ಮಂಗಳೂರು: ನಗರದದಲ್ಲಿ ಮಳೆಯಿಂದ ಶಿರಾಡಿ ಘಾಟ್ ಹೆದ್ದಾರಿ ಸಂಪೂರ್ಣ ಹದಗೆಟ್ಟಿದೆ. ಹೊಂಡ ಗುಂಡಿಯ ರಸ್ತೆಯಿಂದಾಗಿ ಕೈಗಾರಿಕೋದ್ಯಮಿಗಳಿಗೆ ದೊಡ್ಡ ಮಟ್ಟದಲ್ಲೇ ಆರ್ಥಿಕ ಹೊಡೆತ ಬೀಳುತ್ತಿದೆ.
BIGG NEWS: ಕಲಬುರಗಿಯಲ್ಲಿ ʼಪ್ರಿಯಾಂಕ್ ಖರ್ಗೆʼ ಕಾಣೆಯಾಗಿದ್ದಾರೆ ಬಿಜೆಪಿ ಪೋಸ್ಟರ್
ಇದೀಗ ಹೆದ್ದಾರಿ ರಿಪೇರಿಗಾಗಿ ಕೆನರಾ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ಸಂಘಟನೆ ರಾಜ್ಯಸಭಾ ಸದಸ್ಯರು, ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವಿರೇಂದ್ರ ಹೆಗ್ಗಡೆಯವರ ಮೊರೆ ಹೋಗಿದ್ದಾರೆ.ಮಂಗಳೂರು- ಬೆಂಗಳೂರು ನಡುವೆ ಸಂಪರ್ಕ ಕಲ್ಪಿಸೋ ಶಿರಾಡಿ ಘಾಟ್ . ವಾಣಿಜ್ಯ ವ್ಯವಹಾರದ ದೃಷ್ಟಿಯಿಂದ ನಿತ್ಯ ನೂರಾರು ಟ್ಯಾಂಕರ್, ಟ್ರಕ್, ಬಸ್ ಮತ್ತಿತರ ವಾಹನಗಳು ಈ ಹೆದ್ದಾರಿಯಲ್ಲಿ ಸಂಚರಿಸುತ್ತವೆ. ರಾಜ್ಯದ ಅತ್ಯಂತ ವಾಹನದಟ್ಟನೆ ಹೊಂದಿರೋ ರಸ್ತೆಯೂ ಹೌದು. ಆದರೆ ಇದೀಗ ಶಿರಾಡಿ ಘಾಟ್ ರಸ್ತೆ ಅಂದ್ರೆ ಪ್ರಯಾಣಿಕರು ಬೆಚ್ಚಿ ಬೀಳ್ತಾರೆ. ಇದಕ್ಕೆ ಕಾರಣ ಇಲ್ಲಿನ ರಸ್ತೆಗುಂಡಿಗಳು. ಕಳೆದ ಹಲವು ವರ್ಷಗಳಿಂದ ಈ ಸಮಸ್ಯೆ ಇದ್ದರೂ ಪರಿಹಾರ ಮಾತ್ರ ಕಂಡಿಲ್ಲ. ಹೀಗಾಗಿ ಮಂಗಳೂರಿನ ಕೆನರಾ ಚೇಂಬರ್ ಆಫ್ ಕಾರ್ಮಸ್ ಮತ್ತು ಇಂಡಸ್ಟ್ರಿ ಸಂಘಟನೆ ಧರ್ಮಸ್ಥಳ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ.ಡಿ ವಿರೇಂದ್ರ ಹೆಗ್ಗಡೆಯವರ ಮೊರೆ ಹೋಗಿದೆ.