ಕೆಎನ್ಎನ್ಡಿಜಿಟಲ್ ಡೆಸ್ಕ್ : ಮದುವೆಗಳ ಸೀಸನ್ ಶುರುವಾಗಿದ್ದು, ವಧುವಿನ ಮೇಕಪ್ನಿಂದ ಹಿಡಿದು ಮದುವೆಯ ಮಂಟಪಗಳು ಮತ್ತು ವಧುವಿನ ಬೀಳ್ಕೊಡುಗೆಯವರೆಗಿನ ವೀಡಿಯೊಗಳು ಆಗಾಗ್ಗೆ ವೈರಲ್ ಆಗುತ್ತಿವೆ. ಅನೇಕ ವೀಡಿಯೊಗಳು ತುಂಬಾ ತಮಾಷೆಯಾಗಿದ್ರೆ, ಇನ್ನು ಕೆಲವೊಂದಿಷ್ಟು ವೀಡಿಯೋಗಳು ಜನರನ್ನ ಭಾವನಾತ್ಮಕವಾಗಿಸುತ್ವೆ. ಇನ್ನು ಕೆಲವೊಮ್ಮೆ ಕೆಲವು ವೀಡಿಯೋಗಳು ಬಹಳಷ್ಟು ಆಶ್ಚರ್ಯವನ್ನುಂಟು ಮಾಡುತ್ತವೆ. ಇದೀಗ ಇಂತಹದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಇನ್ನು ನೀವು ವಧು-ವರರು ಮಾಲೆ ಬದಲಾಯಿಸೋದನ್ನ ಅಥ್ವಾ ವೇದಿಕೆಯಲ್ಲಿ ನೃತ್ಯ ಮಾಡುವುದನ್ನ ನೀವು ನೋಡಿರಬೇಕು. ಆದ್ರೆ, ವಧು-ವರರು ವೇದಿಕೆಯಲ್ಲಿ ಹುಕ್ಕಾ ಸೇದುವುದನ್ನ ನೀವು ನೋಡಿದ್ದೀರಾ? ಹೌದು, ಈ ವೀಡಿಯೋದಲ್ಲಿ ಕಾಣಿಸುತ್ತಿದೆ.
ಹೊರ ದೇಶಗಳಲ್ಲಿ ಮದುವೆಯಲ್ಲಿ ವಧು-ವರರು ಪರಸ್ಪರ ಮುತ್ತು ಕೊಡುವುದು ಸಾಮಾನ್ಯ. ಆದ್ರೆ, ಭಾರತದಲ್ಲಿ ಇದು ಸಂಪ್ರದಾಯವಲ್ಲ, ಆದರೆ ಈ ವೈರಲ್ ವೀಡಿಯೋದಲ್ಲಿ ಅಂತಹದ್ದೇ ಒಂದು ದೃಶ್ಯ ಕಂಡುಬಂದಿದೆ. ಇದಕ್ಕೆ ಸಾಕ್ಷಿಯಾದ ಅತಿಥಿಗಳು ಮಾತ್ರವಲ್ಲ ವಿಡಿಯೋ ನೋಡಿದ ಜನರು ಕೂಡ ಶಾಕ್ ಆಗಿದ್ದಾರೆ. ವೀಡಿಯೋದಲ್ಲಿ ವಧು-ವರರು ವೇದಿಕೆಯ ಮೇಲೆ ನಿಂತಿದ್ದು, ಅವರ ಮುಂದೆ ಹುಕ್ಕಾ ಕೂಡ ಇದ್ದು, ಅದರ ಪೈಪ್ ವಧುವಿನ ಕೈಯಲ್ಲಿದೆ. ಹುಕ್ಕಾ ಸೇದುವಾಗ ವಧು ತನ್ನ ಬಾಯಿಯಲ್ಲಿ ಬಹಳಷ್ಟು ಹೊಗೆಯನ್ನ ತೆಗೆದುಕೊಳ್ಳುತ್ತಾಳೆ ಮತ್ತು ನಂತರ ವರನನ್ನು ಚುಂಬಿಸುವಾಗ ಆ ಹೊಗೆಯನ್ನು ಅವನ ಬಾಯಿಯಲ್ಲಿ ಬಿಡುತ್ತಾಳೆ. ನಿಸ್ಸಂಶಯವಾಗಿ ಮದುವೆಗೆ ಬಂದಿದ್ದ ಅತಿಥಿಗಳು ಇದನ್ನು ನೋಡಿ ಬೆಚ್ಚಿ ಬೀಳುವಂತಾಗಿದೆ. ಮದುವೆಯ ದಿನ ಯಾರು ಹುಕ್ಕಾ ಸೇದುತ್ತಾರೆ ಮತ್ತು ಅದು ಕೂಡ ವಧುವರರು. ಇದು ಸಾಕಷ್ಟು ಅನಿರೀಕ್ಷಿತ ಘಟನೆಯಾಗಿದೆ.
https://www.instagram.com/reel/Cllp8CojqnO/?utm_source=ig_web_copy_link
SKIN CARE : ಆರೋಗ್ಯಕರ ಚರ್ಮಕ್ಕಾಗಿ ಹಣ್ಣಿಗಳಿಂದ ತಯಾರಿಸಿದ ಸ್ಮೂಥಿ ಪರಿಣಾಮಕಾರಿ, ಒಮ್ಮೆ ಟ್ತೈ ಮಾಡಿ | smoothie
JOB ALERT : ‘ಪದವಿ’ ಪಾಸಾದವರಿಗೆ ಬಂಪರ್ ಸುದ್ದಿ : ನವಮಂಗಳೂರು ಬಂದರಿನಲ್ಲಿ ಉದ್ಯೋಗವಕಾಶ