ಕೆಎನ್ಎನ್ಡಿಜಿಟಲ್ ಡೆಸ್ಕ್ : ಕೇರಳದ ಪವಾಡ ಸದೃಶ ಘಟನೆಯೊಂದು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದು ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಕೇರಳದ ಮಲಪ್ಪುರಂನ ಮನೆಯೊಂದರ ಹೊರಗಿನ ಸಿಸಿಟಿವಿ ವೀಡಿಯೋದಲ್ಲಿ ವ್ಯಕ್ತಿಯೊಬ್ಬ ತನ್ನ ಕಿರಿಯ ಸಹೋದರನನ್ನ ಟೆರೇಸ್ನಿಂದ ಕೆಳಗೆ ಬೀಳುತ್ತಿದ್ದಂತೆ ಹಿಡಿದಿರುವುದನ್ನ ತೋರಿಸಲಾಗಿದೆ.
ಯುವಕ ಟೆರೇಸ್ʼನ್ನ ಸ್ವಚ್ಛಗೊಳಿಸುತ್ತಿದ್ದಾಗ ಆತನ ಹಿರಿಯ ಸಹೋದರ ಕೆಳಗಿನಿಂದ ಟೆರೇಸ್ ಮೇಲಿನ ಕೊಳವೆಯಿಂದ ನೀರನ್ನ ಸಿಂಪಡಿಸುತ್ತಿದ್ದ. ಆಗ ಕೆಳಗಿದ್ದ ಅಣ್ಣ ಮೇಲೆ ಪೈಪ್ ಎಸೆದಿದ್ದು, ಅದನ್ನ ಹಿಡಿಯಲು ಹೋದ ತಮ್ಮ ಕಾಲು ಜಾರಿದ್ದಾನೆ. ಆಗ ಅಣ್ಣ ತನ್ನ ಸಹೋದರನನ್ನ ಹಿಡಿಯಲು ಪ್ರಯತ್ನಿಸುವ ಮೂಲಕ ತನ್ನ ಜೀವವನ್ನ ಪಣಕ್ಕಿಡುತ್ತಿದ್ದನು.
ಟೆರೇಸ್ನಿಂದತನ್ನ ಸಹೋದರನನ್ನ ಹೇಗೋ ಹಿಡಿಯುವಲ್ಲಿ ಅಣ್ಣ ಯಶಸ್ವಿಯಾಗಿದ್ದು, ಅವರಿಬ್ಬರೂ ನೆಲದ ಮೇಲೆ ಬೀಳುತ್ತಾನೆ. ಆದ್ರೆ, ದೃಶ್ಯದಲ್ಲಿ ತಮ್ಮನನ್ನ ಹಿಡಿಯುವಾಗ ಅಣ್ಣನ ತಲೆಗೆ ಏಟು ಬಿದ್ದಂತೆ ಕಾಣುತ್ತೆ. ಆಗ ಒಡಹುಟ್ಟಿದವ ಚೆನ್ನಾಗಿದ್ದಾನೆಯೇ? ಎಂದು ಪರಿಶೀಲಿಸುವುದನ್ನ ಕಾಣಬಹುದು. ವರದಿಗಳ ಪ್ರಕಾರ, ಘಟನೆಯಲ್ಲಿ ಇಬ್ಬರಲ್ಲಿ ಯಾರೊಬ್ಬರೂ ಗಾಯಗೊಂಡಿಲ್ಲ.
ವೈರಲ್ ವೀಡಿಯೋ ನೋಡಿ..!
— Vishal Dharm (@VishalDharm1) August 3, 2022