ನವದೆಹಲಿ : ಇತ್ತೀಚಿನ ದಿನಗಳಲ್ಲಿ 17 ಸೆಕೆಂಡುಗಳ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೀಕ್ಷಿಸಲ್ಪಡುತ್ತಿದ್ದು, ಸಾವಿರಾರು ನೆಟ್ಟಿಗರ ಕಣ್ಣಲ್ಲಿ ನೀರು ತರಿಸುತ್ತಿದೆ. ಈ ವಿಡಿಯೋದಲ್ಲಿ ಭಾರತೀಯ ಸೇನಾ ಸೈನಿಕರೊಬ್ಬ ಗಡಿ ಕರ್ತವ್ಯದಲ್ಲಿ ಮುಳುಗಿರುವ ದೃಶ್ಯವಿದೆ, ಅವ್ರು ಅಂದು ತಮ್ಮ ಹುಟ್ಟುಹಬ್ಬವಿದೆ ಅನ್ನೋದನ್ನೇ ಮರೆತಿದ್ದಾರೆ. ಮಗಳು ಮಧ್ಯರಾತ್ರಿಯಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರಿದಾಗ ತಂದೆ ಭಾವುಕರಾಗುವುದನ್ನ ಮತ್ತು ಅವ್ರು ತಮ್ಮ ಹುಟ್ಟುಹಬ್ಬವನ್ನ ನೆನಪಿಸುವುದನ್ನು ವೈರಲ್ ವಿಡಿಯೋ ತೋರಿಸುತ್ತದೆ.
ಈ ವೈರಲ್ ವೀಡಿಯೊದಲ್ಲಿ, ಒಬ್ಬ ಸೈನಿಕ ಕರ್ತವ್ಯದಲ್ಲಿದ್ದಾರೆ. ಮಧ್ಯರಾತ್ರಿಯಲ್ಲಿ, ಅವರಿಗೆ ಅವ್ರ ಮಗಳಿಂದ ವೀಡಿಯೊ ಕರೆ ಬರುತ್ತದೆ. ಆಕೆ “ಜನ್ಮದಿನದ ಶುಭಾಶಯಗಳು, ಅಪ್ಪಾ” ಎಂದು ಹೇಳಿದ ತಕ್ಷಣ, ಸೈನಿಕ ಅಚ್ಚರಿಗೊಳ್ಳುತ್ತಾರೆ. ನಂತ್ರ ಮುಖದಲ್ಲಿ ಸಣ್ಣ ನಗು ಹರಡುತ್ತದೆ. ನಂತರ ಅವ್ರು ದೇಶವನ್ನು ಕಾಪಾಡುವಾಗ, ತನ್ನ ಜೀವನದ ಅತ್ಯಂತ ವಿಶೇಷ ದಿನವನ್ನ ಮರೆತಿದ್ದೇನೆ ಎಂದು ಅರಿತುಕೊಳ್ಳುತ್ತಾನೆ.
X (ಹಿಂದೆ ಟ್ವಿಟರ್) ನಲ್ಲಿ @SuvarnBharat ಎಂಬ ಹ್ಯಾಂಡಲ್ ಹಂಚಿಕೊಂಡ ಈ ವೀಡಿಯೊ ಈಗಾಗಲೇ 183,000 ಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು 14,000 ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ. ಈ ವೀಡಿಯೊ ಮತ್ತೊಮ್ಮೆ ಸಾರ್ವಜನಿಕರನ್ನ ನಮ್ಮ ಸೈನಿಕರು ನಮ್ಮನ್ನು ರಕ್ಷಿಸಲು ಹಗಲು ರಾತ್ರಿ ಎದುರಿಸುತ್ತಿರುವ ಪರಿಸ್ಥಿತಿಗಳ ಬಗ್ಗೆ ಯೋಚಿಸುವಂತೆ ಮಾಡಿದೆ. ಈ ವೀಡಿಯೊದ ಬಗ್ಗೆ ನೆಟ್ಟಿಗರು ಉದಾರವಾಗಿ ಕಾಮೆಂಟ್ ಮಾಡುತ್ತಿದ್ದಾರೆ.
ಒಬ್ಬ ಬಳಕೆದಾರ, “ನಮ್ಮ ರಕ್ಷಕರಿಗೆ ನಮಸ್ಕಾರ” ಎಂದು ಹೇಳಿದರು. ಮತ್ತೊಬ್ಬರು, “ನಾವು ಶಾಂತಿಯುತವಾಗಿ ಮಲಗಲು ಭಾರತೀಯ ಸೇನೆಯೇ ಕಾರಣ” ಎಂದು ಹೇಳಿದರು. ಮತ್ತೊಬ್ಬರು, “ನಾವು ಭಾರತೀಯ ಸೇನೆಯ ಬಗ್ಗೆ ಹೆಮ್ಮೆಪಡುತ್ತೇವೆ” ಎಂದು ಕಾಮೆಂಟ್ ಮಾಡಿದ್ದಾರೆ.
An Indian soldier is so engrossed in his duties that he forgets his birthday and his daughter wishing him should touch your chord pic.twitter.com/2lLh6Un0Mz
— Maithili (@SuvarnBharat) January 5, 2026








