ಕೆಎನ್ಎನ್ಡಿಜಿಟಲ್ ಡೆಸ್ಕ್ : ಏಷ್ಯಾ ಕಪ್ 2022 ಯುಎಇಯಲ್ಲಿ ಆಗಸ್ಟ್ 27 ರಿಂದ ಪ್ರಾರಂಭವಾಗಲಿದ್ದು, ಏಷ್ಯಾದ ದೊಡ್ಡ ತಂಡಗಳು ಮತ್ತು ದೊಡ್ಡ ಆಟಗಾರರು ದುಬೈನಲ್ಲಿ ಟೂರ್ನಮೆಂಟ್ಗೆ ಹಾಜರಾಗಿದ್ದಾರೆ. ನಿಸ್ಸಂಶಯವಾಗಿ ಇದು ಅಭಿಮಾನಿಗಳಿಗೆ ಸಂಭ್ರಮಕ್ಕಿಂತ ಕಡಿಮೆಯಿಲ್ಲ. ಅವರು ತಮ್ಮ ನೆಚ್ಚಿನ ಕ್ರಿಕೆಟಿಗರನ್ನು ಭೇಟಿ ಮಾಡುವ ಅವಕಾಶವನ್ನ ಕಳೆದುಕೊಳ್ಳುವುದಿಲ್ಲ. ನಿರೀಕ್ಷೆಯಂತೆ, ಭಾರತದ ಮಾಜಿ ನಾಯಕ ಮತ್ತು ದಿಗ್ಗಜ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಅವರನ್ನ ಭೇಟಿ ಮಾಡಲು ಅಭಿಮಾನಿಗಳು ಹೆಚ್ಚು ಉತ್ಸುಕರಾಗಿದ್ದಾರೆ.
ಬಾಬರ್ ಊರಿನ ಹುಡುಗ, ಕೊಹ್ಲಿ ಅಭಿಮಾನಿ.!
ಅಂತಹ ಉತ್ಸಾಹಿ ಕ್ರಿಕೆಟ್ ಅಭಿಮಾನಿಯೊಬ್ಬರಿಗೆ ವಿರಾಟ್ ಕೊಹ್ಲಿಯನ್ನ ಭೇಟಿಯಾಗುವ ಅವಕಾಶ ಸಿಕ್ಕಿದೆ. ಈ ಅಭಿಮಾನಿ ವಿರಾಟ್ ಕೊಹ್ಲಿ ಆದಷ್ಟು ಬೇಗ ಫಾರ್ಮ್ಗೆ ಮರಳುವುದನ್ನ ನೋಡಲು ಬಯಸುತ್ತಾರೆ ಮತ್ತು ಕೊಹ್ಲಿ ಪಾಕಿಸ್ತಾನದ ವಿರುದ್ಧ ಅರ್ಧಶತಕ ಗಳಿಸುತ್ತಾರೆ ಎಂದು ನಂಬುತ್ತಾರೆ. ಇದರಲ್ಲೇನು ವಿಶೇಷ.? ಎಂದು ನೀವು ಯೋಚಿಸುತ್ತಿದ್ದೀರಾ.? ಈ ಅಭಿಮಾನಿ ಭಾರತೀಯನಲ್ಲ ಬದಲಾಗಿ ಪಾಕಿಸ್ತಾನದವನು. ಅದರಲ್ಲಿಯೂ ಪಾಕಿಸ್ತಾನದ ನಾಯಕ ಬಾಬರ್ ಆಜಮ್ ನಗರ ಲಾಹೋರ್ಗೆ ಸೇರಿದವನು.
ವಿರಾಟ್ ಕೊಹ್ಲಿಯನ್ನ ಭೇಟಿಯಾಗುವ ಕನಸು ನನಸು
ದುಬೈನಲ್ಲಿ ವಿರಾಟ್ ಕೊಹ್ಲಿಯನ್ನು ಭೇಟಿ ಮಾಡಲು ಲಾಹೋರ್ನ ಮೊಹಮ್ಮದ್ ಗಿಬ್ರಾನ್ ಅನ್ನೋ ಯುವಕ ತಮ್ಮ ಎಲ್ಲಾ ಪ್ರಯತ್ನಗಳ ನಂತ್ರ ಕೊಹ್ಲಿ ಜೊತೆ ಫೋಟೋಗೆ ಪೋಸ್ ನೀಡಿದ್ದಾನೆ. ಯೂಟ್ಯೂಬ್ ಚಾನೆಲ್ವೊಂದು ಕೊಹ್ಲಿಯನ್ನ ಭೇಟಿ ಮಾಡಲು ಅಂತಿಮವಾಗಿ ಯಶಸ್ವಿಯಾದ ಈ ಅಭಿಮಾನಿಯ ವೀಡಿಯೊವನ್ನ ಪೋಸ್ಟ್ ಮಾಡಿದೆ. ದುಬೈನ ಐಸಿಸಿ ಅಕಾಡೆಮಿಯಲ್ಲಿ ಭಾರತ ತಂಡದ ಅಭ್ಯಾಸದ ಅವಧಿ ಮುಗಿದ ನಂತರ, ಈ ಅಭಿಮಾನಿ ಕೊಹ್ಲಿಯನ್ನ ಹಿಂಬಾಲಿಸಿ ಅವರನ್ನ ತಲುಪಲು ಪ್ರಯತ್ನಿಸುತ್ತಿದ್ದ. ಆದ್ರೆ, ಭದ್ರತಾ ಸಿಬ್ಬಂದಿ ಆತನನ್ನ ತಡೆದರು. ಆದರೆ, ಸ್ವಲ್ಪ ಸಮಯದ ನಂತರ ಕೊಹ್ಲಿ ಈ ಅಭಿಮಾನಿಯನ್ನು ಭೇಟಿಯಾಗಿ ಆತನ ಆಸೆಯನ್ನ ಪೂರೈಸಿದರು.
ಪಾಕಿಸ್ತಾನದ ವಿರುದ್ಧ ಅಬ್ಬರದ ನಿರೀಕ್ಷೆ
ತಾನು ಕೊಹ್ಲಿ ಮತ್ತು ಭಾರತ ತಂಡದ ದೊಡ್ಡ ಅಭಿಮಾನಿ ಎಂದು ಗಿಬ್ರಾನ್ ಹೇಳಿದ್ದಾರೆ. ಜಗತ್ತಿನಲ್ಲಿ ಕೊಹ್ಲಿಗಿಂತ ಬೇರೆ ಬ್ಯಾಟ್ಸ್ಮನ್ ಇಲ್ಲ. ಕೇವಲ ಕೊಹ್ಲಿಯನ್ನ ನೋಡಲು ಮತ್ತು ಭೇಟಿಯಾಗಲು ಪಾಕಿಸ್ತಾನದಿಂದ ಬಂದಿದ್ದೇನೆ ಎಂದು ಜಿಬ್ರಾನ್ ಹೇಳಿದ್ದಾರೆ. ಕೊಹ್ಲಿ ಉತ್ತಮ ಕ್ರಿಕೆಟಿಗ ಹಾಗೂ ಒಳ್ಳೆಯ ವ್ಯಕ್ತಿ ಎಂದು ಗಿಬ್ರಾನ್ ಹೇಳಿದ್ದು, ಅವರ ಆಸೆ ಈಡೇರಿದೆ. ಇಷ್ಟೇ ಅಲ್ಲ, ತಾನು ಪಾಕಿಸ್ತಾನಿ ಆಟಗಾರರೊಂದಿಗೆ ಎಂದಿಗೂ ಫೋಟೋ ತೆಗೆದುಕೊಂಡಿಲ್ಲ ಮತ್ತು ಭಾರತೀಯ ಆಟಗಾರರೊಂದಿಗೆ ಮಾತ್ರ ಫೋಟೋ ತೆಗೆಸಿಕೊಳ್ಳಲು ಬಯಸಿದ್ದೇನೆ ಎಂದು ಗಿಬ್ರಾನ್ ಹೇಳಿದ್ದಾರೆ. ಅಲ್ಲದೇ ಕೊಹ್ಲಿ ಪಾಕಿಸ್ತಾನದ ವಿರುದ್ಧ ಫಾರ್ಮ್ಗೆ ಬರುತ್ತಾರೆ ಮತ್ತು ಪಾಕಿಸ್ತಾನದ ವಿರುದ್ಧ 50ಕ್ಕೂ ಹೆಚ್ಚು ರನ್ ಗಳಿಸುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.