ನವದೆಹಲಿ : ತನ್ನ ಸ್ಕೂಟರ್ ಸ್ವಚ್ಛಗೊಳಿಸಲು ರಾಷ್ಟ್ರಧ್ವಜವನ್ನ ಬಳಸಿದ ಆರೋಪದ ಮೇಲೆ 52 ವರ್ಷದ ವ್ಯಕ್ತಿಯನ್ನ ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಈಶಾನ್ಯ ದೆಹಲಿಯ ಭಜನ್ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಸದರಿ ವ್ಯಕ್ತಿ ಉತ್ತರ ಘೋಂಡಾ ಪ್ರದೇಶದ ನಿವಾಸಿ ಎಂದು ಅವ್ರು ಹೇಳಿದರು.
ಇಡೀ ವಿಷಯವೇನು..?
ಘಟನೆಯ ವೀಡಿಯೊವನ್ನ ಸ್ಥಳೀಯರು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ ನಂತ್ರ ಈ ವಿಷಯ ಬೆಳಕಿಗೆ ಬಂದಿದೆ. ವೀಡಿಯೊದಲ್ಲಿ, ವ್ಯಕ್ತಿಯು ತನ್ನ ಬಿಳಿ ಸ್ಕೂಟರ್ʼನ್ನ ರಾಷ್ಟ್ರಧ್ವಜದಿಂದ ಸ್ವಚ್ಛಗೊಳಿಸುವುದನ್ನ ಕಾಣಬಹುದು.
ವೀಡಿಯೊದಲ್ಲಿ ಏನನ್ನು ತೋರಿಸಲಾಗಿದೆ.!
ಈ ವೈರಲ್ ವೀಡಿಯೊದಲ್ಲಿ, ಒಬ್ಬ ವ್ಯಕ್ತಿಯು ತನ್ನ ಸ್ಕೂಟಿಯನ್ನ ತ್ರಿವರ್ಣ ಧ್ವಜದಿಂದ ಸ್ವಚ್ಛಗೊಳಿಸುತ್ತಿರುವುದು ಕಂಡುಬಂದಿದೆ. ವೀಡಿಯೊದಲ್ಲಿರುವಂತೆ, ವ್ಯಕ್ತಿ ಮೊದಲು ಆಸನದ ಪ್ರದೇಶವನ್ನ ಸ್ವಚ್ಛಗೊಳಿಸಿದ್ದಾನೆ ನಂತರ ಮುಂಭಾಗದ ಗಾಜನ್ನ ಒರೆಸಿ ನಂತರ ಇಡೀ ಸ್ಕೂಟಿಯನ್ನ ತ್ರಿವರ್ಣದಿಂದ್ಲೇ ಸ್ವಚ್ಛಗೊಳಿಸಿದ್ದಾನೆ.
ಈ 30 ಸೆಕೆಂಡುಗಳ ವೀಡಿಯೊದಲ್ಲಿ, ವ್ಯಕ್ತಿಯು ಯಾವುದೇ ಹಿಂಜರಿಕೆಯಿಲ್ಲದೇ ತ್ರಿವರ್ಣ ಧ್ವಜ ಅವಮಾನಿಸುವುದನ್ನ ಕಾಣಬಹುದು. ಅಲ್ಲಿ ನೆರೆದಿದ್ದ ಜನರು ಘಟನೆಯ ವೀಡಿಯೋ ಮಾಡಿದ್ದು, ಅದು ಈಗ ವೈರಲ್ ಆಗುತ್ತಿದೆ.
Man in Delhi caught on camera cleaning his scooter with National Flag #IndianFlag #Delhi #ViralVideo #Tiranga pic.twitter.com/xbpjaKoY7A
— AH Siddiqui (@anwar0262) September 7, 2022
ಈ ಪ್ರಕರಣದಲ್ಲಿ ಪೊಲೀಸರು ಹೇಳಿದ್ದೇನು?
“ಈ ವಿಷಯದಲ್ಲಿ ಕಾನೂನು ಕ್ರಮವನ್ನ ಪ್ರಾರಂಭಿಸಲಾಗಿದೆ ಮತ್ತು ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆ, 1971ರ ಸೆಕ್ಷನ್ 2ರ ಅಡಿಯಲ್ಲಿ ಭಜನ್ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವ್ಯಕ್ತಿ ಬಳಸಿದ ಧ್ವಜ ಮತ್ತು ಅವನ ಸ್ಕೂಟರ್ʼನ್ನ ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಅವ್ರು ಹೇಳಿದರು.