ಕೆಎನ್ಎನ್ಡಿಜಿಟಲ್ ಡೆಸ್ಕ್ : ವ್ಯಕ್ತಿಯೊಬ್ಬ ಒಂಬತ್ತು ಮಕ್ಕಳನ್ನ ಕೂರಿಸಿಕೊಂಡು ಬೈಸಿಕಲ್ ತುಳಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಜೈಕಿ ಯಾದವ್ ಎಂಬ ವ್ಯಕ್ತಿ ಈ ವಿಡಿಯೋವನ್ನ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದು, “ವಿಶ್ವದ ಜನಸಂಖ್ಯೆ 800 ಕೋಟಿ ತಲುಪಿದೆ. ಇಂತಹವರು ಈ ಯಶಸ್ಸು ಗಳಿಸಲು ಸಾಕಷ್ಟು ಕೊಡುಗೆ ನೀಡಿದ್ದಾರೆ” ಎಂದು ವ್ಯಂಗ್ಯವಾಡಿದ್ದಾರೆ.
ಈ ಬೈಸಿಕಲ್ನ ಮುಂದೆ ಮೂವರು ಮತ್ತು ಹಿಂದೆ ಮೂವರು ಮಕ್ಕಳು ಕುಳಿತುಕೊಂಡಿದ್ದು, ಉಳಿದ ಮೂವರು ಸವಾರನ ಮೇಲೆ ಕುಳಿತುಕೊಂಡಿದ್ದಾರೆ. ಹಿಡಿತ ತಪ್ಪಿ ಜಾರಿದ್ರೆ ಏನಾಗುತ್ತೆ ಎಂದು ನೆಟ್ಟಿಗರು ಈ ವಿಡಿಯೋ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಇಂತಹ ವ್ಯಕ್ತಿಯಿಂದ ವಿಶ್ವದ ಜನಸಂಖ್ಯೆ ಹೆಚ್ಚುತ್ತಿದೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
ಆದಾಗ್ಯೂ, ಮಕ್ಕಳು ಮನುಷ್ಯನ ಸ್ವಂತ ಮಕ್ಕಳಲ್ಲದಿರಬಹುದು ಎಂದು ಇತರರು ಹೇಳುತ್ತಾರೆ. ಸಾರಿಗೆ ಸೌಲಭ್ಯ ಇಲ್ಲದ ಕಾರಣ ಸೈಕಲ್’ನಲ್ಲಿ ಹೋಗಬೇಕಾಗಿದೆ ಎಂದು ಕೆಲವರು ಪ್ರತಿಕ್ರಿಯಿಸಿದರು. ಇನ್ನು ಪುಸ್ತಕದ ಸಾಹಿತ್ಯವನ್ನ ಅದರ ಮುಖಪುಟದಿಂದ ನಿರ್ಣಯಿಸಬಾರದು ಎಂದು ಕೆಲವರು ನೈತಿಕ ಟೀಕೆಗಳನ್ನ ಮಾಡಿದ್ದಾರೆ.
आज दुनिया की आबादी 8 अरब हो गई, इस उपलब्धि को हासिल करने में ऐसे इंसानों को बहुत बड़ा योगदान रहा है👇 pic.twitter.com/Fiq62o0OiK
— Jaiky Yadav (@JaikyYadav16) November 15, 2022
BIGG NEWS : ‘ಪ್ರೇಮರಾಜ್ ಗೂ ಮಂಗಳೂರು ಸ್ಪೋಟಕ್ಕೂ ಯಾವುದೇ ಸಂಬಂಧವಿಲ್ಲ’ : ಡಿಜಿಪಿ ಪ್ರವೀಣ್ ಸೂದ್ ಸ್ಪಷ್ಟನೆ