ನವದೆಹಲಿ: ಉತ್ತರ ಪ್ರದೇಶದ ಉನ್ನಾವೊದಲ್ಲಿ ನಡೆದ ಅತ್ಯಂತ ವಿಲಕ್ಷಣ ಮತ್ತು ವಿಚಿತ್ರ ಘಟನೆಯಲ್ಲಿ, ಬೀದಿ ಗೂಳಿಯೊಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್ಬಿಐ) ಶಹಗಂಜ್ ಶಾಖೆಗೆ ಪ್ರವೇಶಿಸಿದೆ. . ಸದರ್ ಬಜಾರ್ ಪ್ರದೇಶದಲ್ಲಿರುವ ಬ್ಯಾಂಕಿನ ಮುಖ್ಯ ಶಾಖೆಯಲ್ಲಿ ಈ ಘಟನೆ ನಡೆದಿದ್ದು, ಸಿಬ್ಬಂದಿ, ಗ್ರಾಹಕರು ಮತ್ತು ಇತರರಲ್ಲಿ ಸಾಕಷ್ಟು ಭಯವಾಗಿದೆ ಎನ್ನಲಾಗಿದೆ. ಕೆಲವು ಮಂದಿ ನೆಟ್ಟಿಗರು ಹೊರಗೆ ಸೆಕೆ ಇದ್ದ ಕಾರಣಕ್ಕೆ ಗೂಳಿ ಬ್ಯಾಂಕ್ ಒಳಗೆ ಬಂದಿದೆ ಅಂತ ಹೇಳಿದ್ದಾರೆ.
ಈ ತಮಾಷೆಯ ಕ್ಷಣವನ್ನು ಸೆರೆಹಿಡಿಯುವ ವೀಡಿಯೊದಲ್ಲಿ ಗೂಳಿ ಬ್ಯಾಂಕಿನ ಆವರಣದ ನಡುವೆ ಶಾಂತವಾಗಿ ನಿಂತಿರುವುದನ್ನು ಕಾಣಬಹುದಾಗಿದೆ , ಘಟನೆಯನ್ನು ಸೆರೆ ಹಿಡಿದಿರುವ ವ್ಯಕ್ತಿಯ ಧ್ವನಿಯು ಗ್ರಾಹಕರಿಗೆ ತಮ್ಮ ಅಂತರವನ್ನು ಕಾಪಾಡಿಕೊಳ್ಳಲು ಸೂಚನೆ ನೀಡುವುದನ್ನು ಕೇಳಬಹುದಾಗಿದೆ.
BULL Entered SBI Bank and reached CASH Counter 🤣
Need more Money in BULL Market.🤣 pic.twitter.com/2DFl0meFlP— Open Interest (@OpenInterestLiv) January 10, 2024