ಮುಂಬೈ : ಮುಂಬೈ ಪೊವೈನಲ್ಲಿ ಅಪರಿಚಿತ ಮಧ್ಯವಯಸ್ಕ ವ್ಯಕ್ತಿಯೊಬ್ಬರಿಗೆ ಬಸ್ ಡಿಕ್ಕಿ ಹೊಡೆದ್ದು, ಪವಾಡ ಸದೃಶವಾಗಿ ಪಾರಾದ ಘಟನೆ ನಡೆದಿದೆ.
ವ್ಯಕ್ತಿ ಮೇಲೆ ಬಸ್ ಹೋಗಿದ್ದೇ ತಡ, ಅಲ್ಲೇ ನಿಂತಿದ್ದ ದಾರಿಹೋಕರು ಗಾಬರಿಗೊಂಡು ನೋಡಿದ್ದಾರೆ. ಮಂಗಳವಾರ ಮಧ್ಯಾಹ್ನ 2.40ಕ್ಕೆ ಈ ಘಟನೆ ನಡೆದಿದೆ. ಫ್ಯಾಷನಬಲ್ ಪೊವೈ ಪ್ರದೇಶದ ಲೇಕ್ಸೈಡ್ ಕಾಂಪ್ಲೆಕ್ಸ್ ಬಳಿಯ ಎವರೆಸ್ಟ್ ಹೈಟ್ಸ್ ಕಟ್ಟಡದ ಹೊರಗೆ ನಡೆದ ಸಂಪೂರ್ಣ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಳಕೆದಾರರು ಈ ವೀಡಿಯೊವನ್ನ ಟ್ವೀಟ್ ಮಾಡಿದ್ದಾರೆ ಮತ್ತು ಕೆಲವೇ ಸಮಯದಲ್ಲಿ ವೀಡಿಯೊ ವೈರಲ್ ಆಗಿದೆ.
#WATCH | Elderly man's close shave in Powai area of Mumbai. The incident was captured on a CCTV camera.
(Source: viral video) pic.twitter.com/50LV4N2Pvk
— ANI (@ANI) December 15, 2022
ಈ ಬೆರಗುಗೊಳಿಸುವ 45 ಸೆಕೆಂಡುಗಳ ವೀಡಿಯೊದಲ್ಲಿ, ಕಿರಿದಾದ ಮತ್ತು ದಟ್ಟಣೆಯ ರಸ್ತೆಯು ನಿಧಾನವಾಗಿ ಚಲಿಸುವ ವಾಹನಗಳು ಮತ್ತು ಹಲವಾರು ಪಾದಚಾರಿಗಳು ರಸ್ತೆಯನ್ನುಎಚ್ಚರಿಕೆಯಿಂದ ದಾಟುವುದನ್ನು ಕಾಣಬಹುದು. ಇದ್ದಕ್ಕಿದ್ದಂತೆ, ಬಿಳಿ ಕುರ್ತಾ-ಪೈಜಾಮಾದ ವ್ಯಕ್ತಿಯೊಬ್ಬರು ರಸ್ತೆ ದಾಟುತ್ತಿದ್ದು, ವಿದ್ಯಾರ್ಥಿಗಳಿಂದ ತುಂಬಿದ ಬಸ್ ಅವನಿಗೆ ಡಿಕ್ಕಿ ಹೊಡೆದಿದೆ. ಬಸ್ಸು ಅವನ ಮೇಲೆ ಹರಿದ ನಂತರ ಅವನು ಎಡವಿ ಬೀಳುತ್ತಾನೆ. ಪವಾಡ ಸದೃಶ್ಯವಾಗಿ ಸಾವಿನಿಂದ ಬಚಾವ್ ಆಗುತ್ತಾನೆ.
Job Alert: ಡಿ.21ರಂದು ಜಿಲ್ಲಾ ಕಾರ್ಯಕ್ರಮ ಸಂಯೋಜಕರ ನೇಮಕಾತಿ ನೇರ ಸಂದರ್ಶನ
ಮಹಿಳಾಮಣಿಗಳೇ, ಸರ್ಕಾರದ ಈ ಯೋಜನೆ ಮೂಲಕ ಉಚಿತವಾಗಿ ‘ಹೊಲಿಗೆ ಯಂತ್ರ’ ಪಡೆಯ್ಬೋದು, ನೀವೂ ಅರ್ಜಿ ಸಲ್ಲಿಸಿ