ಕೆಎನ್ಎನ್ಡಿಜಿಟಲ್ ಡೆಸ್ಕ್ : ಬೀದಿ ನಾಯಿಗಳ ದಾಳಿ ಅಸಾಮಾನ್ಯವಲ್ಲ.. ಆದ್ರೆ, ಇತ್ತೀಚಿಗೆ ಸಾಕು ನಾಯಿಗಳು ಸಹ ವ್ಯಕ್ತಿಗಳ ಮೇಲೆ ದಾಳಿ ಮಾಡುವ ಪ್ರಕರಣಗಳು ಬೆಳಕಿಗೆ ಬರ್ತಿವೆ. ಅದ್ರಂತೆ, ಜೊಮ್ಯಾಟೋ ಡೆಲಿವರಿ ಬಾಯ್ ಮೇಲೆ ನಾಯಿಯೊಂದು ದಾಳಿ ಮಾಡಿದ್ದು, ಈ ಘಟನೆಯ ವೀಡಿಯೊ ಅಂತರ್ಜಾಲದಲ್ಲಿ ವೈರಲ್ ಆಗಿದೆ.
ವೈರಲ್ ವೀಡಿಯೊದಲ್ಲಿ ಜೊಮ್ಯಾಟೋ ಡೆಲಿವರಿ ಬಾಯ್, ಲಿಫ್ಟ್ನಿಂದ ನಿರ್ಗಮಿಸುವುದನ್ನ ತೋರಿಸುತ್ತದೆ, ಮತ್ತು ಆತ ಮುಂದೆ ಸಾಗಿದಾಗ, ತನ್ನ ಸಾಕು ನಾಯಿ (ಜರ್ಮನ್ ಶೆಫರ್ಡ್) ನೊಂದಿಗೆ ಒಬ್ಬ ವ್ಯಕ್ತಿ ಲಿಫ್ಟ್ಗೆ ಪ್ರವೇಶಿಸುತ್ತಾನೆ. ಆಗ ಡೆಲಿವರಿ ಬಾಯ್ ಮೇಲೆ ಎಗರಿದ ನಾಯಿ, ಆತನ ಖಾಸಗಿ ಅಂಗಕ್ಕೆ ಕಚ್ಚಿದೆ. ನಂತ್ರ ಸಾಕುಪ್ರಾಣಿ ಮಾಲೀಕ ಒಂದು ಹೆಜ್ಜೆ ಹಿಂದೆ ಸರಿಯುತ್ತಾನೆ.
ಕ್ಯಾಮೆರಾದಲ್ಲಿ ಸೆರೆಯಾದ ತುಣುಕುಗಳು ಜೊಮ್ಯಾಟೋ ಉದ್ಯೋಗಿಯು ನಾಯಿಯಿಂದ ಬಜಾವ್ ಆಗಲು ಅದನ್ನ ದೂರ ತಳ್ಳುವುದನ್ನ ನೋಡಬೋದು. ಇನ್ನು ವೀಡಿಯೊದ ಕೊನೆಯಲ್ಲಿ, ಬಲಿಪಶುವು ತನ್ನ ಖಾಸಗಿ ಪ್ರದೇಶದಾದ್ಯಂತ ರಕ್ತದಿಂದ ತೀವ್ರ ನೋವಿನಿಂದ ಬಳಲುತ್ತಿರುವುದನ್ನ ಕಾಣಬಹುದು.
ಈ ಘಟನೆಯು ಡೆಲಿವರಿ ವ್ಯಕ್ತಿಯನ್ನ ತೀವ್ರವಾಗಿ ಗಾಯಗೊಳಿಸಿದ್ದು, ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ವರದಿಯಾಗಿದೆ.
ಈ ವೀಡಿಯೊ ನವಿ ಮುಂಬೈನ ಪನ್ವೇಲ್ʼನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಈ ವಿಡಿಯೋ ಅಪ್ಲೋಡ್ ಆಗುತ್ತಿದ್ದಂತೆಯೇ ಅದು ಇಂಟರ್ನೆಟ್ನಲ್ಲಿ ವೈರಲ್ ಆಗಿತ್ತು. ನೆಟ್ಟಿಗರು ಇದನ್ನ ವ್ಯಾಪಕವಾಗಿ ಹಂಚಿಕೊಂಡಿದ್ದಾರೆ ಮತ್ತು ನಾಯಿ ದಾಳಿಗಳ ಬಗ್ಗೆ ತಮ್ಮ ಕೋಪ ವ್ಯಕ್ತಪಡಿಸಿದ್ದಾರೆ ಮತ್ತು ಈ ವಿಷಯದ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳನ್ನ ವಿನಂತಿಸಿದ್ದಾರೆ. ಇನ್ನು ಒಬ್ಬ ಬಳಕೆದಾರ “ಮಾಲೀಕರಿಗೆ ಶಿಕ್ಷೆಯಾಗಬೇಕು, ಬಹುಶಃ ಇದಕ್ಕಾಗಿ ಜೈಲಿಗೆ ಸಹ ಹಾಕಬೇಕು” ಎಂದಿದ್ದಾನೆ.
#Zomato के इस Delivery Boy को लिफ्ट से बाहर निकलते ही कुत्ते ने ‘प्राइवेट पार्ट’ पर काट लिया गया।
घटना पनवेल, नवी मुंबई की बताई जा रही है।@zomato #Mumbai #Dog pic.twitter.com/zA89nDCkWD
— Sanjay Desai (@sanjaydesai26) September 9, 2022