ಬುರ್ಹಾನ್ಪುರ(ಮಧ್ಯಪ್ರದೇಶ): ಮಧ್ಯಪ್ರದೇಶದಲ್ಲಿ ಮೂರು ವರ್ಷದ ಮಗುವೊಂದು ಪೊಲೀಸರನ್ನು ಸಂಪರ್ಕಿಸಿದ್ದು, ತನ್ನ ತಾಯಿಯ ವಿರುದ್ಧವೇ ದೂರು ನೀಡಿದೆ. ʻನನ್ನ ಅಮ್ಮ ನನ್ನ ಮಿಠಾಯಿಗಳನ್ನು ಕದ್ದು ತಿಂದಿದ್ದಾಳೆʼ ಎಂದು ಪೊಲೀಸರಿಗೆ ದೂರು ನೀಡಿದ್ದಾನೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ತನ್ನ ತಾಯಿಯ ವಿರುದ್ಧ ಅಸಮಾಧಾನಗೊಂಡ ಮಗು ತನ್ನ ತಂದೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ಯುವಂತೆ ಕೇಳಿಕೊಂಡಿದ್ದಾನೆ. ಅದರಂತೆ ತಂದೇ ಠಾಣೆ ಬಳಿ ಕರೆದೊಯ್ದಿದ್ದಾನೆ. ಅಲ್ಲಿ ಬಾಲಕ ದೂರು ನೀಡಿದ್ದಾನೆ.
ವೈರಲ್ ಆಗಿರುವ ವೀಡಿಯೊದಲ್ಲಿ, ಪೊಲೀಸ್ ಅಧಿಕಾರಿಯೊಬ್ಬರು ಬಾಲಕ ಹೇಳಿದ್ದನ್ನು ಒಂದು ಕಾಗದದ ಮೇಲೆ ಬರೆಯುವಂತೆ ನಟಿಸಿದ್ದಾರೆ. ನಂತ್ರ ಅದರ ಮೇಲೆ ಬಾಲಕ ಸಹಿ ಮಾಡುವುದನ್ನು ನೋಡಬಹುದು.
अम्मी ने 3 साल के बच्चे की चॉकलेट छुपाई तो बच्चा FIR कराने थाने पहुंच गया। 😅
थाने पहुंच कर उसने कहा मम्मी ने मेरी टॉफी चुरा ली।
वीडियो MP के बुरहानपुर का। pic.twitter.com/pswNYlTkgb
— काश/if Kakvi (@KashifKakvi) October 17, 2022
ಪೊಲೀಸರು ತಾಯಿಯನ್ನು ಬಂಧಿಸುವುದಾಗಿ ಹೇಳಿ ಮಗುವಿನ ಮನವೊಲಿಸಿ ಆತನನ್ನು ಮನೆಗೆ ವಾಪಸ್ ಕಳುಹಿಸಿದ್ದಾರೆ.
BIGG NEWS : ಬಿಜೆಪಿ ಕೋಮುವಿಷ ಬೀಜ ಬಿತ್ತಿ ಯುವಕರ ಭವಿಷ್ಯ ಹಾಳು ಮಾಡುತ್ತಿದೆ : ಪ್ರಿಯಾಂಕ್ ಖರ್ಗೆ ವಾಗ್ದಾಳಿ