ಕೇರಳ: ವಧು-ವರ ಇಬ್ಬರೂ ವೆಡ್ಡಿಂಗ್ ಫೋಟೋಶೂಟ್ ಹೇಗೆ ಮಾಡಿಸೋದು ಅಂತಾ ಪ್ರೀ ಪ್ಲಾನ್ ಮಾಡ್ಕೊಂಡಿರ್ತಾರೆ. ಇದಕ್ಕಾಗಿ ತಮ್ಮ ನೆಚ್ಚಿನ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ತಾರೆ. ಆದ್ರೆ, ಇಲ್ಲೊಬ್ಬ ವಧು ಗುಂಡಿಗಳಿಂದ ಕೂಡಿದ ರಸ್ತೆ ರಸ್ತೆಯಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ.
ಹೌದು, ಕೇರಳದ ವಧುಯೊಬ್ಬರು ತಮ್ಮ ಮದುವೆಯ ಚಿತ್ರೀಕರಣವನ್ನು ಸ್ಮರಣೀಯವಾಗಿಸಲು ನಿರ್ಧರಿಸಿ, ಆ ಪ್ರದೇಶದಲ್ಲಿನ ಗುಂಡಿಗಳ ಸಮಸ್ಯೆಯನ್ನು ಹೈಲೈಟ್ ಮಾಡಿದ್ದಾರೆ. ಇದೀಗ ವಧು ಮತ್ತು ವಿವಾಹದ ಛಾಯಾಗ್ರಾಹಕರನ್ನು ಒಳಗೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕೆಂಪು ಸೀರೆ ಉಟ್ಟ ವಧು ಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ನಡೆಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ವೇಳೆ, ಕೆಳಗೆ ಬೀಳದಂತೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಹೆಣಗಾಡುತ್ತಿರುವಾಗ ವಾಹನಗಳು ಹಾದುಹೋಗುವುದನ್ನು ಸಹ ನೋಡಬಹುದು.
View this post on Instagram
ಚಿತ್ರಗಳು ಮತ್ತು ವೀಡಿಯೊವನ್ನು Instagram ಹ್ಯಾಂಡಲ್ Arrow_weddingcompany ಪೋಸ್ಟ್ ಮಾಡಿದೆ. ವೀಡಿಯೋ ಜೊತೆಗೆ, “ರಸ್ತೆಯ ಮಧ್ಯದಲ್ಲಿ ವಧುವಿನ ಫೋಟೋಶೂಟ್” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ವೀಡಿಯೊವನ್ನು ಸೆಪ್ಟೆಂಬರ್ 11 ರಂದು ಹಂಚಿಕೊಳ್ಳಲಾಗಿದೆ.
View this post on Instagram
ಈ ವಿಡಿಯೋ ನೋಡಿದ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಕೇರಳದ ರಸ್ತೆ ಪರಿಸ್ಥಿತಿಗಳನ್ನು ಗೇಲಿ ಮಾಡಿದ್ದಾರೆ.
BREAKING NEWS : ಶಿಕ್ಷಕರ ನೇಮಕಾತಿ ಹಗರಣ : ಅಕ್ರಮವಾಗಿ ನೇಮಕವಾಗಿದ್ದ ಮತ್ತೋರ್ವ ಶಿಕ್ಷಕ ಅರೆಸ್ಟ್
BIG NEWS: ʻಪ್ರತಿ ಮಗುವಿಗೂ ಪೋಷಕರೊಂದಿಗೆ ಪ್ರೀತಿಯ ಸಂಬಂಧ ಹೊಂದುವ ಹಕ್ಕಿದೆʼ: ಮದ್ರಾಸ್ ಹೈಕೋರ್ಟ್