ವಿಜಯನಗರ: ಮಕ್ಕಳಾಗಲಿಲ್ಲವೆಂದು ಪತ್ನಿಯನ್ನೇ ಆಕೆಯ ಪತಿ ಹಾಗೂ ಕುಟುಂಬಸ್ಥರು ಸೇರಿ ಬಾಯಿಗೆ ಬಟ್ಟೆ ತುರುಕಿ ರುಬ್ಬುವ ಗುಂಡಿನಿಂದ ಜಜ್ಜಿ ಕೊಲೆ ಮಾಡಿರುವ ಅಮಾನವೀಯ ಘಟನೆ ವಿಜಯನಗರದಲ್ಲಿ ನಡೆದಿದೆ. ಈ ಕುರಿತು ಮಹಿಳೆಯ ಪೋಷಕರು ಕೊಟ್ಟೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈರಮ್ಮ ಮೃತ ಕೊಲೆಯಾದ. ಇವರ ಪತಿ ಆನಂದ ಕೊಟ್ರಬಸಪ್ಪ, ವೀರೇಶ, ಮತ್ತಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಹನ್ನೊಂದು ವರ್ಷಗಳ ಹಿಂದೆ ಪಟ್ಟಣದಲ್ಲಿ ಫೋಟೋಗ್ರಾಫರ್ ಆಗಿದ್ದ ಆನಂದ್ಗೆ ಈರಮ್ಮರನ್ನು ಮದುವೆ ಮಾಡಿಕೊಡಲಾಗಿತ್ತು.
ಮಕ್ಕಳಾಗದ ಕಾರಣ ಗಂಡ ಹಾಗೂ ಅತನ ಮನೆಯವರು ದಿನನಿತ್ಯ ಹೊಡೆಯುತ್ತಿದ್ದರು. ನವೆಂಬರ್ 16 ರಿಂದ 18ರ ಮೂರು ದಿನಗಳವರೆಗೆ ಈರಮ್ಮಗೆ ಹೊಡೆದು, ಬಳಿಕ ರುಬ್ಬುವ ಗುಂಡಿನಿಂದ ಮುಖ ಮತ್ತು ತಲೆಗೆ ಜಜ್ಜಿ ಕೊಲೆ ಮಾಡಿದ್ದಾರೆಂದು ಮೃತಳ ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.