ನವದೆಹಲಿ : ಭಾರತೀಯ ಕ್ರಿಕೆಟ್ ದಿಗ್ಗಜರಾದ ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ವಿಶ್ವದಾದ್ಯಂತ ಹೆಚ್ಚು ಫಾಲೋವರ್ಸ್ ಹೊಂದಿರುವ ಕ್ರಿಕೆಟಿಗರು. ಮೈದಾನದಲ್ಲಿ ಅವರ ಅಸಾಧಾರಣ ಆಟದ ಬಗ್ಗೆ ಯಾವುದೇ ಉಲ್ಲೇಖದ ಅಗತ್ಯವಿಲ್ಲ. ಯಾಕಂದ್ರೆ, ಸ್ವತಃ ಅವರ ಪ್ರದರ್ಶನವೇ ಮಾತನಾಡುತ್ತೆ. ಮೈದಾನದ ಹೊರಗೆ ಸಹ, ವಿಶೇಷವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಮಿಲಿನಿಯಲ್’ಗಳಲ್ಲಿ ಪಾಲೋವರ್ಸ್ ಹೊಂದಿದ್ದಾರೆ.
ಇತ್ತೀಚೆಗೆ, ಈ ಇಬ್ಬರೂ ಕ್ರಿಕೆಟಿಗರು ಸಣ್ಣ ವೀಡಿಯೊದಲ್ಲಿ ತಮ್ಮ ನೃತ್ಯ ಪ್ರತಿಭೆಯನ್ನ ಪ್ರದರ್ಶಿಸುತ್ತಿದ್ದು, ಸಧ್ಯ ಸಾಮಾಜೀಕ ಜಾಲತಾಣದಲ್ಲಿ ವೈರಲ್ ಆಗದೆ.
ವಿಡಿಯೋ ನೋಡಿ.!
You know how we do 😎 @imVkohli pic.twitter.com/YAJVUB5bYP
— hardik pandya (@hardikpandya7) September 18, 2022
ಅಂದ್ಹಾಗೆ, ಆಸ್ಟ್ರೇಲಿಯಾ ವಿರುದ್ಧದ ಟಿ20ಐ ಸರಣಿಗೆ ಮುಂಚಿತವಾಗಿ, ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ವಿರಾಟ್ ಕೊಹ್ಲಿ ತಂಡದ ಮೂರನೇ ಓಪನರ್ ಆಗಲಿದ್ದಾರೆ ಎಂದು ಖಚಿತಪಡಿಸಿದ್ದಾರೆ. ಮುಂದಿನ ತಿಂಗಳು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್’ಗಾಗಿ ಆತಿಥೇಯರು ತಮ್ಮ ಅಂತಿಮ ಹಂತದ ಸಿದ್ಧತೆಗಳನ್ನ ಪ್ರಾರಂಭಿಸುತ್ತಿದ್ದಂತೆ ರೋಹಿತ್ ಕೊಹ್ಲಿ ಕೆಲವು ಪಂದ್ಯಗಳಲ್ಲಿ ಬ್ಯಾಟಿಂಗ್ ಆರಂಭಿಸುವ ಬಗ್ಗೆ ಸುಳಿವು ನೀಡಿದರು.