ಬೀಜಿಂಗ್ : ಚೀನಾದಲ್ಲಿ ಕೊರೊನಾ ವೈರಸ್ ಪ್ರಕರಣಗಳು ವೇಗವಾಗಿ ಹರಡುತ್ತಿದ್ದು, ವೈರಸ್ನಿಂದ ತಮ್ಮನ್ನ ತಾವು ರಕ್ಷಿಸಿಕೊಳ್ಳಲು ಜನರು ಹಲವಾರು ಮುನ್ನೆಚ್ಚರಿಕೆಗಳನ್ನ ತೆಗೆದುಕೊಳ್ಳುತ್ತಿದ್ದಾರೆ. ಮಾರಣಾಂತಿಕ ವೈರಸ್’ನಿಂದ ಪ್ರಭಾವಿತರಾಗುವುದನ್ನ ತಪ್ಪಿಸಲು ಚೀನಾದ ದಂಪತಿಗಳು ವಿನೂತನ ಉಪಾಯವನ್ನ ಮಾಡಿದ್ದಾರೆ. ಹೌದು, ಈ ದಂಪತಿಗಳು ಕೊರೊನಾದಿಂದ ಪಾರಾಗಲು ಬೃಹತ್ ಛತ್ರಿಯನ್ನ ಗುರಾಣಿಯಾಗಿ ಬಳಸಿದ್ದಾರೆ. ಸಧ್ಯ ಈ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಅಂದ್ಹಾಗೆ, ದಂಪತಿಗಳಿಬ್ಬರೂ ಈ ಬೃಹತ್ ಛತ್ರಿಯಲ್ಲಿ ಶಾಪಿಂಗ್ ಮಾಡುತ್ತಿದ್ದಾರೆ.
ಈ ಬೃಹತ್ ಪ್ಲಾಸ್ಟಿಕ್ ಛತ್ರಿ ದಂಪತಿಯ ಪಾದಗಳನ್ನ ಕೂಡ ಮುಚ್ಚಿದೆ. ಚೈನೀಸ್ ದಂಪತಿಗಳು ಮಾರುಕಟ್ಟೆಯಲ್ಲಿ ಸರಕುಗಳನ್ನ ಖರೀದಿಸಲು ವಿಶಿಷ್ಟವಾದ ಛತ್ರಿಯೊಂದಿಗೆ ಹೆಜ್ಜೆ ಹಾಕುವ ವೀಡಿಯೊವನ್ನ ಹಂಚಿಕೊಳ್ಳುವ ಮೂಲಕ ಮುಂದಿನ ಹಂತಕ್ಕೆ ಸ್ವಯಂ-ರಕ್ಷಣೆಯನ್ನ ತೆಗೆದುಕೊಂಡಿದ್ದಾರೆ ಎಂದು ಪೋಸ್ಟ್ಗೆ ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋವನ್ನ ಇದುವರೆಗೆ 83,000ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
ಈ ಛತ್ರಿ ಮಳೆಯಿಂದಲೂ ರಕ್ಷಿಸುತ್ತದೆ ಎಂದು ಹಲವು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಆದ್ರೆ, ಇನ್ನು ಕೆಲವರು ಲೋಕಲ್ ರೈಲು, ಬಸ್’ಗಳಂತಹ ಜನನಿಬಿಡ ಪ್ರದೇಶಗಳಲ್ಲಿ ಈ ರೀತಿಯ ಕೊಡೆ ಬಳಸುವಂತಿಲ್ಲ ಎಂದು ಬರೆದುಕೊಂಡಿದ್ದಾರೆ. ಮತ್ತೊಂದೆಡೆ, ಕೊರೊನಾ ಪ್ರಕರಣಗಳು ದೊಡ್ಡ ಪ್ರಮಾಣದಲ್ಲಿ ಬೆಳಕಿಗೆ ಬರುತ್ತಿದ್ದಂತೆ, ಚೀನಾ, ದಕ್ಷಿಣ ಕೊರಿಯಾ, ಜಪಾನ್, ಥಾಯ್ಲೆಂಡ್ ಮತ್ತು ಹಾಂಗ್ ಕಾಂಗ್ನಿಂದ ಬರುವ ಅಂತರರಾಷ್ಟ್ರೀಯ ಪ್ರಯಾಣಿಕರಿಗೆ RTPCR ಪರೀಕ್ಷೆಯನ್ನ ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ವೈರಲ್ ವಿಡಿಯೋ ನೋಡಿ.!
A Chinese couple takes self-protection to another level… pic.twitter.com/ovPlIaAeZg
— People's Daily, China (@PDChina) December 22, 2022
BIGG NEWS : ಬೆಳಗಾವಿ ಗಡಿ ವಿವಾದ : ‘ಮಹಾ’ ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ‘ಖಂಡನಾ ನಿರ್ಣಯ’ ಅಂಗೀಕಾರ