ಕೆಎನ್ಎನ್ಡಿಜಿಟಲ್ ಡೆಸ್ಕ್ : ಕಾಮನ್ವೆಲ್ತ್ ಗೇಮ್ಸ್ 2022ರಲ್ಲಿ ನಡೆದ ಶೂಟೌಟ್ನಲ್ಲಿ ನ್ಯೂಜಿಲೆಂಡ್ ತಂಡವನ್ನ 2-1 ಗೋಲುಗಳಿಂದ ಸೋಲಿಸಿದ ನಂತರ ಭಾರತೀಯ ಮಹಿಳಾ ಹಾಕಿ ತಂಡವು ಭಾನುವಾರ ಕಂಚಿನ ಪದಕವನ್ನ ಗೆದ್ದುಕೊಂಡಿತು. ಮಹಿಳಾ ಹಾಕಿಯಲ್ಲಿ ಐತಿಹಾಸಿಕ ಕಂಚಿನ ಪದಕ ಗೆದ್ದ ನಂತರ, ಭಾರತೀಯ ಆಟಗಾರ್ತಿಯರ ಡ್ರೆಸ್ಸಿಂಗ್ ರೂಮ್ ಸಂಭ್ರಮಾಚರಣೆ ಅಭಿಮಾನಿಗಳ ಗಮನ ಸೆಳೆದಿವೆ.
ಹೌದು, ಟ್ವಿಟರ್ನಲ್ಲಿ ಜೀ ನ್ಯೂಸ್ ಹಂಚಿಕೊಂಡಿರುವ ವಿಡಿಯೋದಿಂದ ಕಂಚಿನ ಪದಕ ಗೆದ್ದ ನಂತ್ರ ನಮ್ಮ ಆಟಗಾರ್ತಿಯರು ಹೇಗೆ ನೃತ್ಯ ಮಾಡಿ, ಸಂಭ್ರಮಿಸಿದರು ಅನ್ನೋದನ್ನ ನೋಡಬೋದು. ಅಂದ್ಹಾಗೆ, ವನಿತೆಯರು ದೇಶಭಕ್ತಿ ಬಾಲಿವುಡ್ ಹಾಡುಗಳಿಗೆ ನೃತ್ಯ ಮಾಡಿದರು.
ಶನಿವಾರ ನಡೆದ ಸೆಮಿಫೈನಲ್ʼನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ನೋವಿನ ವಿವಾದಾತ್ಮಕ ಸೋಲಿನಿಂದ ಕಣ್ಣಿರಿಟ್ಟಿದ್ದ ಭಾರತೀಯ ಮಹಿಳೆಯರ ನೃತ್ಯ ನೋಡೋದಕ್ಕೆ ಖುಷಿಯಾಗ್ತಿದೆ ಎಂದು ನೆಟ್ಟಿಗರು ಸಂತಸ ವ್ಯಕ್ತ ಪಡಿಸಿದ್ದಾರೆ.
ವಿಡಿಯೋ ನೋಡಿ..!
सबसे आगे हिंदुस्तानी…जीत के बाद महिला हॉकी टीम ने जमकर मनाया जश्न #CWG2022 @kiri_chopra pic.twitter.com/K6gZrHjNie
— Zee News (@ZeeNews) August 7, 2022