ರೊಮೇನಿಯಾ : ಹೆಚ್ಚುತ್ತಿರುವ ಶಕ್ತಿ ಮತ್ತು ಹವಾಮಾನ ಬಿಕ್ಕಟ್ಟಿನೊಂದಿಗೆ ಅನೇಕ ದೇಶಗಳು ಸಾರ್ವಜನಿಕ ಸಾರಿಗೆಯ ಬಳಕೆಯನ್ನು ಪ್ರೋತ್ಸಾಹಿಸುತ್ತಿವೆ. ಅದೇ ಪ್ರವೃತ್ತಿಯನ್ನು ಅನುಸರಿಸಿ, ಸ್ಥಳೀಯ ಸಾರ್ವಜನಿಕ ಸಾರಿಗೆಯ ಬಳಕೆಯನ್ನು ಬೆಂಬಲಿಸುವಾ ದೃಷ್ಠಿಯಿಂದ ರೊಮೇನಿಯಾ ಆರೋಗ್ಯಕರ ಜೀವನಶೈಲಿಯ ಅಗತ್ಯವನ್ನು ಸಂಯೋಜಿಸುತ್ತಿದೆ.
ಇದರ ವಿಡಿಯೋವನ್ನು ಬಳಕೆದಾರ ಅಲೀನಾ ಬ್ಜೋಲ್ಕಿನಾ ಅವರು ತಮ್ಮ Instagram ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ, ಬೂತ್ನ ಮುಂದೆ ಮಹಿಳೆ 20 ಬಾರಿ ಸಿಟ್-ಅಪ್ (ಬೈಸ್ಕೆ) ಹೊಡೆಯುವುದನ್ನು ನೋಡಬಹುದು. ಬೂತ್ನಲ್ಲಿ ಕ್ಯಾಮರಾ ಅಳವಡಿಸಲಾಗಿದೆ. ವ್ಯಕ್ತಿ ಹೊಡೆಯುವ ಪ್ರತಿ ಬೈಸ್ಕೆಯನ್ನು ಎಣಿಕೆ ಮಾಡುತ್ತದೆ. ವ್ಯಕ್ತಿ ತನ್ನ ಸೆಟ್ ಅನ್ನು ಪೂರ್ಣಗೊಳಿಸಿದ ನಂತರ, ಉಚಿತ ಬಸ್ ಟಿಕೆಟ್ ಅನ್ನು ಯಂತ್ರದ ಮೂಲಕ ಕಳುಹಿಸಲಾಗುತ್ತದೆ.
View this post on Instagram
ಈ ವಿಡಿಯೋವನ್ನು ಅಕ್ಟೋಬರ್ನಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋವನ್ನು ಅಪ್ಲೋಡ್ ಮಾಡಿದ ನಂತರ, ಇದು ಮಿಲಿಯನ್ ವೀಕ್ಷಣೆಗಳನ್ನು ಮತ್ತು ಒಂದು ಲಕ್ಷ ಲೈಕ್ಗಳನ್ನು ಸಂಗ್ರಹಿಸಿದೆ. ಆರೋಗ್ಯಕರ ಉಪಕ್ರಮದ ಬಗ್ಗೆ ಹಲವಾರು ಜನರು ಕಾಮೆಂಟ್ ಮಾಡಿದ್ದಾರೆ.
BIGG NEWS: ಇಂದು ಗಾಲಿ ಜನಾರ್ದನ ರೆಡ್ಡಿ ಗೃಹಪ್ರವೇಶ ಸಂಭ್ರಮ; ಗಂಗಾವತಿಯಿಂದ ಸ್ಪರ್ಧಿಸಲು ಪ್ಲ್ಯಾನ್
BIGG NEW : ಬಂಗಾಳ ಹಿಂಸಾಚಾರ ಆರೋಪಿ ಕಸ್ಟಡಿಯಲ್ಲಿ ಆತ್ಮಹತ್ಯೆ : ಸಿಬಿಐ ವಿರುದ್ಧ ಪ್ರಕರಣ ದಾಖಲು| Case Against CBI