ಹೊಸದಿಲ್ಲಿ: ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಏಷ್ಯಾಕಪ್ 2022ರ ಸೂಪರ್ ಫೋರ್ ಮುಖಾಮುಖಿಯಲ್ಲಿ ವಿರಾಟ್ ಕೊಹ್ಲಿ ಅಫ್ಘಾನಿಸ್ತಾನ ವಿರುದ್ಧ 71ನೇ ಶತಕ ಸಿಡಿಸಿದ್ದು, ಭಾರತ ತನ್ನ ಇನಿಂಗ್ಸ್ನ ಅಂತ್ಯಕ್ಕೆ 2 ವಿಕೆಟ್ಗೆ 212 ರನ್ಗಳ ಬೃಹತ್ ಮೊತ್ತವನ್ನು ಗಳಿಸಲು ನೆರವಾಯಿತು.
1020 ದಿನಗಳು ಮತ್ತು 83 ಇನ್ನಿಂಗ್ಸ್ಗಳ ನಂತರ ಕೊಹ್ಲಿ ಮೊದಲ ಬಾರಿಗೆಭರ್ಜರಿ ಶತಕ ಸಿಡಿಸಿದ್ದಾರೆ. ನವೆಂಬರ್ 2019 ರಲ್ಲಿ ಈಡನ್ ಗಾರ್ಡನ್ಸ್ನಲ್ಲಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಅವರ ಕೊನೆಯ ಶತಕ ಬಂದಿತು.
ವಿರಾಟ್ ಕೊಹ್ಲಿ ತಮ್ಮ ಶತಕವನ್ನು ಪತ್ನಿ ಅನುಷ್ಕಾ ಶರ್ಮಾ ಮತ್ತು ಮಗಳು ವಾಮಿಕಾಗೆ ಅರ್ಪಿಸಿದ್ದಾರೆ.
“ನಾನು ಈ ಶತಕವನ್ನು ನನ್ನ ಹೆಂಡತಿ ಮತ್ತು ನನ್ನ ಮಗಳಿಗೆ ಅರ್ಪಿಸುತ್ತೇನೆ” ಎಂದು ಸ್ಟಾರ್ ಸ್ಪೋರ್ಟ್ಸ್ಗೆ ನೀಡಿದ ಸಂದರ್ಶನದಲ್ಲಿ ಮಧ್ಯ ಇನಿಂಗ್ಸ್ ವಿರಾಮದ ಸಮಯದಲ್ಲಿ ಕೊಹ್ಲಿ ಹೇಳಿದರು.
BIG NEWS: ಟರ್ಬನ್, ಕಿರ್ಪಾನ್ಅನ್ನು ʻಹಿಜಾಬ್ʼನೊಂದಿಗೆ ಹೋಲಿಸಬೇಡಿ: ಸುಪ್ರೀಂ ಕೋರ್ಟ್