ಕೆಎನ್ಎನ್ಡಿಜಿಟಲ್ ಡೆಸ್ಕ್ : ಉತ್ತರ ಪ್ರದೇಶದಲ್ಲಿ ಮಾನವ ಕುಲವೇ ತಲೆ ತಗ್ಗಿಸುವಂತಹ ಆಘಾತಕಾರಿ ಘಟನೆಯೊಂದು ನಡೆದಿದೆ. 12 ವರ್ಷದ ಬಾಲಕಿಯೊಬ್ಬಳು ಗಾಯದಿಂದ ರಸ್ತೆಯಲ್ಲಿ ಒದ್ದಾಡುತ್ತಿದ್ರೂ, ಆಕೆಗೆ ಯಾರಬ್ಬರು ಸುತ್ತಲು ನಿಂತು ವಿಡಿಯೋ ಮಾಡುತ್ತಿರುವ ಮಾಡುತ್ತಿರುವ ಘಟನೆ ಭಾರೀ ಆಘಾತಕ್ಕೆ ಕಾರಣವಾಗಿದೆ.
ಉತ್ತರ ಪ್ರದೇಶದ ಕನ್ನೌಜ್ ಪ್ರದೇಶದಲ್ಲಿ 12 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಬಗ್ಗೆ ವರದಿಯಾಗಿದೆ. ಕನೌಜ್ ಪ್ರದೇಶದ ಹೋಟೆಲ್ನ ಹಿಂದೆ ಬಾಲಕಿ ಗಂಭೀರ ಗಾಯಗೊಂಡು ಕೆಳಗೆ ಬಿದ್ದಿದ್ದಾಳೆ. ಬಾಲಕಿ ಮುಖ, ಕೈ, ಕಾಲುಗಳಿಗೆ ಗಾಯಗಳಾಗಿವೆ. ಈ ವೇಳೆ ಆ ಪ್ರದೇಶದ ಜನರು ಬಾಲಕಿಯನ್ನ ನೋಡಲು ಜಮಾಯಿಸಿದ್ದಾರೆ. ನಂತ್ರ ಸ್ಥಳೀಯರು ಬಾಲಕಿಯನ್ನ ರಕ್ತಸಿಕ್ತವಾಗಿ ಕಂಡಿದ್ದು, ರಕ್ಷಿಸಲು ಪ್ರಯತ್ನಿಸದೆ ವಿಡಿಯೋ ಮಾಡಿದ್ದಾರೆ. ದುರಂತವೆಂದ್ರೆ ಅಲ್ಲಿದ್ದ ಯಾರೊಬ್ರು ಕೂಡ ಬಾಲಕಿಯನ್ನ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಲಿಲ್ಲ. ಎಲ್ಲರೂ ವಿಡಿಯೋ ಮಾತ್ರ ತೆಗೆದು ಮಾಡಿದ್ದು, ಸಧ್ಯ ಈ ಘಟನೆ ಭಾರೀ ಆಘಾತಕ್ಕೆ ಕಾರಣವಾಗಿದೆ.
ಆಗ ಸಂತ್ರಸ್ತೆ ಕೈ ಎತ್ತಿ ಸಹಾಯ ಕೇಳಿದಳು. ಆದ್ರೆ, ಬಾಲಕಿಯ ಸುತ್ತ ಇದ್ದವರು ವಿಡಿಯೋ ಮಾಡುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಬಂದು ಬಾಲಕಿಯನ್ನು ಎತ್ತಿಕೊಂಡು ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವುದು ಗಮನಾರ್ಹ.
Warning: Disturbing video
In UP's Kannauj, a 12-year-old girl who had stepped out in the market was later found dumped behind a guest house in a serious condition. A sub-inspector reached the spot upon alert and carried the little girl to hospital. pic.twitter.com/Fz3XyOkeZA
— Piyush Rai (@Benarasiyaa) October 25, 2022
ಈ ಬಗ್ಗೆ ಸಂತ್ರಸ್ತ ಬಾಲಕಿಯ ಪೋಷಕರು ದೂರು ದಾಖಲಿಸಿದ್ದಾರೆ.
ನಿನ್ನೆ ಮಧ್ಯಾಹ್ನ ಹೊರಗೆ ಹೋಗಿದ್ದ ಬಾಲಕಿ ಸಂಜೆಯವರೆಗೂ ಮನೆಗೆ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸಂಬಂಧಿಕರ ಮನೆ ಸೇರಿದಂತೆ ಎಲ್ಲಾ ಮನೆಗಳಲ್ಲಿ ಹುಡುಕಾಟ ನಡೆಸಿದ್ದು ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸಧ್ಯ ಬಾಲಕಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಹಾಗಾಗಿ ಅವರನ್ನ ಕಾನ್ಪುರ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಹೇಳಲಾಗಿದೆ. ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಎಸೆದಿರುವುದಾಗಿ ಸ್ಥಳೀಯ ಪೊಲೀಸರಿಗೆ ತಿಳಿಸಿದ್ದಾರೆ. ನಂತ್ರ ಸಂತ್ರಸ್ತ ಬಾಲಕಿಯ ಹೇಳಿಕೆ ಮೇರೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
BIGG NEWS : ನ. 1 ರಂದು ಮನೆ ಮನೆಗಳಲ್ಲಿ ಕನ್ನಡ ಧ್ವಜ ಹಾರಿಸಿ : ಕರವೇ ರಾಜ್ಯಾಧ್ಯಕ್ಷ ‘ಪ್ರವೀಣ್ ಶೆಟ್ಟಿ’ ಕರೆ
BREAKING NEWS: ಮಹಿಳೆಗೆ ಕಪಾಳಮೋಕ್ಷ ಪ್ರಕರಣ: ಸಚಿವ ವಿ. ಸೋಮಣ್ಣ ವಿರುದ್ಧ ಮಹಿಳಾ ಆಯೋಗಕ್ಕೆ ದೂರು