ಕೆಎನ್ಎನ್ಡಿಜಿಟಲ್ ಡೆಸ್ಕ್ : ಬಡ ಜನತೆಗಾಗಿ ಸರ್ಕಾರ ಪಡಿತರ ವ್ಯವಸ್ಥೆಯನ್ನ ಜಾರಿಗೆ ತಂದಿದೆ. ಇದರಡಿಯಲ್ಲಿ ಬಡವರಿಗೆ ಉಚಿತವಾಗಿ ಆಹಾರ ಒದಗಿಸುತ್ತಿದೆ. ಆದ್ರೆ, ನಮ್ಮ ದೇಶದಲ್ಲಿ ಕೆಲವು ಜನರು ಸರ್ಕಾರಿ ಯೋಜನೆಗಳಿಗೆ ಅರ್ಹರಾಗಿದಿದ್ರೂ ಉದ್ಯೋಗ ಮತ್ತು ಇತರ ಆಸ್ತಿಗಳನ್ನ ಹೊಂದಿದ್ರೂ ಸರ್ಕಾರದ ಯೋಜನೆಯ ಲಾಭ ಪಡೆಯುತ್ತಾರೆ. ಇನ್ನು ಸರ್ಕಾರದ ಯೋಜನೆಗಳನ್ನ ಸ್ವಯಂಪ್ರೇರಣೆಯಿಂದ ನಿರಾಕರಿಸುವವರೂ ಇದ್ದಾರೆ. ಆದರೆ, ದುರಾಸೆಯುಳ್ಳ ಕೆಲವರು ಸರ್ಕಾರ ನೀಡುವ ಯೋಜನೆಗಳಲ್ಲಿ ಲಾಭ ಗಳಿಸಲು ಪ್ರಯತ್ನಿಸುತ್ತಿದ್ದಾರೆ. ಸಧ್ಯ ಇಂತಹದ್ದೇ ಒಂದು ಘಟನೆ ವೈರಲ್ ಆಗಿದೆ.
ಪಂಜಾಬ್ನಲ್ಲಿ ನಡೆದ ಘಟನೆಯೊಂದು ಈಗ ಸಾಮಾಜಿಕ ಮಾಧ್ಯಮದಲ್ಲಿ ಕೋಲಾಹಲವನ್ನು ಸೃಷ್ಟಿಸಿದೆ. ಪಂಜಾಬ್ ಸರ್ಕಾರವು ಬಡವರಿಗೆ, ಬಿಳಿ ಪಡಿತರ ಚೀಟಿ ಹೊಂದಿರುವವರಿಗೆ ಪ್ರತಿ ತಿಂಗಳು ಕೆಜಿ ಗೋಧಿ ಹಿಟ್ಟು ಮತ್ತು ವಿವಿಧ ಸರಕುಗಳನ್ನ ಉಚಿತವಾಗಿ ನೀಡುತ್ತದೆ. ಈ ಮಧ್ಯೆ ರಮೇಶ್ ಕುಮಾರ್ ಸೈನಿ ಅನ್ನೋವವರು ಮರ್ಸಿಡಿಸ್ ಕಾರಿನಲ್ಲಿ ಹೋಶಿಯಾರ್ಪುರದ ಸ್ಥಳೀಯ ಪಡಿತರ ಅಂಗಡಿಗೆ ಬಂದು, ಸಾಲಿನಲ್ಲಿ ನಿಂತು ತಮ್ಮ ಪಡಿರ ಪಡೆದಿದ್ದಾರೆ. ನಂತ್ರ ಆ ಕಾರಿನ ಡಿಕ್ಕಿಯಲ್ಲಿ ಹಾಕಿದ್ದನ್ನ ಕಂಡು ಕೆಲವು ಸ್ಥಳೀಯರು ಆಘಾತಕ್ಕೊಳಗಾದರು. ಬೆಂಜ್ ಕಾರಿನಲ್ಲಿ ಬಂದ್ರೆ ಬಡಪಾಯಿ ಹೇಗಾಗುತ್ತಾನೆ ಎಂದು ಪ್ರಶ್ನಿಸುತ್ತಿದ್ದಾರೆ.
ಈ ಘಟನೆಯನ್ನು ಸೆಲ್ ಫೋನ್ʼಗಳಲ್ಲಿ ರೆಕಾರ್ಡ್ ಮಾಡಲಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿದೆ. ಸಧ್ಯ ಇದು ವೈರಲ್ ಆಗಿದೆ.
#Punjab person arrived in a Mercedes to buy free wheat under the Ata Dal scheme by Punjab Government. A video of #Hoshiarpur Naloyan Chowk is going viral @PMOIndia @NirmalaSitharaman @CMOPb @AamAadmiParty @ArvindKejriwal pic.twitter.com/7gFy589QAH
— ASHOK VEMULAPALLI (@ashuvemulapalli) September 6, 2022