂಶವನ್ನು ಕರಗಿಸುತ್ತದೆ ಮತ್ತು ತೂಕ ಕಡಿಮೆ ಮಾಡುತ್ತದೆ
ಭಾರತ್ ಜೋಡೋ ಯಾತ್ರೆ: ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ ಮಹಾತ್ಮ ಗಾಂಧಿ ಮೊಮ್ಮಗ ʻತುಷಾರ್ʼ
ಬಾದಾಮಿ ಬೀಜಗಳನ್ನು ಹೇಗೆ ತಿನ್ನಬೇಕು?
ನೀರಿನಲ್ಲಿ ಇಡೀ ರಾತ್ರಿ ಆರರಿಂದ ಎಂಟು ಬಾದಾಮಿ ಬೀಜಗಳನ್ನು ನೆನೆ ಹಾಕಿ.
ಬೆಳಗ್ಗೆ ಅವುಗಳ ಸಿಪ್ಪೆ ತೆಗೆದು ಖಾಲಿ ಹೊಟ್ಟೆಯಲ್ಲಿ ತಿನ್ನಿ.
ಪುದಿನಾ ಎಲೆಗಳು
ಪುದಿನಾ ಎಲೆಗಳಲ್ಲಿ ನಿಮ್ಮ ಸೊಂಟದ ಭಾಗದ ಬೊಜ್ಜನ್ನು ಕರಗಿಸುವ ಮತ್ತು ಹೆಚ್ಚುವರಿ ಬೈಲ್ ಜ್ಯೂಸ್ ಬಿಡುಗಡೆಯಾಗುವುದನ್ನು ತಪ್ಪಿಸುವ ಗುಣವಿದೆ. ಇದು ನಿಮ್ಮ ದೇಹದಲ್ಲಿ ಕೊಬ್ಬು ಕರಗಿಸುವ ಜೊತೆಗೆ ತನ್ನಲ್ಲಿ ಕ್ಯಾಲೋರಿಗಳನ್ನು ಸಹ ಕಡಿಮೆ ಹೊಂದಿರುವ ಕಾರಣ ಜೊತೆಗೆ ಆಂಟಿ ಆಕ್ಸಿಡೆಂಟ್ ಗಳು ಇರುವ ಕಾರಣ ದೇಹದ ಮೆಟಬಾಲಿಸಂ ಪ್ರಮಾಣ ಹೆಚ್ಚಾಗುತ್ತದೆ.
ಭಾರತ್ ಜೋಡೋ ಯಾತ್ರೆ: ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ ಮಹಾತ್ಮ ಗಾಂಧಿ ಮೊಮ್ಮಗ ʻತುಷಾರ್ʼ
ಪುದಿನಾ ಹೇಗೆ ಸೇವನೆ ಮಾಡುವುದು?
ಸ್ವಲ್ಪ ಪುದಿನ ಸೊಪ್ಪು ಮತ್ತು ಕೊತ್ತಂಬರಿ ಸೊಪ್ಪನ್ನು ಒಟ್ಟಿಗೆ ಬ್ಲೆಂಡ್ ಮಾಡಿಕೊಳ್ಳಿ.
ಇದಕ್ಕೆ ಸ್ವಲ್ಪ ನಿಂಬೆಹಣ್ಣಿನ ರಸ ಸೇರಿಸಿ ನಯವಾದ ಪೇಸ್ಟ್ ತಯಾರಿಸಿ.
ರುಚಿಗೆ ಸ್ವಲ್ಪ ಉಪ್ಪು ಹಾಕಿ.
ಇದನ್ನು ನೀವು ನಿಮ್ಮ ಚಟ್ನಿ ತರಹ ಉಪಯೋಗಿಸಬಹುದು. ಚಪಾತಿ, ಇಡ್ಲಿ ಇದರ ಜೊತೆಗೆ ಸವಿಯಬಹುದು.
ಆಪಲ್ ಸೈಡರ್ ವಿನೆಗರ್
ನೀವು ತಿನ್ನುವ ಆಹಾರಕ್ಕೆ ಆಪಲ್ ಸೈಡರ್ ವಿನೆಗರ್ ರುಚಿ ಕೊಡುತ್ತದೆ ನಿಜ. ನಿಮ್ಮ ಸೊಂಟದ ಭಾಗದ ಕೊಬ್ಬು ಕರಗಿಸುವಲ್ಲಿ ಸಹ ಇದರ ಪಾತ್ರ ದೊಡ್ಡದಿದೆ. ನಿಮ್ಮ ಹೊಟ್ಟೆ ಹಸಿವನ್ನು ಕಡಿಮೆ ಮಾಡಿ ಬೇರೆ ಬೇರೆ ಆಹಾರಗಳನ್ನು ತಿನ್ನದಂತೆ ಆಪಲ್ ಸೈಡರ್ ವಿನೆಗರ್ ನೋಡಿಕೊಳ್ಳುತ್ತದೆ. ಕ್ರಮೇಣವಾಗಿ ಇದರಿಂದ ನಿಮ್ಮ ದೇಹದ ಆಕಾರ ಕೂಡ ಒಳ್ಳೆಯ ತರಹ ಬರುತ್ತದೆ.
ಭಾರತ್ ಜೋಡೋ ಯಾತ್ರೆ: ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ ಮಹಾತ್ಮ ಗಾಂಧಿ ಮೊಮ್ಮಗ ʻತುಷಾರ್ʼ
ಇದರ ಸೇವನೆ ಹೇಗೆ?
ಒಂದು ಲೋಟ ನೀರು ತೆಗೆದುಕೊಂಡು ಅದರಲ್ಲಿ ಒಂದರಿಂದ ಎರಡು ಟೇಬಲ್ ಚಮಚ ಆಪಲ್ ಸೈಡರ್ ವಿನೆಗರ್ ಸೇರಿಸಿ.
ಊಟ ಮಾಡುವ ಮುಂಚೆ ಇದನ್ನು ಕುಡಿಯಿರಿ.
ಅಲೋವೆರಾ ಜ್ಯೂಸ್
ಆದಷ್ಟು ಬೇಗನೆ ಹೇಗಾದರೂ ಮಾಡಿ ಸೊಂಟದ ಸುತ್ತ ಇರುವ ಬೊಜ್ಜು ಕಡಿಮೆ ಮಾಡಿಕೊಳ್ಳಬೇಕು ಎಂದು ನೀವು ಅಂದುಕೊಂಡರೆ, ನಿಮಗಾಗಿ ಇಲ್ಲಿದೆ ಅಲೋವೆರಾ ಜ್ಯೂಸ್.
ಇದು ನಿಮ್ಮ ಹೊಟ್ಟೆಯ ಕೊಬ್ಬನ್ನು ಕರಗಿಸುತ್ತದೆ ಮತ್ತು ನಿಮ್ಮ ದೇಹದ ತೂಕವನ್ನು ನಿಯಂತ್ರಣ ಮಾಡುತ್ತದೆ. ವಿಶೇಷವಾಗಿ ಕರುಳಿನ ಚಲನೆಯಲ್ಲಿ ಇದು ಹೆಚ್ಚಿನ ಪಾತ್ರ ವಹಿಸುತ್ತದೆ ಮತ್ತು ಮೈ ಕೈ ಹಿಡಿದುಕೊಳ್ಳುವುದು ಅಥವಾ ಮಾಂಸ ಖಂಡಗಳ ದುರ್ಬಲತೆಯನ್ನು ಹೋಗಲಾಡಿಸುತ್ತದೆ.
ಭಾರತ್ ಜೋಡೋ ಯಾತ್ರೆ: ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ ಮಹಾತ್ಮ ಗಾಂಧಿ ಮೊಮ್ಮಗ ʻತುಷಾರ್ʼ
ಇದನ್ನು ಸೇವನೆ ಮಾಡುವುದು ಹೇಗೆ?
ಒಂದು ಟೀ ಚಮಚ ಜೀರಿಗೆ ಪೌಡರ್ ಜೊತೆಗೆ ಎರಡು ಟೇಬಲ್ ಚಮಚ ಅಲೋವೆರಾ ಜ್ಯೂಸ್ ಮಿಶ್ರಣ ಮಾಡಿ.
ಇದಕ್ಕೆ ಒಂದು ಲೋಟ ಉಗುರು ಬೆಚ್ಚಗಿನ ನೀರು ಸೇರಿಸಿ.
ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯಿರಿ.
ಇದನ್ನು ಕುಡಿದ ಒಂದು ಗಂಟೆಯ ನಂತರದಲ್ಲಿ ಏನನ್ನಾದರೂ ತಿನ್ನಬಹುದು.
ಈ ಮೇಲಿನ ಎಲ್ಲಾ ಪರಿಹಾರಗಳ ಜೊತೆಗೆ ನೀವು ವ್ಯಾಯಾಮ ಮತ್ತು ಉತ್ತಮವಾದ ಆಹಾರ ಪದ್ಧತಿಯನ್ನು ಅನುಸರಿಸುವುದು ಒಳ್ಳೆಯದು