ಕೆಎನ್ಎನ್ಡಿಜಿಟಲ್ ಡೆಸ್ಕ್ : ವಿದ್ಯಾರ್ಥಿಯೊಬ್ಬ ಮದುವೆ ಆಹ್ವಾನ ನೀಡದಿದ್ರೂ ರುಚಿರುಚಿಯಾದ ಊಟಕ್ಕಾಗಿ ಮದುವೆ ಮನೆಗೆ ಹೋಗಿದ್ದು, ವರನ ಬಳಿಯೋಗಿ ತಪ್ಪೋಪ್ಪಿಕೊಂಡಿರುವ ಪ್ರಸಂಗವೊಂದು ನಡೆದಿದೆ. ವಿದ್ಯಾರ್ಥಿ, ವರನೊಂದಿಗಿನ ನಡೆಸಿದ ಸಂಭಾಷಣೆ ಸಧ್ಯ ವೈರಲ್ ವೀಡಿಯೊ ಆಗಿದೆ.
ಹೌದು, ಹಾಸ್ಟೇಲ್’ನಲ್ಲಿರುವ ವಿದ್ಯಾರ್ಥಿಯೊಬ್ಬ ಊಟಕ್ಕಾಗಿ ಮದುವೆ ಮನೆಗೆ ಹೋಗಿದ್ದು, ವರನ ಬಳಿಗೆ ಹೋಗಿ ಧೈರ್ಯವಾಗಿ ತಪ್ಪೊಪ್ಪಿಕೊಂಡಿದ್ದಾನೆ. ಇನ್ನು ವಿದ್ಯಾರ್ಥಿಯ ಪ್ರಮಾಣಿಕತೆಗೆ ಮನಸೋತ ವರ, ನೀನು ಊಟ ಮಾಡಿ, ನಿನ್ನ ಸ್ನೇಹಿತರಿಗೂ ಪಾರ್ಸಲ್ ತೆಗೆದುಕೊಂಡು ಹೋಗು ಎನ್ನುವ ಮೂಲಕ ಹೃದಯ ವೈಶಾಲ್ಯತೆ ಮೆರೆದಿದ್ದಾನೆ.
ವರನೊಂದಿಗಿನ ನಡೆಸಿದ ಸಂಭಾಷಣೆ ವೀಡಿಯೋ ಈಗ ವೈರಲ್
ಅಸಲಿಗೆ ಮದುವೆ ಮನೆಯನ್ನ ಪ್ರವೇಶಿಸಿದ ವಿದ್ಯಾರ್ಥಿ, ವರನ ಬಳಿಗೆ ಹೋಗಿ “ನಿಮ್ಮ ಹೆಸರು ಏನೆಂದು ನನಗೆ ತಿಳಿದಿಲ್ಲ. ನಾನು ಹಾಸ್ಟೆಲ್’ನಲ್ಲಿ ಉಳಿದುಕೊಂಡಿದ್ದು, ನನಗೆ ಹಸಿವಾಗಿತ್ತು. ಹಾಗಾಗಿ ನಾನು ಊಟ ಮಾಡಲು ಇಲ್ಲಿಗೆ ಬಂದಿದ್ದೇನೆ. ನಿಮಗೆ ಏನಾದರೂ ಸಮಸ್ಯೆ ಇದೆಯೇ?” ಎಂದು ವಿದ್ಯಾರ್ಥಿ ವರನಿಗೆ ಕೇಳಿದ್ದಾನೆ. ಇನ್ನು ವಿದ್ಯಾರ್ಥಿಯ ಮಾತುಗಳನ್ನ ತಾಳ್ಮೆಯಿಂದ ಕೇಳಿಸಿಕೊಂಡ ವರ, ಅವನ ಪ್ರಾಮಾಣಿಕ ತಪ್ಪೊಪ್ಪಿಗೆಗೆ ಮನಸೋತು, “ಇಲ್ಲ, ನನಗೆ ಯಾವುದೇ ಸಮಸ್ಯೆಯಿಲ್ಲ. ನೀವು ಊಟ ಮಾಡಿ ಮತ್ತು ನಿಮ್ಮ ಹಾಸ್ಟೆಲ್’ನಲ್ಲಿರುವ ಸ್ನೇಹಿತರಿಗೂ ಆಹಾರ ಪ್ಯಾಕ್ ಮಾಡಿಕೊಂಡು ಹೋಗಿ” ಎಂದಿದ್ದಾರೆ.
ಇಂದು ಅಂತರ್ಜಾಲದಲ್ಲಿ ನೋಡಲಿರುವ ಅತ್ಯಂತ ಸ್ವೀಟ್ ವೀಡಿಯೊ ಇದಾಗಿದೆ ಎಂದು ಐಎಎಸ್ ಅಧಿಕಾರಿ ಅವನೀಶ್ ಶರಣ್ ಈ ವಿಡಿಯೋವನ್ನ ಪೋಸ್ಟ್ ಮಾಡಿದ್ದಾರೆ. ಸಧ್ಯ ಇದು ವೈರಲ್ ಆಗಿದ್ದು, 90 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನ ಪಡೆದಿದೆ.
ವೈರಲ್ ವಿಡಿಯೋ ಇಲ್ಲಿದೆ.!
God Bless You.❤️ pic.twitter.com/0Cu0rDdZoI
— Awanish Sharan (@AwanishSharan) December 1, 2022
ಭಾರತೀಯ ನೌಕಾಪಡೆಗೆ ಅಗ್ನಿವೀರ್ ಯೋಜನೆಯಡಿಯಲ್ಲಿ 341 ಮಹಿಳಾ ನಾವಿಕರು ಸೇರ್ಪಡೆ : ನೌಕಾಪಡೆ ಮುಖ್ಯಸ್ಥ ಮಾಹಿತಿ
TikTok ಮತ್ತು ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಮೇಘಾ ಠಾಕೂರ್ ಅಕಾಲಿಕ ನಿಧನ | Megha Thakur