ದುಬೈನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿ 2025ರ ಮುಖಾಮುಖಿಗೆ ಒಂದು ದಿನ ಮೊದಲು ಭಾರತೀಯ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ಐಸ್ ಪ್ಯಾಕ್ ಮೇಲೆ ತಮ್ಮ ಎಡಗಾಲು ಇಟ್ಟುಕೊಂಡಿರುವುದನ್ನ ಕಾಣಬಹುದು.
ಇತ್ತೀಚೆಗೆ ಫಾರ್ಮ್ಗಾಗಿ ಹೆಣಗಾಡುತ್ತಿರುವ 36 ವರ್ಷದ ಆಟಗಾರ, ನಿಗದಿತ ಅಭ್ಯಾಸ ಅವಧಿಗೆ ಎರಡು ಮೂರು ಗಂಟೆಗಳ ಮೊದಲು ಐಸಿಸಿ ಅಕಾಡೆಮಿಗೆ ಆಗಮಿಸಿದರು. ವಿಶೇಷವಾಗಿ ಸ್ಪಿನ್ ಬೌಲಿಂಗ್ ವಿರುದ್ಧ ಗಮನ ಹರಿಸಿದ್ದಾರೆ ಎನ್ನಲಾಗ್ತಿದೆ.
ಕೊಹ್ಲಿ ಕಾಲಿಗೆ ಐಸ್ ಪ್ಯಾಕ್ ಇಟ್ಟುಕೊಂಡು ಡ್ರೆಸ್ಸಿಂಗ್ ರೂಮ್ನಲ್ಲಿ ಕುಳಿತಿರುವ ಚಿತ್ರಗಳನ್ನ ಹಲವಾರು ಪತ್ರಕರ್ತರು ಹಂಚಿಕೊಂಡಿದ್ದು, ಇದು ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಆತಂಕವನ್ನು ಹೆಚ್ಚಿಸಿದೆ.
ಆದಾಗ್ಯೂ, ಅವರ ಫಿಟ್ನೆಸ್ ಬಗ್ಗೆ ಟೀಮ್ ಮ್ಯಾನೇಜ್ಮೆಂಟ್ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಅಂದ್ಹಾಗೆ, ಮೊಣಕಾಲು ಗಾಯದಿಂದಾಗಿ ಕೊಹ್ಲಿ ಈ ಹಿಂದೆ ನಾಗ್ಪುರದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಿಂದ ಹೊರಗುಳಿದಿದ್ದರು.
Virat Kohli spotted with an ice pack on his ankle after an intense net session ahead of the high-voltage INDvPAK clash. (RevSportz)
Just a precaution or a concern? 🤔 pic.twitter.com/7dld12ogLj
— CricketGully (@thecricketgully) February 22, 2025
ಕೀಲು ನೋವಿನಿಂದ ಕಷ್ಟ ಪಡ್ತಿದ್ದೀರಾ.? 3 ತಿಂಗಳಲ್ಲಿ ಕಮ್ಮಿ ಮಾಡುವ ಅದ್ಭುತ ‘ಔಷಧ’ವಿದು.!
ಒಂದು ಎಲೆ, ಒಂದೇ ಒಂದು ‘ಎಲೆ’.! ನೀವು ಪ್ರತಿದಿನ ತಿನ್ನುತ್ತಿದ್ದರೆ, ಯಾವುದೇ ಸಮಸ್ಯೆ ಬರೋದಿಲ್ಲ
ಕೀಲು ನೋವಿನಿಂದ ಕಷ್ಟ ಪಡ್ತಿದ್ದೀರಾ.? 3 ತಿಂಗಳಲ್ಲಿ ಕಮ್ಮಿ ಮಾಡುವ ಅದ್ಭುತ ‘ಔಷಧ’ವಿದು.!