ಕೆಎನ್ಎನ್ಡಿಜಿಟಲ್ ಡೆಸ್ಕ್ : ರಾಜಸ್ಥಾನದ ಭರತ್ಪುರದಲ್ಲಿ ಇಂದು ನಡೆದ ವಿದ್ಯಾರ್ಥಿ ಸಂಘದ ಚುನಾವಣೆಯ ಮತದಾನದಲ್ಲಿ ವಿಚಿತ್ರ ದೃಶ್ಯವೊಂದು ಕಂಡುಬಂದಿದೆ. ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳು ಮತದಾನ ಮಾಡಲು ಬಂದ ವಿದ್ಯಾರ್ಥಿನಿಯರ ಕಾಲು ಹಿಡಿದು ತಮಗೆ ವೋಟ್ ಹಾಕುವಂತೆ ಬೇಡಿಕೊಂಡಿದ್ದಾರೆ. ವಿದ್ಯಾರ್ಥಿ ಸಂಘದ ಅಭ್ಯರ್ಥಿಗಳು ಎಲ್ಲ ವಿದ್ಯಾರ್ಥಿನಿಯರ ಕಾಲು ಹಿಡಿದು ಅವರ ಪರವಾಗಿ ಮತಯಾಚನೆ ಮಾಡಿದ್ದು, ಇನ್ನು ಹೆಣ್ಣು ಮಕ್ಕಳು ಮತ ಹಾಕುವುದಾಗಿ ಭರವಸೆ ನೀಡಿದ ಬಳಿಕವೇ ಅವ್ರು ಕಾಲು ಬಿಟ್ಟಿದ್ದಾರೆ.
ಬೆಳಗ್ಗೆ 8 ಗಂಟೆಗೆ ಮತದಾನ ಆರಂಭ
ಭರತ್ಪುರ ಜಿಲ್ಲೆಯಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಗೆ ಬೆಳಗ್ಗೆ 8 ಗಂಟೆಯಿಂದ ಮತದಾನ ಆರಂಭವಾಗಿದೆ. ಜಿಲ್ಲೆಯ ಒಟ್ಟು 12 ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ ನಡೆಯುತ್ತಿದೆ. ಚುನಾವಣೆ ಹಿನ್ನೆಲೆಯಲ್ಲಿ ಕಾಲೇಜುಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಬ್ರಜ್ ವಿಶ್ವವಿದ್ಯಾಲಯದಿಂದ ಮೂವರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಎಬಿವಿಪಿಯಿಂದ ಹಿತೇಶ್ ಫೌಜ್ದಾರ್, ಎನ್ಎಸ್ಯುಐನಿಂದ ಪುಷ್ಪೇಂದ್ರ ಮತ್ತು ಸ್ವತಂತ್ರ ಅಭ್ಯರ್ಥಿ ರಾಹುಲ್ ಶರ್ಮಾ ಕಣದಲ್ಲಿದ್ದಾರೆ. ಇನ್ನು ಬ್ರಜ್ ವಿಶ್ವವಿದ್ಯಾಲಯದ ಮೂವರು ಅಭ್ಯರ್ಥಿಗಳ ನಡುವೆ ಸಮಾನ ಸ್ಪರ್ಧೆಯನ್ನ ಪರಿಗಣಿಸಲಾಗುತ್ತಿದೆ.
ಎಂಎಸ್ಜೆ ಕಾಲೇಜಿನಲ್ಲಿ ಚುನಾವಣೆ
ಎಂಎಸ್ ಜೆ ಕಾಲೇಜಿನಿಂದ ಎಬಿವಿಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಪವನ್ ಚಿಕನಾ ಕಣದಲ್ಲಿದ್ದಾರೆ. ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ವೀರೇಂದ್ರ ಗುರ್ಜರ್ ಸ್ಪರ್ಧಿಸಿದ್ದಾರೆ. ಗೌರವ್ ಲುಧವಾಯಿ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಜಂಟಿ ಕಾರ್ಯದರ್ಶಿ ಹುದ್ದೆಗೆ ಗೌರವ್ ಸಿನ್ಸಿನ್ವಾರ್ ನಾಮಪತ್ರ ಸಲ್ಲಿಸಿದ್ದಾರೆ. ಎಂಎಸ್ ಜೆ ಕಾಲೇಜಿನಲ್ಲಿ ಸುಮಾರು 6 ಸಾವಿರ ಮತದಾರರಿದ್ದಾರೆ.
ವೈರಲ್ ವಿಡಿಯೋ
राजस्थान के भरतपुर में छात्रसंघ चुनाव के दौरान अजब नजारा देखने को मिला। छात्र संघ चुनाव में वोट लेने के लिए लड़कियों के पैर पकड़ कर गुहार लगाते दिखे प्रत्याशी, सड़क पर दंडवत प्रणाम कर छात्र-छात्राओं के हाथ जोड़कर पैर पकड़ कर वोट मांगते रहे।#Rajasthan pic.twitter.com/ZqkXncPQml
— Hindustan (@Live_Hindustan) August 26, 2022