ಅಸ್ಸಾಂ: 1997 ರ ಬಾರ್ಡರ್ ಚಲನಚಿತ್ರದ ಸುಂದರವಾದ ‘ಸಂದೇಸೆ ಆತೆ ಹೈ’ ಹಾಡು ಎಲ್ಲಾ ಭಾರತೀಯ ಸೇನಾ(Rajnath Singh) ಯೋಧರೊಂದಿಗೆ ಅವಿನಾಭಾವ ಸಂಬಂಧವಿದೆ. ಎಲ್ಲಾ ಸೈನಿಕರು ತಮ್ಮ ಮನೆ ಮತ್ತು ಕುಟುಂಬದಿಂದ ದೂರದಲ್ಲಿರುವಾಗ ಅನುಭವಿಸುವ ನೋವು ಮತ್ತು ಹಂಬಲವನ್ನು ಹಾಡು ಪರಿಣಾಮಕಾರಿಯಾಗಿ ತಿಳಿಸುತ್ತದೆ.
ಇತ್ತೀಚೆಗೆ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅಸ್ಸಾಂನ ದಿಂಜಾನ್ ಮಿಲಿಟರಿ ಠಾಣೆಗೆ ಭೇಟಿ ನೀಡಿದ್ದರು. ಈ ವೇಳೆ, ಅಲ್ಲಿ ಅವರು ವಾಸ್ತವಿಕ ನಿಯಂತ್ರಣ ರೇಖೆಯ (LAC) ಮೂಲಸೌಕರ್ಯ ಅಭಿವೃದ್ಧಿಯನ್ನು ಪರಿಶೀಲಿಸಿದರು. ಸಂವಾದದ ಸಮಯದಲ್ಲಿ, ಸೈನಿಕರು ಉತ್ಸಾಹದಿಂದ ‘ಸಂದೇಸೆ ಆತೆ ಹೇ’ ಹಾಡು ಹಾಡಿದರು. ಇದನ್ನು ಆಲಿಸಿದ ರಾಜನಾಥ್ ಸಿಂಗ್ ಅವರನ್ನು ಶ್ಲಾಘಿಸಿದ್ದಾರೆ.
1 ನಿಮಿಷ ಮತ್ತು 59 ಸೆಕೆಂಡ್ಗಳ ವೀಡಿಯೊದಲ್ಲಿ, ಸಚಿವರು ತಮ್ಮ ಕೈಯಲ್ಲಿ ಕಪ್ ಹಿಡಿದುಕೊಂಡು ಸೈನಿಕರು ಚಪ್ಪಾಳೆ ತಟ್ಟಿ ಇಡೀ ಹಾಡನ್ನು ಹಾಡುವುದನ್ನು ತೋರಿಸುತ್ತದೆ.
#WATCH | Indian Army jawans sing ‘Sandese Aate Hain’ as Defence Minister Rajnath Singh interacts with them at Dinjan military station in Assam. Army chief General Manoj Pande and other top officers of the Army also accompanied the Defence Minister. pic.twitter.com/VHgFX5QX82
— ANI (@ANI) September 28, 2022
ಇವರ ಹಾಡನ್ನು ಕೇಳಿದ ಸೋಶಿಯಲ್ ಮೀಡಿಯಾ ಬಳಕೆದಾರರು ಭಾವೋದ್ವೇಗಕ್ಕೊಳಗಾಗಿದ್ದು, ಸೈನಿಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.