ಬೆಂಗಳೂರು: ಮೆಕ್ಡೊನಾಲ್ಡ್ಸ್ ಆಹಾರಪ್ರಿಯರಿಗಾಗಿ ನೂತನವಾಗಿ ಐಕಾನಿಕ್ “ಚಿಕನ್ ಬಿಗ್ ಮ್ಯಾಕ್” ನನ್ನು ಪರಿಚಯಿಸುತ್ತಿದ್ದು, ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಇದರ ರಾಯಭಾರಿಯಾಗಿದ್ದಾರೆ.
ಮೆಕ್ಡೊನಾಲ್ಡ್ಸ್ ಎಂದರೆ ಪ್ರತಿಯೊಬ್ಬರಿಗೂ ಪ್ರಿಯಾದ್ದೆ, ಇವರ ಗ್ರಾಹಕರಿಗಾಗಿಯೇ ಇದೀಗ ಹೊಸ ಸೆಗ್ಮೆಂಟ್ ಬಿಡುಗಡೆ ಮಾಡಿದೆ. ಚಿಕನ್ ಬಿಗ್ ಮ್ಯಾಕ್ನ ಮತ್ತೊಂದು ವಿಶೇಷವೆಂದರೆ, ಸೆಹ್ವಾಗ್ ಅವರ ತಮಾಷೆಯ ಕ್ಷಣಗಳನ್ನು ಸವಿಯುವಂತೆ ಮಾಡುತ್ತದೆ. ೨೫ ಸೆಕೆಂಡ್ಗಳ ಟಿವಿಸಿ ಚಿಕನ್ ಬಿಗ್ ಮ್ಯಾಕ್ನಲ್ಲಿ ಸೆಹ್ವಾಗ್ ಅವರ ವಿನೋದಮಯ ಕ್ಷಣಗಳು ಬಂದು ಹೋಗಲಿದೆ. ಸೆಹ್ವಾಗ್ ಅವರು ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗೆ ಅಚ್ಚುಮೆಚ್ಚು. ಅವರ ವಿನೋಧಮಯ ಕ್ಷಣಗಳನ್ನು ಚಿಕನ್ ಬಿಗ್ ಮ್ಯಾಕ್ ಖರೀದಿ ವೇಳೆ ಕಣ್ತುಂಬಿಕೊಳ್ಳಬಹುದು.
ಮೆಕ್ಡೋನಾಲ್ಡ್ಸ್ನ ಮಾರುಕಟ್ಟೆ ಮತ್ತು ಸಂವಹನ ಹಿರಿಯ ನಿರ್ದೇಶಕ ಆರ್. ಪಿ. ಅರವಿಂದ್, ಭಾರತದಲ್ಲಿ ಹೊಸ ಮೆನುವನ್ನು ಸೇರ್ಪಡೆ ಮಾಡುತ್ತಿರುವುದು ಹೆಚ್ಚು ಖುಷಿ ನೀಡಿದೆ. ಅದರಲ್ಲೂ ಈ ನೂತನ ಚಿಕನ್ ಬಿಗ್ ಮ್ಯಾಕ್ಗೆ ಸೆಹ್ವಾಗ್ ಅವರು ರಾಯಭಾರಿಯಾಗಿರುವುದು ಇನ್ನಷ್ಟು ಸಂತಸವೆನಿಸುತ್ತದೆ. ಭಾರತದ ಎಲ್ಲಾ ಮೆಕ್ಡೊನಾಲ್ಡ್ಸ್ ಶಾಖೆಯಲ್ಲೂ ಈ ನೂತನ ಚಿಕನ್ ಬಿಗ್ ಮ್ಯಾಕ್ ಲಭ್ಯವಿರಲಿದ್ದು, ಗ್ರಾಹಕರು ಈ ಹೊಸ ಸೇರ್ಪಡೆಯನ್ನು ಹೆಚ್ಚು ಇಷ್ಟಪಡಲಿದ್ದಾರೆ ಎಂದರು.
DDB ಮುದ್ರಾ ಇದರ ಕ್ರಿಯೇಟಿವ್ ಹೆಡ್ ವೆಸ್ಟ್ ಆಗಿರುವ ಪಲ್ಲವಿ ಚಕ್ರವರ್ತಿ ಅವರು ಮಾತನಾಡುತ್ತಾ, “ಚಿಕನ್ ಬಿಗ್ ಮ್ಯಾಕ್ ® ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಅಂತರರಾಷ್ಟ್ರೀಯ ಐಕಾನ್ ಆಗಿದೆ. ಭಾರತದಲ್ಲಿ ಅದರ ಚಿಕನ್ ವೇರಿಯಂಟ್ ಅನ್ನು ಪ್ರಾರಂಭಿಸಲು, ನಾವು ಐಕಾನಿಕ್ ಪ್ರಚಾರವನ್ನು ನಿರ್ಮಿಸಲು ಬಯಸಿದ್ದೇವೆ. ಆದ್ದರಿಂದ, ಚಿಕನ್ ಬಿಗ್ ಮ್ಯಾಕ್ ® ಗೆ ಹೋಲಿಸಿದರೆ ಯಾವುದೇ ಖ್ಯಾತನಾಮರು ಹೇಗೆ ಮಸುಕಾಗುತ್ತದೆ ಎಂಬುದನ್ನು ತೋರಿಸಲು ನಾವು ಖ್ಯಾತ ಭಾರತೀಯ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರೊಂದಿಗೆ ಪಾಲುದಾರಿಕೆ ಹೊಂದಿದ್ದೇವೆ.” ಎಂದು ಹೇಳಿದರು.
ಚಿಕನ್ ಬಿಗ್ ಮ್ಯಾಕ್ ® McDelivery® ಅಪ್ಲಿಕೇಶನ್ನಲ್ಲಿ ಡೆಲಿವರಿ, ಟೇಕ್ಅವೇ ಮತ್ತು ಆನ್ ದ ಗೋ ಹಾಗೆಯೇ ಪಶ್ಚಿಮ ಮತ್ತು ದಕ್ಷಿಣ ಭಾರತದ ಮೆಕ್ಡೊನಾಲ್ಡ್ಸ್ ರೆಸ್ಟೋರೆಂಟ್ಗಳಲ್ಲಿ ಡೈನ್-ಇನ್ ಮತ್ತು ಡ್ರೈವ್-ಥ್ರೂಗಳಲ್ಲಿಯೂ ಲಭ್ಯವಿದೆ.
BREAKING NEWS: ವಿಧಾನಸೌಧದಲ್ಲಿ ಅನಧಿಕೃತ 10.5 ಲಕ್ಷ ನಗದು ಪತ್ತೆ ಪ್ರಕರಣ: ವಿಚಾರಣೆಗೆ ಹಾಜರಾದ ಎಇ ಜಗದೀಶ್ ಬಂಧನ
ಧರ್ಮ ಒಡೆಯಲು ಮುಂದಾದವರ ಬಾಯಿಂದ ಮತ್ತೇನು ನಿರೀಕ್ಷೆ ಸಾಧ್ಯ: ಸಿದ್ದು ವಿರುದ್ಧ ಶಾಸಕ ತೇಲ್ಕೂರ ಆಕ್ರೋಶ
ಬೆಂಗಳೂರು – ಮೈಸೂರು ದಶಪಥ ಹೆದ್ದಾರಿ ಫೆಬ್ರವರಿ ಅಂತ್ಯಕ್ಕೆ ಲೋಕಾರ್ಪಣೆ – ನಿತಿನ್ ಗಡ್ಕರಿ