ನವದೆಹಲಿ : ದೇಶದಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳು ಹೆಚ್ಚಳವಾಗ್ತಿರುವ ನಡುವೆ ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕಿ ಬಲ್ಜಿಂದರ್ ಕೌರ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ ಪತಿಯಿಂದ ಹಲ್ಲೆಗೊಳಗಾಗಿದ್ದಾರೆ. ಹೌದು, ಶಾಸಕರ ಪಂಜಾಬ್ ನಿವಾಸದಲ್ಲಿ ಈ ಘಟನೆ ನಡೆದಿದೆ. ಇನ್ನು ಶಾಸಕರೊಬ್ಬರ ಮೇಲೆ ಹಲ್ಲೆ ನಡೆಸುವುದನ್ನ ನೋಡಿ ಜನರು ಆಘಾತಕ್ಕೊಳಗಾಗಿದ್ದಾರೆ.
ಈ ವಿಡಿಯೋದ ಆರಂಭದಲ್ಲಿ ತನ್ನನ್ನು ಸುತ್ತುವರಿದ ಪುರುಷರ ಗುಂಪಿನೊಂದಿಗೆ ಶಾಸಕರು ತೀವ್ರ ವಾಗ್ವಾದದಲ್ಲಿ ತೊಡಗಿರುವುದನ್ನ ಕಾಣಬಹುದು. ನಂತ್ರ ಶಾಸಕಿಯ ಪತಿ ಏಕಾಏಕಿ ಆಕೆಗೆ ಕಪಾಳಕ್ಕೆ ಬಾರಿಸಿದ್ದಾರೆ.
ವರದಿಯ ಪ್ರಕಾರ, ಪಂಜಾಬ್ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮನಿಷಾ ಗುಲಾಟಿ ಈ ವಿಷಯವನ್ನ ಗಮನಿಸಿದ್ದಾರೆ. ಇನ್ನು “ನಾನು ಸಾಮಾಜಿಕ ಮಾಧ್ಯಮದಲ್ಲಿ ಬಲ್ಜಿಂದರ್ ಕೌರ್ ಅವರ ವೀಡಿಯೊವನ್ನು ನೋಡಿದ್ದೇನೆ. ನಾವು ಘಟನೆಯ ಬಗ್ಗೆ ಸ್ವಯಂಪ್ರೇರಿತವಾಗಿ ಗಮನ ಹರಿಸುತ್ತೇವೆ. ಸಾರ್ವಜನಿಕ ಸಮಸ್ಯೆಗಳನ್ನು ಎತ್ತುವ ಮಹಿಳೆ ಮನೆಯಲ್ಲಿ ಕಿರುಕುಳವನ್ನ ಎದುರಿಸುತ್ತಿರುವುದು ಬೇಸರದ ಸಂಗತಿಯಾಗಿದೆ” ಎಂದಿದ್ದಾರೆ.
Empowering women is not a deterrent to stop violence against women.Shocking to see @BaljinderKaur_ MLA getting slapped in broad day light.Mindset of men has to change.
The problem lies in the perpetrator’s of these acts.Change this male chauvinism attitude more then anything else pic.twitter.com/Qxm6rhrtht— Brinder (@brinderdhillon) September 1, 2022
ಎನ್ಸಿಆರ್ಬಿಯ ಇತ್ತೀಚಿನ ವರದಿಯ ಪ್ರಕಾರ, ಪಂಜಾಬ್ನಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳಲ್ಲಿ ಶೇಕಡಾ 17ರಷ್ಟು ಏರಿಕೆಯಾಗಿದೆ – 2020 ರಲ್ಲಿ 4,838 ಪ್ರಕರಣಗಳಿಂದ 2021ರಲ್ಲಿ 5,662 ಪ್ರಕರಣಗಳಿಗೆ ಏರಿದೆ. ಪಂಜಾಬ್ನಲ್ಲಿ, 2020ರಲ್ಲಿ 504 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ರೆ, 2021ರಲ್ಲಿ ಒಟ್ಟು 508 ಅತ್ಯಾಚಾರ ಪ್ರಕರಣಗಳು ನಡೆದಿವೆ. ಇನ್ನು 2020ರಲ್ಲಿ 53 ಅತ್ಯಾಚಾರ ಯತ್ನ ಪ್ರಕರಣಗಳು 2021ರಲ್ಲಿ 60 ರಷ್ಟಿತ್ತು. 2020ರಲ್ಲಿ ರಾಜ್ಯದಲ್ಲಿ 732 ರಷ್ಟಿದ್ದ ಮಹಿಳೆಯರ ಮೇಲಿನ ಹಲ್ಲೆ ಪ್ರಕರಣಗಳು 2021ರಲ್ಲಿ 688ಕ್ಕೆ ಇಳಿದಿವೆ.