ಕೆಎನ್ಎನ್ಡಿಜಿಟಲ್ ಡೆಸ್ಕ್ : ಇಂದಿನ ಜಗತ್ತಿನಲ್ಲಿ, ಸಾಮಾಜಿಕ ಮಾಧ್ಯಮವು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಇಂಟರ್ನೆಟ್ ಒಂದು ಪ್ರತ್ಯೇಕ ಪ್ರಪಂಚದಂತೆ ಕೆಲಸ ಮಾಡುತ್ತಿದ್ದು, ಇಲ್ಲಿ ನಾವು ಹಲವಾರು ವಿಭಿನ್ನ ವಿಷಯಗಳನ್ನ ಕಲಿಯುತ್ತೇವೆ. ಇಲ್ಲಿ ಹಂಚಿಕೊಳ್ಳಲಾದ ಸುದ್ದಿಗಳು, ಫೋಟೋಗಳು, ವೀಡಿಯೊಗಳು ನಮಗೆ ಅನೇಕ ಸಂದೇಶಗಳನ್ನ ರವಾನಿಸುತ್ತವೆ. ಇದು ಉಪಯುಕ್ತ ಮಾಹಿತಿ ಮತ್ತು ಮನರಂಜನೆಯ ಮೂಲವಾಗಿದೆ. ಅಂತರ್ಜಾಲದಲ್ಲಿ ಹಂಚಿಕೊಳ್ಳಲಾದ ವೀಡಿಯೊಗಳು ನಮ್ಮ ದೈನಂದಿನ ಜೀವನದಲ್ಲಿ ನಾವು ಎದುರಿಸುತ್ತಿರುವ ಉದ್ವೇಗಗಳಿಂದ ಸ್ವಲ್ಪ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ಈ ಪ್ರಾಣಿಗಳ ವೀಡಿಯೊಗಳು ತಮ್ಮದೇ ಆದ ಅಭಿಮಾನಿಗಳನ್ನ ಹೊಂದಿವೆ. ಪ್ರಾಣಿಗಳ ಜಗತ್ತಿನಲ್ಲಿ ನಾವು ನಂಬಲು ಮತ್ತು ಹತ್ತಿರದಿಂದ ನೋಡಲು ಸಾಧ್ಯವಾಗದ ಅನೇಕ ನಿದರ್ಶನಗಳನ್ನ ಇಂಟರ್ನೆಟ್ ಜಗತ್ತಿನಲ್ಲಿ ನೋಡುತ್ತೇವೆ.
ಜಗತ್ತಿನಲ್ಲಿ ಹಲವಾರು ರೀತಿಯ ಜನರಿದ್ದಾರೆ. ಒಂದೆಡೆ ಕೆಲವರು ಪ್ರಾಣಿಗಳಿಗೆ ಪ್ರೀತಿ ತೋರಿಸುತ್ತಾ, ಸಹಾಯ ಮಾಡಲು ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಾರೆ. ಇನ್ನೊಂದೆಡೆ ವಿನಾಕಾರಣ ಪ್ರಾಣಿಗಳನ್ನ ಹಿಂಸಿಸುವ ಕೆಲ ಕಿಡಿಗೇಡಿಗಳು ಇದ್ದಾರೆ. ಕೆಲವೊಮ್ಮೆ ಅವರು ಮಾಡುವ ಕೆಲವು ವಿಕೃತ ಕೆಲಸಗಳನ್ನ ನಾವು ಸಾಮಾಜಿಕ ಮಾಧ್ಯಮದಲ್ಲಿ ನೋಡುತ್ತೇವೆ.
ಮನುಷ್ಯರು ಪ್ರಾಣಿಗಳ ಮೇಲೆ ಎಸಗುವ ದೌರ್ಜನ್ಯದಿಂದ ನೆಟ್ಟಿಗರು ಕಂಗಾಲಾಗಿರುವ ಪ್ರಕರಣಗಳು ಸಾಕಷ್ಟಿವೆ. ಇತ್ತೀಚೆಗಷ್ಟೇ ಇಂತಹದೊಂದು ವಿಡಿಯೋವನ್ನು ಅಂತರ್ಜಾಲದಲ್ಲಿ ಶೇರ್ ಮಾಡಲಾಗಿದೆ. ಇದು ನೋಡುಗರಿಗೆ ತುಂಬಾ ಆಶ್ಚರ್ಯ ಮತ್ತು ಆಘಾತಕಾರಿಯಾಗಿದೆ. ಆದ್ರೆ, ವಿಡಿಯೋದ ಕೊನೆಯಲ್ಲಿ ಏನಾಯ್ತು ಅನ್ನೋದನ್ನ ತಿಳಿದ್ರೆ ನೀವು ಮೂಕವಿಸ್ಮಿತರಾಗುತ್ತೀರಿ. ವಿಡಿಯೋ ಹಳೆಯದಾದರೂ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದರಲ್ಲಿ ಒಬ್ಬ ವ್ಯಕ್ತಿ ತನ್ನ ಮೂರ್ಖತನದ ಮೂಲಕ ಜನರ ಮಾನವೀಯತೆಗೆ ಕಳಂಕ ತಂದಿದ್ದಾನೆ. ಕರುಣೆಯಿಲ್ಲದ ವ್ಯಕ್ತಿಯೊಬ್ಬ ನಾಯಿಯನ್ನ ಅದರ ಎರಡು ಕಿವಿಗಳಿಂದ ಹಿಡಿದು ನಿರ್ದಯವಾಗಿ ಥಳಿಸುತ್ತಿರುವುದನ್ನ ವೀಡಿಯೊದಲ್ಲಿ ನೋಡುತ್ತೇವೆ. ಈ ವಿಡಿಯೋ ನಿಮ್ಮ ರಕ್ತ ಕುದಿಯುವಂತೆ ಮಾಡುತ್ತೆ.
ಈ ವಿಡಿಯೋವನ್ನು ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ, ವ್ಯಕ್ತಿಯೊಬ್ಬ ಮುಗ್ಧ ನಾಯಿಯನ್ನ ಅದರ ಕಿವಿಯಿಂದ ಎತ್ತಿ ಹಿಂಸೆ ನೀಡಿತ್ತಿದ್ದು, ನಾಯಿ ನೋವಿನಿಂದ ನರಳುತ್ತಿದೆ. ಇದ್ರಿಂದ ಕೋಪಗೊಂಡು ಹಸು, ನಾಯಿಯ ಸಹಾಯಕ್ಕೆ ಬಂದಿದ್ದು, ವ್ಯಕ್ತಿಗೆ ಗುದ್ದಿ ಪಾಠ ಕಲಿಸಿದೆ.
ಹೌದು, ಸಹಾಯಕ್ಕಾಗಿ ಅಳುತ್ತಿದ್ದ ನಾಯಿಯನ್ನು ರಕ್ಷಿಸಲು ಯಾರೂ ಮುಂದಾಗದಿದ್ದಾಗ ಮತ್ತೊಂದು ಪ್ರಾಣಿ ಸಹಾಯಕ್ಕೆ ಮುಂದಾಯಿತು. ವೀಡಿಯೊದಲ್ಲಿ, ಹಸು ನಾಯಿಗೆ ಸಹಾಯ ಮಾಡುವುದನ್ನ ಕಾಣಬಹುದು. ನಾಯಿಗೆ ಮಾಡಿದ ಕ್ರೌರ್ಯವನ್ನ ನೋಡಿದ ಹಸು ತನ್ನ ಕೊಂಬುಗಳಿಂದ ಹೃದಯಹೀನ ವ್ಯಕ್ತಿಯ ಮೇಲೆ ದಾಳಿ ಮಾಡುತ್ತದೆ.
ವೀಡಿಯೊದಲ್ಲಿ, ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ‘ಹೃದಯಹೀನ ವ್ಯಕ್ತಿ… ಕರ್ಮ ಅದಕ್ಕೆ ಶಿಕ್ಷೆ ನೀಡಿತು’ ಎಂಬ ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇಲ್ಲಿಯವರೆಗೆ 6 ಲಕ್ಷ ವೀಕ್ಷಣೆಗಳು ಮತ್ತು ಟನ್ಗಳಷ್ಟು ಲೈಕ್ ಪಡೆದಿದೆ.
Karma 🙏🙏 pic.twitter.com/AzduZTqXH6
— Susanta Nanda IFS (@susantananda3) October 31, 2021
Weight Chart : ಯಾವ ವಯಸ್ಸಿನಲ್ಲಿ ಎಷ್ಟು ತೂಕ ಇರ್ಬೇಕು ಗೊತ್ತಾ.? ಈ ನಿಯಮ ಪಾಲಿಸಿದ್ರೆ, ಆರೋಗ್ಯವಾಗಿರ್ತೀರಾ.!