ಕೆಎನ್ಎನ್ಡಿಜಿಟಲ್ ಡೆಸ್ಕ್ : ದೇಶದ ವಿಐಪಿ ಸಂಸ್ಕೃತಿ ಅಥವಾ ಲಾಲ್ ಬಟ್ಟಿ ಸಂಸ್ಕೃತಿಯ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಯಾವಾಗಲೂ ಬ್ಯಾಟ್ ಬೀಸುತ್ತಾರೆ. ಸಧ್ಯ ಆಂಬ್ಯುಲೆನ್ಸ್’ಗೆ ದಾರಿ ಮಾಡಿಕೊಡುವ ಸಲುವಾಗಿ ತಮ್ಮ ಬೆಂಗಾವಲು ಪಡೆಯನ್ನ ನಿಲ್ಲಿಸಲು ಆದೇಶ ನೀಡುವ ಮೂಲಕ ಶುಕ್ರವಾರ ಒಂದು ಉದಾಹರಣೆ ನೀಡಿದರು.
ತಮ್ಮ ತವರು ರಾಜ್ಯ ಗುಜರಾತ್’ಗೆ 2 ದಿನಗಳ ಭೇಟಿ ನೀಡಿರುವ ಪ್ರಧಾನಿ ಮೋದಿ, ತಮ್ಮ ಸರ್ಕಾರದ ಯುಗದಲ್ಲಿ ಯಾವುದೇ ವಿಐಪಿ ಸಂಸ್ಕೃತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಪ್ರಧಾನಿ ಮೋದಿ ಶುಕ್ರವಾರ ಅಹಮದಾಬಾದ್ನಿಂದ ಗಾಂಧಿನಗರಕ್ಕೆ ಪ್ರಯಾಣಿಸುತ್ತಿದ್ದಾಗ ಆಂಬ್ಯುಲೆನ್ಸ್’ಗೆ ದಾರಿ ಮಾಡಿಕೊಟ್ಟಿದ್ದಾರೆ.
ಈ ಹಿಂದೆ 2017ರಲ್ಲಿ, ಪ್ರಧಾನಿ ಮೋದಿ ಅವರು ಇಪಿಐ(EPI) (everyone is important) ವಿಐಪಿಯನ್ನ ಬದಲಾಯಿಸಬೇಕು ಎಂದು ಹೇಳಿದ್ದರು. “ಪ್ರತಿಯೊಬ್ಬ ವ್ಯಕ್ತಿಗೂ ಮೌಲ್ಯ ಮತ್ತು ಮಹತ್ವವಿದೆ” ಎಂದು ಪ್ರಧಾನಿ ಮೋದಿ ಹೇಳಿದ್ದರು. ವಿಶೇಷವೆಂದರೆ, ಪ್ರಧಾನಿ ಮೋದಿ ಅವರು ವಿಐಪಿ ಸಂಸ್ಕೃತಿಯ ಸಂಕೇತವಾದ ವಾಹನಗಳ ಮೇಲೆ ಕೆಂಪು ದೀಪಗಳನ್ನ ಬಳಸುವುದನ್ನ ಸಹ ಕೊನೆಗೊಳಿಸಿದರು.
On the way to Gandhinagar from Ahmedabad, PM Modi Ji's carcade stops to give way to an ambulance.
No VIP Culture in the Modi era❌ pic.twitter.com/rCtiF0VVaJ
— Dr. Rutvij Patel (@DrRutvij) September 30, 2022