ಕೆಎನ್ಎನ್ಡಿಜಿಟಲ್ ಡೆಸ್ಕ್ : ಜಗತ್ತಿನಲ್ಲಿ ಆಹಾರ ಪ್ರಿಯರಿಗೇನು ಕೊರತೆಯಿಲ್ಲ. ಆಸೆಯಾದ್ರೆ ಸಾಕು, ಎಲ್ಲಿಯಾದ್ರು ಮತ್ತು ಯಾವುದೇ ಸಮಯದಲ್ಲಿ ತಿನ್ನಲು ನಡೆದು ಬಿಡುತ್ತಾರೆ. ಅದ್ರಂತೆ, ಸಾಮಾನ್ಯವಾಗಿ ಜನರು ಬೈಕ್ ಅಥವಾ ಕಾರ್ ಇತ್ಯಾದಿಗಳಲ್ಲಿ ದೂರದ ಪ್ರಯಾಣ ಮಾಡುವಾಗ, ತಿನ್ನಲು ಮತ್ತು ಕುಡಿಯಲು ದಾರಿ ಮಧ್ಯೆ ತಮ್ಮ ವಾಹನ ನಿಲ್ಲಿಸುವುದನ್ನ ನೀವು ನೋಡಿರಬೇಕು. ಆದ್ರೆ, ತಿನ್ನಲು ಆಸೆಯಾಯ್ತು ಅಂತಾ ರೈಲು ಚಾಲಕ ರೈಲನ್ನ ಮಧ್ಯೆದಲ್ಲೇ ನಿಲ್ಲಿಸುವುದನ್ನ ನೀವು ನೋಡಿದ್ದೀರಾ? ಯಾರಾದ್ರೂ ತಿನ್ನಲು ಏನನ್ನಾದರೂ ಖರೀದಿಸುವುದನ್ನ ನೀವು ನೋಡಿದ್ದೀರಾ? ಹೌದು, ಇತ್ತೀಚಿನ ದಿನಗಳಲ್ಲಿ ಅಂತಹ ಒಂದು ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಈ ವಿಡಿಯೋದಲ್ಲಿ ರೈಲು ಚಾಲಕನೊಬ್ಬ ರೈಲನ್ನ ದಾರಿ ಮಧ್ಯೆ ನಿಲ್ಲಿಸಿ ಮೀನು ಖರೀದಿಸಲು ಹೋಗುತ್ತಾನೆ. ಅದನ್ನ ಖರೀದಿಸಿದ ನಂತ್ರ ಓಡಿ ಬಂದು ರೈಲನ್ನ ಓಡಿಸಲು ಅಣಿಯಾಗುತ್ತಾನೆ. ರೈಲ್ವೇ ಗೇಟ್ ಬಳಿ ರೈಲನ್ನ ನಿಲ್ಲಿಸಿ ರೈಲ್ವೇ ಗೇಟ್ ಮುಚ್ಚಿರುವುದನ್ನ ವಿಡಿಯೋದಲ್ಲಿ ಕಾಣಬಹುದು.
ವೈರಲ್ ವಿಡಿಯೋ ನೋಡಿ.!
ये साहब गाड़ी खड़ी करके मछली खरीदने गए थे।
कोन सि गाड़ी ये भी देखो। pic.twitter.com/RjL97bzxGE— Hasna Zaroori Hai (@HasnaZarooriHai) December 26, 2022
ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಟ್ವಿಟ್ಟರ್ನಲ್ಲಿ @HasnaZarooriHai ಹೆಸರಿನ ಐಡಿಯೊಂದಿಗೆ ಹಂಚಿಕೊಳ್ಳಲಾಗಿದೆ ಮತ್ತು ‘ಈ ಸಂಭಾವಿತ ವ್ಯಕ್ತಿ ರೈಲು ನಿಲ್ಲಿಸಿ ಮೀನು ಖರೀದಿಸಲು ಹೋಗಿದ್ದ’ ಎಂಬ ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಕೇವಲ 44 ಸೆಕೆಂಡ್ಗಳ ಈ ವೀಡಿಯೋವನ್ನ ಇಲ್ಲಿಯವರೆಗೆ 27 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದ್ದು, ನೂರಾರು ಮಂದಿ ಲೈಕ್ ಮಾಡಿದ್ದಾರೆ.
PM Modi Mother Health Update : ಪ್ರಧಾನಿ ಮೋದಿ ತಾಯಿ ಆರೋಗ್ಯ ಸ್ಥಿರವಾಗಿದೆ : ಯುಎನ್ ಮೆಹ್ತಾ ಆಸ್ಪತ್ರೆ ಮಾಹಿತಿ
JOB ALERT : ಉದ್ಯೋಗಾಂಕ್ಷಿಗಳೇ ಗಮನಿಸಿ : ಮೈಸೂರು ಜಿಲ್ಲಾ ಪಂಚಾಯತ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
BREAKING NEWS : ಮೋದಿ ತಾಯಿ ‘ಹೀರಾಬೆನ್’ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ಪ್ರಧಾನಿ ಭೇಟಿ |Heeraben Modi